Site icon Vistara News

ಗೃಹ ಸಚಿವರ ಕ್ಷೇತ್ರದಲ್ಲಿ ಸೂಕ್ತ ರಸ್ತೆಯಿಲ್ಲದೆ ನೀರಿನಲ್ಲೆ ಶವ ಹೊತ್ತು ಸಾಗಿದ ಜನ

ಗೃಹಸಚಿವರ

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಶವಸಂಸ್ಕಾರಕ್ಕೆ ತೆರಳಲು ರಸ್ತೆಯಿಲ್ಲದೇ ಜನರು ಪರದಾಡುವಂತಾಗಿದೆ. ಸ್ಮಶಾನದ ರಸ್ತೆ ಜಲಾವೃತವಾದ ಹಿನ್ನೆಲೆಯಲ್ಲಿ ಜನರು ಶವವನ್ನು ನೀರಿನಲ್ಲೇ ಹೊತ್ತು ಸಾಗಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಡ್ಲು ಗ್ರಾಮದಲ್ಲಿ ನಡೆದಿದೆ.

ಕೋಡ್ಲು ಗ್ರಾಮದಲ್ಲಿ ತಮ್ಮಯ್ಯ ಗೌಡ(80) ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಹೀಗಾಗಿ ಗ್ರಾಮಸ್ಥರು ಸ್ಮಶಾನಕ್ಕೆ ತೆರಳಬೇಕಾಗಿತ್ತು. ಆದರೆ ಸ್ಮಶಾನಕ್ಕೆ ಸೂಕ್ತ ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೀರಿನಲ್ಲೇ ಶವವನ್ನು ಹೊತ್ತು ಸಾಗಿ, ಸುರಿವ ಮಳೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಾಯಿತು.

ಪ್ರತಿ ಬಾರಿ ಮಳೆಗಾಲದಲ್ಲಿ 4-5 ತಿಂಗಳು ಮಳೆ ನೀರಿನಿಂದ ಸ್ಮಶಾನ ರಸ್ತೆ ಮುಳುಗಡೆಯಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಅಂತ್ಯಕ್ರಿಯೆ ನಡೆಸಲು ಕೋಡ್ಲು ಗ್ರಾಮಸ್ಥರು ಪರದಾಡಬೇಕಾಗಿದೆ. ಸ್ಮಶಾನಕ್ಕೆ ಎತ್ತರಿಸಿದ ರಸ್ತೆ ಮಾಡುವಂತೆ ಹಲವು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Heavy Rain | ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಚಾವಣಿ ಕುಸಿತ, ಪಂಚಾಯಿತಿ ಕಟ್ಟದ ನೆಲಸಮ

Exit mobile version