ಶಿವಮೊಗ್ಗ: ದ್ವಿತೀಯ ಮೃತ್ತಿಕಾ ಬೃಂದಾವನವೆಂದು ಪ್ರಸಿದ್ಧಿ ಹೊಂದಿರುವ ಉಡುಗಣಿ ರಾಘವೇಂದ್ರ ಸ್ವಾಮಿಗಳ ಮೂಲ ಮೃತಿಕಾ ಬೃಂದಾವನಕ್ಕೆ ಹೊಸ ಸ್ವರೂಪ ಸಿಕ್ಕಿದೆ.
ಇಲ್ಲಿನ ಮುಖ್ಯ ಪ್ರಾಣ ದೇವರು ಹಾಗೂ ಚೆನ್ನಕೇಶವ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯ ಭಾನುವಾರ ನಡೆಯಲಿದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು ಪುನರ್ ಪ್ರತಿಷ್ಠಾಪನೆಗೆ ಕೈಗೊಳ್ಳಲಿದ್ದಾರೆ. ಶನಿವಾರ ಸಂಜೆ 5.30ಕ್ಕೆ ಉಡುಗಣಿಗೆ ಆಗಮಿಸಲಿರುವ ಅವರು, ಭಾನುವಾರ ಬೆಳಗ್ಗೆ 8.30 ರ ಸುಮಾರಿಗೆ ದೇವರ ಪುನರ್ ಪ್ರತಿಷ್ಠಾಪನೆ ಕೈಗೊಳ್ಳಲಿದ್ದಾರೆ.
ಹೆಚ್ಚಿನ ಓದಿಗಾಗಿ | ಆನಂದಪುರದಲ್ಲಿ ಸಾಂಪ್ರದಾಯಿಕ ಮೀನು ಶಿಕಾರಿ
ಈ ಮಠದ ಅಭಿವೃದ್ಧಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಖುದ್ದು ಆಸಕ್ತಿ ತೋರಿಸಿ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದ್ದರು. ತಂದೆಯ ಅಣತಿಯಂತೆ ಸಂಸದ ಬಿ.ವೈ. ರಾಘವೇಂದ್ರ, ಮಠದ ಅಭಿವೃದ್ಧಿ ಕಾಮಗಾರಿಗಳ ಉಸ್ತುವಾರಿ ವಹಿಸಿದ್ದರು. ಪ್ರತಿಫಲವಾಗಿ ನೂತನವಾಗಿ ರೂಪ ಪಡೆದುಕೊಂಡಿರುವ ಮಠ ಹಾಗೂ ವಸತಿಗೃಹಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕಾರ್ಯಕ್ರಮವನ್ನು ಮಾಜಿ ಸಿಎಂ ಬಿಎಸ್ವೈ ಉದ್ಘಾಟಿಸಲಿದ್ದಾರೆ.