Site icon Vistara News

Sirsi News: ವ್ಯಾಸ ಎಂದರೆ ವಿಸ್ತಾರ; ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀನಿವಾಸ್ ಹೆಬ್ಬಾರ್‌ಗೆ ಸನ್ಮಾನ

Shrinivas hebbar was felicitated by Shri Gangadharendra Saraswati swamiji

ಶಿರಸಿ, ಉತ್ತರ ಕನ್ನಡ: ವ್ಯಾಸ ಎಂದರೆ ವಿಸ್ತಾರ ಎಂದರ್ಥ. ವ್ಯಾಸ ಮಹರ್ಷಿಗಳು ವಿಸ್ತಾರವಾದ ವ್ಯಕ್ತಿತ್ವವುಳ್ಳವರು. ಗುರುವಾದವರು ತಪಸ್ಸು ಮಾಡಬೇಕು. ಪ್ರತಿಯೊಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗಳ ಬಗ್ಗೆ ತಪಸ್ಸು ಮಾಡಿದರೆ ವಿದ್ಯಾರ್ಥಿಗಳ ಜೀವನ ಉಜ್ವಲವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ (Shri sonda swarnavalli mutt) ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು (Shri Gangadharendra Saraswati swamiji) ನುಡಿದರು(Sirsi News).

ಸೋಂದಾ ಸ್ವರ್ಣವಲ್ಲಿ ಮಠದಲ್ಲಿ 33ನೇ ಚಾತುರ್ಮಾಸ್ಯ ವೃತ ಸಂಕಲ್ಪದ ಸಭಾಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ”ತಪ್ಪಸ್ಸಿನಿಂದ ಮನಸ್ಸು ವಿಶಾಲಗೊಳ್ಳುತ್ತದೆ. ಪ್ರತಿಯೊಬ್ಬರೂ ತಪ್ಪಸ್ಸು ಮಾಡುವ ಮೂಲಕ ಯಶಸ್ಸನ್ನು ಕಂಡುಕೊಳ್ಳಬಹುದು. ಗುರುವಾದವರೂ ತಪಸ್ಸು ಮಾಡುವುದು ವಿದ್ಯಾರ್ಥಿಗಳಿಗೆ ದಾರಿದೀಪ. ವ್ಯಾಸರು ಬರೆದ ಕಾವ್ಯಗಳು ಬಹಳ ಪ್ರಸಿದ್ದವಾಗಿದೆ. ಇದು ಪ್ರಪಂಚದ ಸಾಹಿತ್ಯ ಕ್ಷೇತ್ರಕ್ಕೆ ಅದ್ಬುತ ವಾದ ಕೊಡುಗೆಯಾಗಿದೆ. ಶಂಕರಾಚಾರ್ಯರು ಹಾಗೂ ವ್ಯಾಸರು ಬರೆದ ಗ್ರಂಥ ಗಳೇ ನಮ್ಮ ಧಾರ್ಮಿಕ ಪರಂಪರೆ ಗೆ ಮೂಲಾಧಾರವಾಗಿದೆ. ಹಿಂದೂ ಧರ್ಮಕ್ಕೆ ಇವರುಗಳ ಕೊಡುಗೆ ಅಪಾರವಾಗಿದೆ. ಹಿಂದೂ ಧರ್ಮದಲ್ಲಿ ಗುರುವಿಗೆ ಇರುವ ಮಹತ್ವ ಬೇರೆ ಯಾವ ಧರ್ಮದಲ್ಲೂ ಇಲ್ಲ. ಇದಿನ ಹಿಂದೂಗಳಿಗೆ ಪವಿತ್ರ ವಾದ ದಿನವಾಗಿದೆ. ಮೂರ್ತಿ ಪೂಜೆ ಇಲ್ಲದೆ ಭಕ್ತಿ ಬೆಳೆಯುವುದಿಲ್ಲ. ಭಕ್ತಿ ಇಲ್ಲದಿದ್ದರೆ ಪರಿಪೂರ್ಣ ಏಕಾಗ್ರತೆ ಬರುವುದಿಲ್ಲ. ಮೂರ್ತಿ ಪೂಜೆ ಮಾಡುವ ಮೂಲಕ ಭಕ್ತಿ ಮಾರ್ಗದಲ್ಲಿ ನಾವು ಮುನ್ನಡೆಯಬೇಕು. ಶ್ರೇಷ್ಠ ವಾದ ಹಿಂದೂಧರ್ಮವನ್ನು ಉಳಿಸಿ ಎಂದು ಹೇಳುವ ಸಮಯ ಬಂದಿದೆ. ಹಿಂದೂ ಧರ್ಮ ಬಹಳ ಕಷ್ಟದಲ್ಲಿದೆ. ಎಲ್ಲರೂ ಸೇರಿ ಸತ್ವ ಪರಿಪೂರ್ಣವಾದ ಧರ್ಮವನ್ನು ರಕ್ಷಿಸೋಣ” ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಳ್ಳಿ ಮಾತನಾಡಿ, ”ಆದರ್ಶ ವಾದ ಜೀವನಕ್ಕೆ ಮಠಗಳು ಗುರುಗಳ ಅವಶ್ಯಕತೆ ಇದೆ. ಸಮಾಜಕ್ಕೆ ದೊಡ್ಡ ಶಕ್ತಿಯನ್ನು ನೀಡಿದ ಪೀಠ ಸ್ವರ್ಣವಲ್ಲಿ ಪೀಠವಾಗಿದೆ. ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದೆ. ಗುರುಸೇವೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮವಾದ ಸಮಯವಾಗಿದೆ” ಎಂದರು.

Sirsi News: ಸ್ವರ್ಣವಲ್ಲಿ ಮಠದ ಶ್ರೀಗಳಿಗೆ ಭಕ್ತರಲ್ಲಿ ಅಪಾರ ಕಾಳಜಿ: ಶ್ರೀನಿವಾಸ್ ಹೆಬ್ಬಾರ್

ಸನ್ಮಾನ ಸ್ವೀಕರಿಸಿದ ಜೀವಜಲ ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್ ಮಾತನಾಡಿ, ”ಸ್ವರ್ಣವಲ್ಲಿ ಮಠದ ಶ್ರೀಗಳಿಗೆ ಭಕ್ತರಲ್ಲಿ ಅಪಾರ ಕಾಳಜಿ ಇದೆ. ಅಲ್ಲದೆ ಶ್ರೀಗಳ ಸನ್ನಿಧಾನ ಇನ್ನು ಹೆಚ್ಚು ಬೆಳೆಯಬೇಕೆಂಬ ಚಿಂತನೆ ಶ್ರೀಗಳಲ್ಲಿದೆ. ಪ್ರತಿಯೊಬ್ಬರಲ್ಲೂ ಮಾನವೀಯತೆ ಇರಬೇಕು. ಗಳಿಸಿದ ಹಣ ನಮಗೆ ಬೇಕೆಂಬ ಸ್ವಾರ್ಥ ಮನೋಭಾವ ಮರೆತು ಸಮಾಜಕ್ಕೆ ಒಳಿತು ಮಾಡಬೇಕಿದೆ. ಇದಕ್ಕೆಲ್ಲ ನಾವು ನಡೆದು ಬಂದ ದಾರಿಗೆ ಗುರುಗಳೇ ದಾರಿದೀಪ. ಮುಂದೊಂದು ದಿನ ನೀರಿಗಾಗಿ ಯುದ್ದ ನಡೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೆರೆಗಳೆಲ್ಲ ಬತ್ತಿ ಹೋಗಿವೆ. ಕೆಲವರು ಕೆರೆಗಳನ್ನು ಮುಚ್ಚಿ ಕಟ್ಟಡವನ್ನ ಕಟ್ಟಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರು ಕೂಡ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ” ಎಂದರು.

ಈ ಸುದ್ದಿಯನ್ನೂ ಓದಿ: Yallapura News: ವೇದಗಳು ಎಲ್ಲ ವಿಷಯಗಳ ಮೇಲೂ ಬೆಳಕು ಬೀರುವ ಜ್ಞಾನಗಳ ಆಗರ: ಸ್ವರ್ಣವಲ್ಲಿ ಶ್ರೀ

ಈ ಸಂದರ್ಭದಲ್ಲಿ ಶ್ರೀಗಳು ಬರೆದ ಗುರುವಾಣಿ ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ದಾವಣಗೆರೆಯ ಖ್ಯಾತ ವೈದ್ಯ ಡಾ. ಎಸ್. ಆರ್ ಹೆಗಡೆ. ಹಾಗೂ ವಾತುಲಾಗ ವಿದ್ವಾಂಸ ಗಜಾನನ ಭಟ್, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರಿಗೆ ಶ್ರೀಗಳು ಸನ್ಮಾನಿಸಿದರು. ಸ್ವರ್ಣವಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ ಎನ್ ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version