ಶಿರಸಿ: ಹತ್ತು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ, ‘ಕಲಿಯುಗದ ಭಗೀರಥ’ ಎಂದೇ ಖ್ಯಾತರಾಗಿರುವ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ಮೀಡಿಯಾ ಪ್ರೈ. ಲಿ.ನ ನಿರ್ದೇಶಕರಾದ ಶ್ರೀನಿವಾಸ್ ಹೆಬ್ಬಾರ್ ಅವರು ಇಲ್ಲಿಯ ಮಾರುತಿ ದೇವಾಲಯಕ್ಕೆ ರಜತ ಪೀಠ ಸಮರ್ಪಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಬೀಸಿನ ಶ್ರೀ ಮಾರುತಿ ದೇವಾಲಯಕ್ಕೆ ರಜತ ಪೀಠ ಸಮರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು. 9 ಕೆ.ಜಿ ತೂಕದ ಬೆಳ್ಳಿ ಪೀಠವನ್ನು ಶ್ರೀ ಮಾರುತಿ ದೇವಾಲಯಕ್ಕೆ ಶ್ರೀನಿವಾಸ ಹೆಬ್ಬಾರ್ ಅವರು ನೀಡಿದ್ದಾರೆ. ಶ್ರೀನಿವಾಸ್ ಹೆಬ್ಬಾರ್ ಅವರು ಪತ್ನಿ, ಪುತ್ರಿ ಹಾಗೂ ಮೊಮ್ಮಗಳೊಂದಿಗೆ ದೇವಾಲಯಕ್ಕೆ ಆಗಮಿಸಿ ರಜತಪೀಠ ಸಮರ್ಪಣೆಯ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು.
ಈ ಹಿಂದೆ ಅವರು ಶಿರಸಿಯ ಅಂಜನಾದ್ರಿ ಶ್ರೀ ಆಂಜನೇಯ ದೇವಾಲಯಕ್ಕೆ ರಜಪೀಠ ಸಮರ್ಪಣೆ ಮಾಡಿದ್ದರು. 9 ಕೆ.ಜಿ ತೂಕವುಳ್ಳ ಬೆಳ್ಳಿ ಪೀಠವನ್ನು ಆಂಜನೇಯ ದೇವಾಲಯಕ್ಕೆ ಸಮರ್ಪಣೆ ಮಾಡಿದ್ದರು. ಇದೀಗ ಅದೇ ರೀತಿಯಾಗಿ ಕೊಳಗಿಬೀಸಿನ ಶ್ರೀ ಮಾರುತಿ ದೇವಾಲಾಯಕ್ಕೆ ರಜತ ಪೀಠ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ.
ಸಮಾಜಮುಖಿ ಚಿಂತನೆ ಹಾಗೂ ಸಾಮಾಜಿಕ ಕಾರ್ಯದಲ್ಲಿ ಸದಾ ಸಕ್ರಿಯವಾಗಿರುವ ಶ್ರೀನಿವಾಸ್ ಹೆಬ್ಬಾರ್ ಅವರಿಗೆ ದೇವರು ಇನ್ನಷ್ಟು ಇಂತಹ ಉತ್ತಮ ಕಾರ್ಯಕ್ಕೆ ಪ್ರೇರಣೆ ನೀಡಲಿ ಸ್ಥಳೀಯರು ಆಶಿಸಿದ್ದಾರೆ.
ಇದನ್ನೂ ಓದಿ | ಶ್ರೀನಿವಾಸ್ ಹೆಬ್ಬಾರ್ ನೇತೃತ್ವದಲ್ಲಿ ಮಾರುತಿ ದೇವಸ್ಥಾನದ ಪ್ರವೇಶದ್ವಾರ ಉದ್ಘಾಟನೆ