ಹೊಸನಗರ: ಶರಾವತಿ ನದಿಯಲ್ಲಿ (Sharavati River) ಸಾಗುತ್ತಿದ್ದ ವೇಳೆ ಹಸಿರುಮಕ್ಕಿ ಲಾಂಚ್‌ನ (Hasirumakki launch) ಡೋರ್ ಕೇಬಲ್ (Door cable of the launch) ತುಂಡಾಗಿ ಸಂಚಾರ ಬಂದ್ ಆಗಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಮಾರ್ಗವಾಗಿ ಬದಲಿ ಲಾಂಚ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಎಂದಿನಂತೆ ಓಡಾಟ ಪ್ರಾರಂಭವಾಗಿದೆ.
ಹಸಿರುಮಕ್ಕಿ ನದಿಗೆ ಭಾನುವಾರ (ಏಪ್ರಿಲ್ 30) ಸಂಜೆಯೇ ಬದಲಿ ಲಾಂಚ್ ಅನ್ನು ತರಲಾಗಿದೆ. ಸಮೀಪದ ಸಿಗಂದೂರು ಹೊಳೆಬಾಗಿಲಿನಲ್ಲಿ ಸೇವೆಯಲ್ಲಿದ್ದ ಎರಡು ಲಾಂಚ್‌ಗಳ ಪೈಕಿ ಒಂದನ್ನು ಹಸಿರುಮಕ್ಕಿಗೆ ತಂದು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲಾಗಿದೆ.
ಇದನ್ನೂ ಓದಿ: Karnataka Election 2023: ಬಿಜೆಪಿ ಪರ ಪ್ರಚಾರಕ್ಕೆ ಶಾರ್ಟ್ ಬ್ರೇಕ್; ನಟ ಸುದೀಪ್ ಕೊಟ್ಟ ಕಾರಣವೇನು?
ಡೋರ್ ತುಂಡಾಗಿ ಬಿದ್ದ ಲಾಂಚ್ ಅನ್ನು ದುರಸ್ತಿಗೊಳಿಸಲು 3-4 ದಿನ ಬೇಕಿದ್ದು, ಅಲ್ಲಿಯವರೆಗೆ ಈ ಲಾಂಚ್ ಸೇವೆಯಲ್ಲಿ ಇರಲಿದೆ ಎಂದು ಹೇಳಲಾಗಿದೆ.
ಏನಿದು ಘಟನೆ?
ಹಸಿರುಮಕ್ಕಿ ಲಾಂಚ್ ಕೆಬಿ ಸರ್ಕಲ್ ಕಡೆಯಿಂದ ಸಾಗರ ಕಡೆ ಹೋಗುವ ನಿಲ್ದಾಣ ಪಾಯಿಂಟ್ ಬಳಿ ಹೋಗುತ್ತಿದ್ದಾಗ ಲಾಂಚ್‌ನ ಡೋರ್ ಕೇಬಲ್ ಕಟ್ ಆಗಿತ್ತು. ಈ ವೇಳೆ ಡೋರ್ ಮೇಲೆ ನಿಲ್ಲಿಸಿದ್ದ ಬೈಕ್ ನೀರಿಗೆ ಬಿದ್ದಿದೆ. ಆಗ ಅಲ್ಲೇ ಇದ್ದ ಲಾಂಚ್ ಸಿಬ್ಬಂದಿಯೊಬ್ಬರು ಬೈಕ್ ಅನ್ನು ಹಿಡಿದುಕೊಳ್ಳಲು ಮುಂದಾಗಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದಾರೆ. ಕೊನೆಗೆ ಈಜಿ ದಡ ಸೇರಿದ್ದಾರೆ.
ಪ್ರಯಾಣಿಕರು ಸೇಫ್
ಲಾಂಚ್ ಅನ್ನು ನಿಲುಗಡೆ ಮಾಡಬೇಕಾದರೆ ಡೋರ್ ಬಹಳ ಮುಖ್ಯವಾಗುತ್ತದೆ. ಕೊನೆಗೆ ಆ ಡೋರ್ ಮೂಲಕವೇ ವಾಹನಗಳ ಸಹಿತ ಜನರು ಸಹ ರಸ್ತೆಗೆ ದಾಟಬೇಕು. ಆದರೆ, ಡೋರ್ ಕೇಬಲ್ ಕಟ್ ಆಗಿದ್ದರಿಂದ ಜನತೆ ದಡಕ್ಕೆ ಹೋಗಲು ಕಷ್ಟವಾಗಿದೆ. ಕೊನೆಗೆ ಲಾಂಚ್ ಅನ್ನು ಹಿಮ್ಮುಖವಾಗಿ ದಡದತ್ತ ತಂದು, ಪ್ರಯಾಣಿಕರನ್ನು ಸುರಕ್ಷಿತವಾಗಿ ದಡ ಸೇರಿಸಲಾಗಿತ್ತು.
ಇದನ್ನೂ ಓದಿ: Karnataka Election : ಮೋದಿಯನ್ನು ನಾಲಾಯಕ್ ಮಗ ಎಂದ ಪ್ರಿಯಾಂಕ ಖರ್ಗೆ; ಕಾಂಗ್ರೆಸ್ ಮತ್ತೊಂದು ಎಡವಟ್ಟು
ಲಾಂಚ್ ಇಲ್ಲದೆ ಪರದಾಟ
ಲಾಂಚ್ ಡೋರ್ ಮೇಲೆ ವಾಹನ ಹಾಕಬಾರದು ಎಂಬ ನಿಯಮ ಇದ್ದರೂ ಲಾಂಚ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಈಗ ಲಾಂಚ್‌ನಲ್ಲಿ ಬಸ್, ಕಾರುಗಳು, ಬೈಕ್‌ಗಳು ಹಾಗೇ ಸಿಲುಕಿಕೊಂಡಿದ್ದವು. ಹಸಿರುಮಕ್ಕಿ ಲಾಂಚ್ ಇಲ್ಲದೆ ಮಾರ್ಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಇದೀಗ ಪುನಃ ಸೇವೆ ಆರಂಭವಾಗಿರುವುದು ಸ್ಥಳೀಯರು ನಿರಾಳರಾಗುವಂತೆ ಮಾಡಿದೆ.