ದಾವಣಗೆರೆ: ಮಕ್ಕಳಿಗೆ ಏನೇ ವಿಷಯ ಭೋದನೆ ಮಾಡಿದರೂ ನೈತಿಕ ಶಿಕ್ಷಣದ ಅಗತ್ಯವಿದೆ. ಆದರೆ ಈಗಿನ ಪಠ್ಯಪುಸ್ತಕಗಳಲ್ಲಿ ನೈತಿಕತೆ ಕೊರತೆ ಹೆಚ್ಚಾಗಿದೆ. ಯಾವುದೇ ಮೂಲ ವಿಚಾರವನ್ನು ತಿದ್ದದೆ ವಾಸ್ತವವನ್ನು ತಿಳಿಸಬೇಕು ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಠ್ಯ ಪುಸ್ತಕ ಪರಷ್ಕರಣೆ ವಿವಾದದ ಬಗ್ಗೆ ಶುಕ್ರವಾರ ಮಾತನಾಡಿದರು. ಪಠ್ಯ ಪುಸ್ತಕದ ವಿಷಯ ಈಗಾಗಲೇ ಬಹಳಷ್ಟು ತಿರುವು ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು. ವಾದ- ವಿವಾದ ಪೂರ್ಣಗೊಂಡು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು. ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.
ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಅವರ ವಚನಗಳೇ ನಮಗೆ ಆಧಾರವಾಗಿವೆ. ಹೀಗಾಗಿ ಅದನ್ನು ತಿರುಚುವ ಪ್ರಯತ್ನವಾಗದೆ ವಾಸ್ತವ ವಿಚಾರಗಳನ್ನ ಪ್ರಕಟ ಮಾಡುವುದು ಒಳ್ಳೆಯದು. ಮಾನವನ ಬದುಕಿಗೆ ತತ್ವಗಳು ಅಗತ್ಯ, ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಡುವ ಗೌರವವಾಗಿದೆ ಎಂದು ಸಲಹೆ ನೀಡಿದರು.
ಇದನ್ನೂ ಓದಿ | ಅನುಭವ ಮಂಟಪ ಪೀರ್‌ಬಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ