Site icon Vistara News

Sindhuri Vs Roopa : ಆ ಮಹಿಳೆ ಎಲ್ಲೋದ್ರೂ ವಿವಾದಾನೇ ಅಂದ ಎಚ್‌ಡಿಕೆ, ರೂಪಾ ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಪ್ರತಾಪಸಿಂಹ

pratahap sinha HDK

#image_title

ಬೆಂಗಳೂರು: ಐಪಿಎಸ್‌ ಮತ್ತು ಐಎಎಸ್‌ ಮಹಿಳಾ ಅಧಿಕಾರಿಗಳ ನಡುವಿನ ಜಗಳದ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ವಲಯದಲ್ಲಿ ಕೆಲವರು ಐಪಿಎಸ್‌ ಅಧಿಕಾರಿ ರೂಪಾ ಪರವಾಗಿ ವಾದ ಮಾಡಿದರೆ, ಇನ್ನು ಕೆಲವರು ಸಿಂಧೂರಿ ಪರವಾಗಿ ವಾದಿಸುತ್ತಾರೆ. ಈ ನಡುವೆ, ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮತ್ತು ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರು ರೋಹಿಣಿ ಸಿಂಧೂರಿ ಅವರೇ ಸ್ವಲ್ಪ ಕಿರಿಕ್‌ ಪಾರ್ಟಿ, ರೂಪಾ ಅವರು ಹೇಳಿದ್ದರಲ್ಲಿ ಸತ್ಯವಿದೆ ಎಂದಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?

ಡಿ.ರೂಪ ಮತ್ತು ರೋಹಿಣಿ ಸಿಂಧೂರಿ ಬಹಿರಂಗ ಕಚ್ಚಾಟವನ್ನು ನೋಡಿದಾಗ ಈ ರಜ್ಯದಲ್ಲಿ ಸರ್ಕಾರ ಇದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ. ಅಧಿಕಾರಿಗಳಿಗೆ ಒಂದಿಷ್ಟು ಗೈಡ್‌ಲೈನ್ಸ್‌ ಇವೆ, ಅಧಿಕಾರಿಗಳು ಸೋಷಿಯಲ್ ಮೀಡಿಯಾದಲ್ಲೂ ಇನ್ವಾಲ್ವ್‌ ಆಗೋ ಆಗಿಲ್ಲ. ಅವರಿಗೆ ಸಮಸ್ಯೆ ಆದರೆ ಸಿಎಸ್ ಬಳಿ ಹೋಗಿ ಸರ್ಕಾರದ ಗಮನ ಸೆಳೆಯಬೇಕು. ಅದರೆ, ಅಧಿಕಾರಿಗಳಿಗೆ ಸರ್ಕಾರದ ಮೇಲೆ ಗೌರವ ಇಲ್ಲʼʼ ಎಂದಿದ್ದಾರೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ.

ʻʻಆ ಮಹಿಳೆ (ರೋಹಿಣಿ ಸಿಂಧೂರಿ) ಎಲ್ಲೋದರೂ ಕಾಂಟ್ರವರ್ಸಿನೇ. ಯಾಕೆ ಇಂಥ ಕಾಂಟ್ರವರ್ಸಿಯಲ್ಲಿ ಬೀಳಬೇಕು? ಸಾರಾ ಮಹೇಶ್ ಸದನದಲ್ಲೇ ತಮಗಾಗಿರುವ ಅನ್ಯಾಯದ ಪ್ರಸ್ತಾಪ ಮಾಡಿದ್ದರು. ಹಕ್ಕುಚ್ಯುತಿಯನ್ನೂ ಮಂಡಿಸಿದ್ದರು. ಅವರ ಮೇಲೆ ಎಷ್ಟು ಒತ್ತಡ ಬಂದಿತ್ತು ಎಲ್ಲಾ ಗೊತ್ತಿದೆ. ನಾನು ಕೂಡಾ ನಾನು ಕೂಡ ಸಾ.ರಾ ಮಹೇಶ್‌ಗೆ ಬಿಟ್ಟು ಬಿಡಿ ಎಂದೆ. ಅವರು ಆಯ್ತಣ್ಣ ಅಂತ ಬಿಟ್ಟಿದ್ದಾರೆʼʼ ಎಂದು ಹೇಳಿದರು ಕುಮಾರಸ್ವಾಮಿ.

ಡಿ. ರೂಪಾ ಆರೋಪ ಸತ್ಯಕ್ಕೆ ದೂರವಾದುದೇನಲ್ಲ ಎಂದ ಪ್ರತಾಪ್‌

ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ರೋಹಿಣಿ ಸಿಂಧೂರಿ ಅವರ ಮೇಳೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದಲ್ಲ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.
ರೂಪಾ ಆರೋಪವನ್ನು ಸಮರ್ಥಿಸಿಕೊಂಡ ಪ್ರತಾಪ್ ಸಿಂಹ ಅವರು, ಅವರು ನೈತಿಕ ಮತ್ತು ಕಾನೂನು ಬದ್ಧವಾಗಿ 19 ಪ್ರಶ್ನೆ ಕೇಳಿದ್ದಾರೆ. ರೂಪಾ ಅವರ ಪ್ರಶ್ನೆಗಳ ಹಿಂದಿರುವ ಸತ್ಯ ಹೆಕ್ಕಿ ತೆಗೆಯಬೇಕು ಎಂದರು.

ಶಾಸಕ ಸಾರಾ ಮಹೇಶ್-ರೋಹಿಣಿ ಸಂಧಾನ ಭೇಟಿ ವಿಚಾರ ಕೇಳಿದಾಗ, ‘ಬದ್ಧತೆ ಇಲ್ಲದವರು ಸಂಧಾನ ಮಾಡಿಕೊಳ್ಳುತ್ತಾರೆ. ಇಂಥವರು ಶಾಸಕರ ಜತೆ ಸಂಧಾನಕ್ಕೆ ಏಕೆ ಹೋದರು?ʼʼ ಎಂದರು.

ʻʻಆಕ್ಸಿಜನ್ ಪ್ರಕರಣದಲ್ಲಿ ರೋಹಿಣಿ ಕ್ಷಮೆ ಕೇಳಬೇಕು. ಕನಿಷ್ಠ ಸೌಜನ್ಯ ಇಟ್ಟುಕೊಂಡು ಕ್ಷಮೆಯಾಚಿಸಲಿ. ನಮ್ಮ ವಿರುದ್ಧ ಮಾಡಿದ್ದ ಆರೋಪಕ್ಕೆ ಕ್ಷಮೆ ಕೇಳಲಿʼʼ ಎಂದೂ ಹೇಳಿದರು.

ಇದನ್ನೂ ಓದಿ : Sindhuri Vs Roopa : ರಾಜ್ಯದ ಮಾನ ಕಳೆದ ಬೀದಿ ಜಗಳ ; ರಾಜ್ಯದಿಂದಲೇ ಹೊರಕಳುಹಿಸಲು ಸರ್ಕಾರ ಚಿಂತನೆ

Exit mobile version