ಶಿರಸಿ: ಬಿಜೆಪಿ (BJP) ಮುಖಂಡ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿಕೆಗೆ ಸ್ವತಃ ಬಿಜೆಪಿ ಪಕ್ಷ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ (MLA Shivaram Hebbar) ಈಶ್ಚರಪ್ಪ ವಿರುದ್ದ ಗರಂಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ಇಲಾಖೆ ಪ್ರವಾಸ ಮಂದಿರದಲ್ಲಿ ಸುದ್ದಿಗೋಷ್ಠಿ ವೇಳೆ ಈಶ್ವರಪ್ಪ ವಿರುದ್ದ ಕಿಡಿಕಾರಿದ್ದಾರೆ. ಕಾಂಗ್ರೆಸ್ (Congress Party) ಗಾಳಿ ಸೋಕಿದ್ದರಿಂದ ಬಿಜೆಪಿ ಪಕ್ಷದಲ್ಲಿ ಅಶಿಸ್ತು ಕಾಣಿಸಿಕೊಂಡಿದೆ. ನಮ್ಮ ಪಕ್ಷಕ್ಕೆ ಕೆಲವರು ಕಾಂಗ್ರೆಸ್ ನಿಂದ ಬಂದಿದ್ದಾರೆ. ಅಶಿಸ್ತು ತೋರಿದವರ ಬಾಲ ಕಟ್ ಮಾಡ್ತಿವಿ ಎಂಬ ಹೇಳಿಕೆ ನೀಡಿದ್ದ ಕೆ.ಎಸ್. ಈಶ್ವರಪ್ಪ ಮಾತಿಗೆ ಶಾಸಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sirsi News: ಶ್ರೀಮಾತೆ ಬಸವೇಶ್ವರಿ ಅವರನ್ನು ಏಕ ವಚನದಲ್ಲಿ ನಿಂದಿಸಿದ ಸಚಿವ ಶಿವರಾಮ್ ಹೆಬ್ಬಾರ್: ಭಕ್ತಾದಿಗಳಿಂದ ಆಕ್ರೋಶ
ಈಶ್ವರಪ್ಪ ಅವರು ಯಾಕಾಗಿ ಆ ರೀತಿ ಮಾತನಾಡಿದ್ರು ಗೊತ್ತಾಗಿಲ್ಲ. ಕೆಲವರಿಗೆ ಮಾತನಾಡುವ ಚಟ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ನಾವೇನು ಕಾರಣೀಭೂತರಲ್ಲ. ಯಾರಿಂದ ಅವರು ಮಂತ್ರಿಗಳಾಗಿದ್ದು..? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಯಾರಿಂದ..? ಯಾರ ತ್ಯಾಗದಿಂದ ಯಾರೆಲ್ಲ ಮಂತ್ರಿ ಆದ್ರು. ಅವರ ಮಂತ್ರಿ ಸ್ಥಾನ ಕಳೆದುಕೊಳ್ಳಲು ಯಾರು ಕಾರಣೀಭೂತರು ಅಂತಾ ಈಶ್ವರಪ್ಪ ಅವರು ಉತ್ತರ ಕಂಡುಕೊಳ್ಳಲಿ. ಅವರ ಮಾತನ್ನು ನಾವು ಖಂಡಿತ ಒಪ್ಪಿಕೊಳ್ಳಲ್ಲ. ನಾವು ನಡೆದು ಬಂದಂತ ದಾರಿ, ನಡೆಯಬೇಕಾದ ದಾರಿಗೆ ನಮ್ಮಲ್ಲಿ ಸ್ಪಷ್ಟತೆ ಇದೆ. ಬಾಲ ಕಟ್ ಮಾಡುವಂತಹ ಕೆಲಸ ನಾವು ಏನು ಮಾಡಿಲ್ಲ. ಮಾಡೋದು ಇಲ್ಲ. ಇಂತಹ ಶಬ್ಧ ಬಳಸುವಾಗ ಜವಾಬ್ದಾರಿಯು ಸ್ಥಾನದಲ್ಲಿರೋ ಹಿರಿಯ ಮುಖಂಡರು ಯೋಚಿಸಬೇಕಿದೆ. ಶಬ್ಧಗಳ ಬಳಕೆಯಲ್ಲಿ ಒಳ್ಳೆಯ ಶಬ್ಧವನ್ನ ಬಳಸುವ ಪರಿಪಾಠ ಇಟ್ಟುಕೊಂಡ್ರೆ ಅವರ ಆರೋಗ್ಯ ದೃಷ್ಠಿಯಿಂದ ಒಳ್ಳೆಯದು ಎಂದರು.
ಈ ಬಗ್ಗೆ ಜುಲೈ 3ರಂದು ಬೆಂಗಳೂರಿಗೆ ಹೋಗುತ್ತೇವೆ. ಆ ವೇಳೆ ಹೋದಂತಹ ಎಲ್ಲರೂ ಬೆಂಗಳೂರಲ್ಲಿ ಕೂತು ಚರ್ಚೆ ಮಾಡ್ತಿವಿ. ಇಂತಹ ಮಾತನ್ನ ಹೇಳಿಸಿಕೊಳ್ಳಲು ನಾವು ಸಮರ್ಥರಾ ಎನ್ನೋ ಚರ್ಚೆ ಮಾಡುತ್ತೇವೆ. ಆಮೇಲೆ ಈ ಬಗ್ಗೆ ರಿಯಾಕ್ಟ್ ಮಾಡ್ತಿವಿ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.