Site icon Vistara News

Vistara News Launch | ಜನರ ಅಗತ್ಯಕ್ಕೆ ತಕ್ಕಂತೆ ವಿಸ್ತಾರ ಕಾರ್ಯನಿರ್ವಹಣೆ: ಸಿದ್ದಬಸವ ಮಹಾಸ್ವಾಮಿ

Vistara News Launch

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪದ ಗುರುಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ (Vistara News Launch) ಶನಿವಾರ ಅದ್ಧೂರಿಯಾಗಿ ನೆರವೇರಿತು. ಕನ್ನಡ ಸಾಹಿತ್ಯ ಪರಿಷತ್‌, ಸಿರುಗುಪ್ಪ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಹಳೆಕೋಟೆಯ ಶಿವಯೋಗಿ ಮರಿತಾತ ಮಠದ ಸಿದ್ದಬಸವ ಮಹಾಸ್ವಾಮಿ ಮತ್ತು ಸಿರುಗುಪ್ಪ ಗುರುಬಸವ ಮಠದ ಬಸವಭೂಷಣ ಸ್ವಾಮಿ ಅವರು ಉದ್ಘಾಟಿಸಿದರು.

ನಂತರ ಸಿದ್ದಬಸವ ಮಹಾಸ್ವಾಮಿ ಮಾತನಾಡಿ, ವಿಸ್ತಾರ ನ್ಯೂಸ್‌ ಹಲವು ಆಶಯಗಳೊಂದಿಗೆ ಜನರ ಮುಂದೆ ಬಂದಿರುವುದು ಸಂತಸದ ಸಂಗತಿ. ವಿಸ್ತಾರ ನ್ಯೂಸ್‌ ಗ್ರಾಮೀಣ ಮಟ್ಟದಲ್ಲಿರುವ ಬಾಲ ಮತ್ತು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕೆಂದು ತಿಳಿಸಿದರು.

ಇದನ್ನೂ ಓದಿ | Vistara News Launch | ನಿಖರ ಸುದ್ದಿ ಮಾಡುವವರಿಗೆ ಗೆಳೆಯರು ಕಡಿಮೆ: ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು

ಇತರ ನ್ಯೂಸ್‌ ಚಾನೆಲ್‌ಗಳಿಗಿಂತ ವಿಸ್ತಾರ ನ್ಯೂಸ್‌ ಭಿನ್ನ ಎನ್ನುವುದು ಹಲವು ವಿಷಯಗಳಿಂದ ತಿಳಿಯುತ್ತವೆ. ವಿಸ್ತಾರ ನ್ಯೂಸ್‌ ಜನರ ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದಕ್ಕೆ ವಿಸ್ತಾರ ಯೂಟ್ಯೂಬ್‌ ಚಾನೆಲ್‌ ಸಾಕ್ಷಿಯಾಗಿದೆ. ವಿಸ್ತಾರ್‌ ಹೆಲ್ತ್‌, ವಿಸ್ತಾರ್‌ ಮನಿ ಪ್ಲಸ್‌, ವಿಸ್ತಾರ ಓಂಕಾರ, ಸಿನಿಮಾ ಮತ್ತು ಕೃಷಿ ಚಾನೆಲ್‌ ತಂದಿರುವುದು ವಿಸ್ತಾರ ಜನ ಸ್ಪಂದನೆಯ ಚಾನೆಲ್‌ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇನ್ನು ಡಿಜಿಟಲ್‌ ವಿಚಾರದಲ್ಲಿ ಉತ್ತಮ ಆ್ಯಪ್‌ ಅಭಿವೃದ್ಧಿಪಡಿಸಿರುವುದು ಡಿಜಿಟಲ್‌ ಸುದ್ದಿ ಲೋಕದಲ್ಲಿ ಉತ್ತಮ ಪ್ರಯತ್ನವಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ವಿಸ್ತಾರ ಮತ್ತಷ್ಟು ವಿಸ್ತಾರವಾಗುವ ಲಕ್ಷಣಗಳು ಗೋಚರಿಸುತ್ತಿದೆ ಎಂದರು.

ಗ್ರಾಮೀಣ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಿ
ಬಸವಭೂಷಣ ಸ್ವಾಮಿ ಮಾತನಾಡಿ, ವಿಸ್ತಾರ ನ್ಯೂಸ್‌ ಚಾನೆಲ್‌ ಆರಂಭವಾದ ಅಲ್ಪದಿನಗಳಲ್ಲಿಯೇ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜನರಿಗೆ ಬೇಕಾಗುವ ವಿಷಯವನ್ನು ಸುದ್ದಿ ರೂಪದಲ್ಲಿ ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಗ್ರಾಮೀಣ ಮಟ್ಟದ ಸಮಸ್ಯೆಗಳ ಕಡೆಗೆ ವಿಸ್ತಾರ ಹೆಚ್ಚಿನ ಒತ್ತು ಕೊಟ್ಟರೆ, ಮತ್ತಷ್ಟು ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಲಿದೆ. ಸುದ್ದಿ ವಾಹಿನಿಗಳಿಂದ ಅಪರಾಧ ಪ್ರಕರಣಗಳ ವೈಭವೀಕರಣ ನಿಲ್ಲಿಸಬೇಕು. ಕ್ರೈಂ ಬಗ್ಗೆ ಅಗತ್ಯವಿದ್ದಷ್ಟು ಮಾತ್ರವೇ ತೋರಿಸಬೇಕೆ ವಿನಃ ಅದು ವಿಪರೀತವಾಗಬಾರದು. ಒಂದೇ ವಿಷಯವನ್ನು ಪದೇ ಪದೆ ತೋರಿಸುವುದು ಕೂಡ ಜನರ ಬೇಸರಕ್ಕೆ ಕಾರಣವಾಗುತ್ತಿದೆ ಎಂದರು.

ನಿಖರ, ಜನಪರಕ್ಕೆ ಜನರ ಮನ್ನಣೆ
ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಚೊಕ್ಕಬಸವನಗೌಡ ಮಾತನಾಡಿ, ವಿಸ್ತಾರ ನ್ಯೂಸ್‌ ತನ್ನ ನಿಖರ ಮತ್ತು ಜನಪರ ಘೋಷಣೆ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾಗಲಿದೆ. ಈಗಾಗಲೇ ಚಾನೆಲ್‌ ನೋಡುತ್ತಿದ್ದೇವೆ, ಸುದ್ದಿ ನಿರೂಪಣೆ, ವಿವರಣೆ ಸೇರಿ ಹಲವು ವಿಚಾರದಲ್ಲಿ ಇತರ ನ್ಯೂಸ್‌ ಚಾನೆಲ್‌ಗಿಂತ ಭಿನ್ನವಾಗಿ ಕಂಡುಬರುತ್ತಿದೆ. ವಿಸ್ತಾರ ಎಂಟರ್‌ಟೇನ್‌ಮೆಂಟ್‌, ಮ್ಯೂಸಿಕ್‌, ಪ್ರೊಡಕ್ಷನ್‌ ಹೌಸ್, ಪಬ್ಲಿಕೇಷನ್‌ ಬರುತ್ತಿದೆ. ಇನ್ನು ವಿಸ್ತಾರ‌ ಡಿಜಿಟಲ್ ವೆಬ್‌ಸೈಟ್, ಯೂಟ್ಯೂಬ್‌ ಚಾನೆಲ್‌ ಮೂಲಕ ಜನರಿಗೆ ಹತ್ತಿರವಾಗಿದೆ ಎಂದರು.

ತಹಸೀಲ್ದಾರ್‌ ಎನ್‌.ಆರ್‌.ಮಂಜುನಾಥಸ್ವಾಮಿ, ತಾಲೂಕು ಪಂಚಾಯಿತಿ ಇಒ ಮಡಗಿನ ಬಸಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಮಧುಸೂದನ್‌ ಕಾರಿಗನೂರು, ಆಮ್‌ ಆದ್ಮಿ ಪಕ್ಷದ ತಾಲೂಕು ಸಂಚಾಲಕ ಧರಪ್ಪ ನಾಯಕ್‌ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಡಿ. ಭಜಂತ್ರಿ, ನಗರಸಭೆ ಸದಸ್ಯ ಎಂ.ವೀರೇಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಜೆ.ಶ್ರೀಧರ್‌ ಸೇರಿ ಇತರರು ಇದ್ದರು.

ಗಮನ ಸೆಳೆದ ಸ್ತ್ರೀ ವೇಷಧಾರಿ ಕಲಾವಿದನ ಕೂಚಿಪುಡಿ ನೃತ್ಯ
ಕಾರ್ಯಕ್ರಮದಲ್ಲಿ ಬಲಕುಂದಿ ಬಸವರಾಜ ಅವರ ಕೂಚಿಪುಡಿ ನೃತ್ಯ ಮಹಿಳಾ ಕಲಾವಿದರನ್ನು ನಾಚಿಸುವಂತಿತ್ತು. ಪ್ರಚಲಿತ ವಿದ್ಯಮಾನದ ಬಗ್ಗೆ ಹಾಸ್ಯ ಕಲಾವಿದರಾದ ಎರ‍್ರಿಸ್ವಾಮಿ, ನರಸಿಂಹಮೂರ್ತಿ ಹಾಸ್ಯಕ್ಕೆ ಜನರು ನಗೆಗಡಲಲ್ಲಿ ತೇಲಿದರೆ, ಜಡೆಪ್ಪ ಅವರ ರೈತಗೀತೆ ಮತ್ತು ಜಾನಪದ ಗೀತೆಗಳ ಗಾಯನ ಎಲ್ಲರ ಮನ ಸೆಳೆಯಿತು.

ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ನಿಂದ ಕೂಚಿಪುಡಿ ನೃತ್ಯ ಕಲಾವಿದ ಬಲಕುಂದಿ ಬಸವರಾಜ್‌, ಹಾಸ್ಯ ಕಲಾವಿದರಾದ ಎರ‍್ರಿಸ್ವಾಮಿ, ನರಸಿಂಹಮೂರ್ತಿ, ಗಾಯಕ ಜಡೇಶ್‌ ಎಮ್ಮಿಗನೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ | Vistara News Launch | ಕನ್ನಡ ಮಾಧ್ಯಮ ಲೋಕದಲ್ಲಿ ವಿಸ್ತಾರ ನ್ಯೂಸ್‌ ಎತ್ತರಕ್ಕೆ ಬೆಳೆಯಲಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್‌

Exit mobile version