ಶಿರಸಿ: ಎಲ್ಲರೂ (Everyone) ನಿರಹಂಕಾರ ಭಾವ, ವಿನಯ ಬೆಳಸಿಕೊಳ್ಳಬೇಕು. ನಾನು ಎಂಬ ಭಾವ ಬಿಟ್ಟು, ನಾವೆಲ್ಲರೂ ಎಂಬ ಭಾವನೆ ಬೆಳೆಸಿಕೊಂಡರೆ ಭಕ್ತಿ ಬೆಳೆಯುತ್ತದೆ. ಭಕ್ತಿ (Bhakti) ಭಾವ ಬೆಳೆದರೆ ಅಹಂಕಾರ ಕಳೆಯುತ್ತದೆ. ಆಗ ಮೋಕ್ಷ ಸಾಧ್ಯ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಮಠದಲ್ಲಿ ಚಾತುರ್ಮಾಸ್ಯ ವ್ರತಾಚರಣೆಯ ಹಿನ್ನಲೆಯಲ್ಲಿ ತೋರಣಸಿ ಭಾಗದ ಶಿಷ್ಯ ಭಕ್ತರು ಸಲ್ಲಿಸಿದ ಗುರು ಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇದನ್ನೂ ಓದಿ: Weather Report : ಬೆಂಗಳೂರಲ್ಲಿ ತುಂತುರು, ಕರಾವಳಿಯಲ್ಲಿ ವ್ಯಾಪಕ ಮಳೆ
ನಿರಹಂಕಾರ ಎಂದರೆ ವಿನಯ. ಇದು ಬಹಳ ಮುಖ್ಯವಾದದ್ದು. ಅದು ಧರ್ಮದ ತಿರುಳು. ಅದಕ್ಕೆ ಮಹತ್ವದ ಸ್ಥಾನ ಇದೆ, ಭಕ್ತಿ ಸಾಧನೆ ಆಗುವುದೇ ಅಹಂಕಾರ ಕಡಿಮೆ ಆದಾಗ. ಸಂಪೂರ್ಣ ಅಹಂಕಾರ ತ್ಯಾಗವೇ ಮೋಕ್ಷ. ಸಾಧನೆ ಮಾರ್ಗದಲ್ಲಿ ನಿರಹಂಕಾರ ಭಾವ ಇರಬೇಕು ಎಂದರು.
ಅಹಂಕಾರ ಕಡಿಮೆ ಆದಷ್ಟು ನೆಮ್ಮದಿ. ಅಹಂಕಾರ ಹೆಚ್ಚಾದರೆ ಅನಾರೋಗ್ಯ ಜತೆ ಕೌಟುಂಬಿಕ ಸಮಸ್ಯೆ, ಕಲಹಗಳೂ ಉಂಟಾಗುತ್ತವೆ, ಸಾಮಾಜಿಕ ಸಮಸ್ಯೆಗಳೂ ಹೆಚ್ಚಾಗುತ್ತದೆ. ತೀವ್ರತೆ, ಘರ್ಷಣೆ ಆಗುತ್ತದೆ. ಆರೋಗ್ಯ, ಸಾಮಾರಸ್ಯ, ಮುಖ್ಯವಾಗಿ ಧರ್ಮ ಸಂರಕ್ಷಣೆಗೆ ನಿರಂಹಕಾರ ಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Kannada compulsary : CBSE, CISCE ಶಾಲೆಗಳಲ್ಲಿ ಕನ್ನಡ ಕಡ್ಡಾಯ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಈ ವೇಳೆ ಗುರುಪಾದ ಆರ್ ಹೆಗಡೆ ಹಲಸಿನಳ್ಳಿ, ಗಿರೀಶ ಭಟ್ಟ ಕರಸುಳ್ಳಿ, ಆರ್ ಎಸ್ ಹೆಗಡೆ ಬೈರುಂಬೆ, ಮಾತೆಯರು, ಇತರರು ಉಪಸ್ಥಿತರಿದ್ದರು.