Site icon Vistara News

Vijayanagara News: ಅರಸೀಕೆರೆಯಲ್ಲಿ ಶ್ರೀ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ರಜತ ಮಹೋತ್ಸವ; ಪೂರ್ವಭಾವಿ ಸಭೆ

Silver Jubilee of Shree Kolashantheswara ITI at Araseikere Preliminary meeting

ಹರಪನಹಳ್ಳಿ: ಶ್ರೀ ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ (Shree Kolashantheswara ITI) ರಜತ ಮಹೋತ್ಸವ ಹಾಗೂ ವೈ. ಡಿ. ಅಣ್ಣಪ್ಪ ಪದವಿ ಮಹಾವಿದ್ಯಾಲಯದ ಪ್ರಾರಂಭೋತ್ಸವದ ಹಿನ್ನಲೆಯಲ್ಲಿ , ತಾಲೂಕಿನ ಅರಸೀಕೆರೆಯ (Araseikere) ಶ್ರೀ ಕೋಲಶಾಂತೇಶ್ವರ ಮಠದಲ್ಲಿ ಪೂರ್ವಭಾವಿ ಸಭೆ (Preliminary meeting) ನಡೆಯಿತು.

ಸಭೆಯಲ್ಲಿ ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮೀಜಿ ಸಾನಿಧ್ಯತೆ ವಹಿಸಿ ಮಾತನಾಡಿ, ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭವಾಗಿ 25 ವರ್ಷಗಳು ತುಂಬಿವೆ ಹಾಗೂ ವೈ. ಡಿ. ಅಣ್ಣಪ್ಪ ಪದವಿ ಮಹಾವಿದ್ಯಾಲಯದ ಪ್ರಾರಂಭೋತ್ಸವದ ಪ್ರಯುಕ್ತ ಸ್ಮರಣಿಕೆ (ಪುಸ್ತಕ ಬಿಡುಗಡೆ), ಆರೋಗ್ಯ ಶಿಬಿರ, ಉಚಿತ ರಕ್ತದಾನ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮದ ಎಲ್ಲಾ ಮುಖಂಡರ ಸಹಕಾರದೊಂದಿಗೆ ಎರಡು ದಿನಗಳ ಕಾಲ ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Koppala News: ಗಂಗಾವತಿ; ವಾಣಿ ವೀರಭದ್ರೇಶ್ವರ ದೇವಸ್ಥಾನದ ಶಿವಲಿಂಗ ಕದ್ದೊಯ್ದ ಕಳ್ಳರು

ನೀಲಗುಂದ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಪ್ರತಿವರ್ಷ ಮಠದಿಂದ ಸಾಮೂಹಿಕ ವಿವಾಹಗಳು, ದಾಸೋಹ, ಶಾಲಾ ಕಾಲೇಜುಗಳ ನಿರ್ಮಾಣ ಹಾಗೂ ವಿದ್ಯಾದಾನ ನೀಡುತ್ತಾ ಬಂದಿದ್ದಾರೆ. ಶ್ರೀಗಳು ಬಂದ ಮೇಲೆ ಶ್ರೀ ಮಠದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದು ಹೇಳಿದರು.

ಇದನ್ನೂ ಓದಿ: Koppala News: ಅಕ್ರಮ ಮರಳು ದಂಧೆ ತಡೆಗೆ 2 ಚೆಕ್‌ಪೋಸ್ಟ್ ಸ್ಥಾಪಿಸಲು ಕ್ರಮ: ಎಸಿ ಮಹೇಶ್‌ ಮಾಲಗತ್ತಿ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ. ಇನಾಯತ್ ಉಲ್ಲಾ, ಮುಖಂಡರಾದ ವೈ. ಡಿ.ಅಣ್ಣಪ್ಪ, ಪ್ರಶಾಂತ್ ಪಟೇಲ್, ಎ.ಬಿ. ಮಲ್ಲಿಕಾರ್ಜುನ್ ಗೌಡ, ಎ.ಎಚ್. ಪಂಪಣ್ಣ, ಎ.ಎಚ್. ನಾಗರಾಜಪ್ಪ, ಪೂಜಾರ್ ಮರಿಯಪ್ಪ, ಚಂದ್ರಪ್ಪ, ಕೆ.ಎಂ. ವಿಶ್ವನಾಥಯ್ಯ, ಶೆಡ್ಡೇರ್ ಆನಂದಪ್ಪ, ಬಿ. ರಾಮಣ್ಣ, ಐ. ಸಲಾಂ ಸಾಹೇಬ್, ಕೆ.ಎಂ. ಕೊಟ್ರಯ್ಯ, ತಿಮ್ಮಲಾಪುರದ ಪರುಸಪ್ಪ,ಅಡ್ಡಿ ಚನ್ನವೀರಪ್ಪ, ಎ.ಎಚ್. ಕೊಟ್ರೇಶ್, ಎ.ಬಿ. ಅಜ್ಜನಗೌಡ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಉಪನ್ಯಾಸಕರು ಮತ್ತು ಇತರರು ಉಪಸ್ಥಿತರಿದ್ದರು.

Exit mobile version