Site icon Vistara News

Siddapura News: ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳಿಲ್ಲ; ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲ: ಸಾಹಿತಿ ನಾಗೇಶ್ ಹೆಗಡೆ

Siddapura sahitya sammelana

#image_title

ಸಿದ್ದಾಪುರ: ಹೊರಗಿನ ಜ್ಞಾನ ನಮ್ಮಲ್ಲಿ ಪ್ರಜ್ವಲಿಸಬೇಕು. ನಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಜಗತ್ತಿಗೆ ತೋರಿಸಬೇಕು. ಇಲ್ಲಿನ ಸುಸ್ಥಿರ ಬದುಕಿನ ಜೀವನವನ್ನು ಪ್ರಪಂಚಕ್ಕೆ ಸಾಹಿತ್ಯದ ಮೂಲಕ ಸಾರುವ ಕೆಲಸ ಆಗಬೇಕು ಎಂದು ಸಾಹಿತಿ ನಾಗೇಶ್ ಹೆಗಡೆ ಬಕ್ಕೆಮನೆ ಹೇಳಿದರು.

ಪಟ್ಟಣದ ಶಂಕರ ಮಠದಲ್ಲಿ ಭಾನುವಾರ (ಜ.೨೯) ನಡೆದ 6ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಬದುಕಿಗೆ ಎಂತಹ ಸಾಹಿತ್ಯಗಳು ಬೇಕು ಎನ್ನುವುದನ್ನು ಚರ್ಚಿಸುವ ಅಗತ್ಯ ಇದೆ. ನಮ್ಮಲ್ಲಿ ನಿಸರ್ಗ ಸಂಪತ್ತು ಮತ್ತು ಅಕ್ಷರ ಸಂಪತ್ತು ಅಗಾಧವಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ನಿಸರ್ಗ ಸಂರಕ್ಷಣೆಯ ಹೋರಾಟದವರೆಗೆ ನಮ್ಮವರು ಅನನ್ಯವಾದ ಕೊಡುಗೆ ನೀಡಿದ್ದಾರೆ. ಪ್ರತಿ ಮನೆಯ ಕಪಾಟುಗಳಲ್ಲಿಯೂ ಪುಸ್ತಕಗಳು ಇರಬೇಕು. ಆದರೆ ಇಂದು ಪಟ್ಟಣದಲ್ಲೂ ಪುಸ್ತಕದ ಅಂಗಡಿಗಳೇ ಇಲ್ಲವಾಗಿದೆ. ಸರಕಾರಕ್ಕೆ ಸಾಹಿತ್ಯದ ಬಗ್ಗೆ ಆಸಕ್ತಿ ಇಲ್ಲವಾಗಿದೆ ಎಂದರು.

#image_title

ಇದನ್ನೂ ಓದಿ | RBI Repo Rate : ಆರ್‌ಬಿಐ ರೆಪೊ ದರ 0.25% ಏರಿಕೆ ಸಾಧ್ಯತೆ: ಸಮೀಕ್ಷೆ

ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ʻʻನಮ್ಮ ಭಾಷೆಗೆ ಸಂಸ್ಕಾರ ಕೊಡುವಂತಹ ಸಂಸ್ಕಾರವನ್ನು ಪರಿಚಯಿಸುವಂತಹ ಅಗಾಧವಾದ ಶಕ್ತಿ ಇದೆ. ಹಾಗಾಗಿ ಭಾಷೆಯನ್ನು ನಾವು ರಕ್ಷಿಸಿಕೊಳ್ಳಬೇಕು ಅದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ. ಆದರೆ ಸವಾಲುಗಳು ಕೂಡ ಅಷ್ಟೇ ಇವೆ. ಇಂದಿನ ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಹಾಗೂ ಇತರೆ ಕಾರಣದಿಂದಾಗಿ ಭಾಷೆಗಳಿಗೆ ಅನೇಕ ಸವಾಲುಗಳು ಹುಟ್ಟಿಕೊಳ್ಳುತ್ತಿವೆ. ಈಗ ಹಿಂದಿನ ಭಾಷೆಗಳನ್ನು ಅಭ್ಯಾಸ ಮಾಡುವಂಥದ್ದು ಒಂದು ಪರಂಪರೆ. ಆದರೆ ಈ ಭಾಷೆ ಮುಂದೇನಾಗಬಹುದು ಎಂಬುದನ್ನು ಯೋಚಿಸುವುದು ಅಗತ್ಯವಾಗಿದೆ. ಮೊಬೈಲ್‌ಗಳಲ್ಲಿ ಇಂದಿನ ಯುವ ಪೀಳಿಗೆಯವರು ಕಳಿಸುತ್ತಿರುವ ಮೆಸೇಜ್‌ಗಳನ್ನು ನೋಡಿದರೆ ಈ ಭಾಷೆ ಏನಾಗುತ್ತಿದೆ ಎಂಬ ಆತಂಕವಾಗುತ್ತದೆ. ಹಾಗಾಗಿ ಈ ಕುರಿತು ಅಧ್ಯಯನ ಮಾಡಬೇಕಾದ ಅವಶ್ಯಕತೆ ಇದೆʼʼ ಎಂದರು.

ಇದನ್ನೂ ಓದಿ | Bharat Jodo Yatra: ಸಹೋದರಿ ಪ್ರಿಯಾಂಕಾ, ಕಾರ್ಯಕರ್ತರ ಜತೆ ರಾಹುಲ್ ಗಾಂಧಿ ಹಿಮ ಎರಚಾಟ! Video Viral

ಕಸಾಪ ತಾಲೂಕು ಅಧ್ಯಕ್ಷ ಗೋಪಾಲ್ ಬಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಕಸಾಪ ಜಿಲ್ಲಾ ಅಧ್ಯಕ್ಷ ಬಿಎನ್ ವಾಸರೆ ಆಶಯ ನುಡಿಯಾಡಿದರು. ನಾಗರಾಜ್ ಮಾಳ್ಕೋಡ್ ದ್ವಾರಗಳನ್ನು ಪರಿಚಯಿಸಿದರು. ಸಾಹಿತಿ ತಮ್ಮಣ್ಣ ಬೀಗಾರ ಹೊಸ ಪುಸ್ತಕಗಳ ಬಿಡುಗಡೆ, ಆರ್ ಎಂ ಹೆಗಡೆ ಬಾಳೆಸರ ಮೆರವಣಿಗೆಗೆ ಚಾಲನೆ ನೀಡಿದರು. ಡಾ ಕೆ ಶ್ರೀಧರ್ ವೈದ್ಯ ದ್ವಾರಗಳನ್ನು ಉದ್ಘಾಟಿಸಿದರು. ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ಸುಜಾತಾ ದಂಠಕಲ್ ಸಂದೇಶ ವಾಚಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ವಿನಯ ಹೊನ್ನೆಗುಂಡಿ, ಕೆ ಜಿ ನಾಗರಾಜ, ಆರ್ ಆರ್ ನಾಯ್ಕ, ಸಿ ಎಸ್ ಗೌಡರ್, ಸತೀಶ್ ಹೆಗಡೆ, ಶಶಿಭೂಷಣ ಹೆಗಡೆ, ಜಿಲ್ಲಾ ಕಸಾಪದ ಕಾರ್ಯದರ್ಶಿ ಪಿ ಆರ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಇಒ ಪ್ರಶಾಂತ ರಾವ್.
ಕುಮಾರಿ ನಿಶಾ ಮಂಜುನಾಥ್ ನಾಯ್ಕ್ ಯಕ್ಷ ನೃತ್ಯ ಮಾಡಿ ಸಭೆಯನ್ನು ಸ್ವಾಗತಿಸಿದರು.
ಶಿಕ್ಷಕರ ತಂಡದವರು ನಾಡಗೀತೆ ಹಾಡಿದರು. ಪ್ರಶಾಂತಿ ಪ್ರೌಢಶಾಲೆ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ತಹಶೀಲ್ದಾರ್ ಸಂತೋಷ್ ಭಂಡಾರಿ ಸ್ವಾಗತಿಸಿದರು.
ರತ್ನಾಕರ್ ಜಿ ನಾಯ್ಕ್, ಕುಮಾರಿ ನೇಹಾ, ಕುಮಾರಿ ಸಂಜನಾ ನಿರೂಪಿಸಿದರು. ಪಿ ಬಿ ಹೊಸೂರ್ ವಂದಿಸಿದರು.

ಇದನ್ನೂ ಓದಿ | ಗ್ರಾಮೀಣ ಶಾಸಕಿ ಸಲುವಾಗಿ ರಾಜ್ಯವನ್ನು ಹಾಳು ಮಾಡಿದ್ದು ಡಿ.ಕೆ. ಶಿವಕುಮಾರ್‌ : ಸಿಡಿ ಪ್ರಕರಣ ಸಿಬಿಐಗೆ ನೀಡಲು ರಮೇಶ್‌ ಜಾರಕಿಹೊಳಿ ಆಗ್ರಹ

Exit mobile version