Site icon Vistara News

Sirsi News | ಪಹಣಿ ಪತ್ರದ ಬೆಲೆ ಹೆಚ್ಚಳ; ಹಿಂಪಡೆಯಲು ರೈತ ಸಂಘ ಮನವಿ

Farmers' Association sirsi

ಶಿರಸಿ: ರೈತರಿಗೆ ಜಮೀನಿಗೆ ಅಗತ್ಯವಾಗಿ ಬೇಕಾದ ಪಹಣಿ ಪತ್ರದ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಶಿರಸಿ ತಾಲೂಕು ರೈತ ಸಂಘವು ಶುಕ್ರವಾರ (ಜ.೧೩) ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿತು.

ನಗರದ ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ರೈತ ಸಂಘ, ರೈತರು ದಿನನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪಹಣಿ ಬಳಸುವುದು ಅನಿವಾರ್ಯವಾಗಿದೆ. ಪಹಣಿ ಇಲ್ಲದೆ ರೈತರ ಯಾವುದೇ ಕಲಸ ಕಾರ್ಯಗಳು ಆಗುವುದಿಲ್ಲ. ಈ ಹಿಂದೆ 15 ರೂಪಾಯಿ ನೀಡಿದರೆ ರೈತರಿಗೆ ಪಹಣಿ ಪತ್ರ ನೀಡಲಾಗುತ್ತಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಏಕಾಏಕಿ ಪಹಣಿ ಪತ್ರ ನೀಡುವ ಬೆಲೆಯನ್ನು 25 ರೂಪಾಯಿಗೆ ಏರಿಸಿ ರೈತ ವಿರೋಧಿ ನೀತಿಯನ್ನು ತಾಳಿದೆ. ಈಗಾಗಲೇ ಅತಿವೃಷ್ಟಿಯಿಂದ ಬೆಳೆ ಹಾನಿ, ಕೊಳೆ ಬಾಧಿಸಿದೆ. ಅಲ್ಲದೆ, ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಸಿಗದೆ ರೈತರು ಕಂಗಾಲಾಗಿದ್ದಾರೆ. ಈ ವೇಳೆ ಸರ್ಕಾರ ಪಹಣಿ ಪತ್ರದ ಬೆಲೆ ಏರಿಸಿ ಯಾವ ಬೊಕ್ಕಸವನ್ನು ತುಂಬುತ್ತಿದೆ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ | Tejaswini Ananth Kumar | ತೇಜಸ್ವಿನಿ ಅನಂತಕುಮಾರ್‌ಗೆ ʼಬಸವಾತ್ಮಜೆʼ ಪ್ರಶಸ್ತಿ

ರೈತರು ಯಾವುದೇ ಸರ್ಕಾರದ ಸವಲತ್ತು ಹಾಗೂ ನೆರವು ಪಡೆಯಲು‌ ಬ್ಯಾಂಕ್ ಸಾಲ ಮತ್ತಿತರ ಕಾರ್ಯಗಳಿಗೆ ಪಹಣಿ ಪತ್ರ ಅಗತ್ಯವಾಗಿದೆ‌. ಕೇವಲ 2ರಿಂದ 3 ರೂಪಾಯಿಗೆ ಖರ್ಚಾಗುವ ಪಹಣಿ ಪತ್ರಕ್ಕೆ 25 ರೂಪಾಯಿ ಮಾಡಿರುವುದು ರೈತರ ಹೊಟ್ಟೆಯ ಮೇಲೆ‌ ಬರೆ ಎಳೆದಂತಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪಹಣಿ ಪತ್ರಕ್ಕೆ 10 ರೂಪಾಯಿ ನಿಗದಿ ಮಾಡಬೇಕು. ಇಲ್ಲವಾದಲ್ಲಿ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು‌ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಶಿರಸಿ ತಾಲೂಕು ರೈತ ಸಂಘದ ಅಧ್ಯಕ್ಷ ರಾಜೇಂದ್ರ ಬಿ ನಾಯ್ಕ್, ಕಾರ್ಯದರ್ಶಿ ಮಹೇಶ್ ಕೆ ಎಮ್, ಉಪಾಧ್ಯಕ್ಷ ಮಂಜುನಾಥ್ ಕಾಯಗುಡ್ಡೆ, ಬಂಕನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ ನಾಯ್ಕ್, ಸದಸ್ಯರಾದ ನರೇಂದ್ರ ಹಿರೇಕೈ, ವಿಶ್ವನಾಥ ಮಾವಿನಕುರ್ವೆ, ಪ್ರವೀಣ್ ದೇವತೆಮನೆ, ಶೇಖರ್ ಪೂಜಾರಿ, ಪ್ರಶಾಂತ್ ನಾಯ್ಕ್, ಧರ್ಮೇದ್ರ ನಾಯ್ಕ್ ಕಂಡ್ರಾಜಿ, ಜಿಲ್ಲಾ ರೈತ ಸಂಘದ ಸದಸ್ಯ ಧೀರೇಂದ್ರ ನಾಯ್ಕ್ ಮರಗುಂಡಿ ಇದ್ದರು.

ಇದನ್ನೂ ಓದಿ | Kerala Schools | ಇನ್ನು ʼಸರ್‌ʼ, ʼಮೇಡಂʼ ಎಂದು ಕರೆಯುವಂತಿಲ್ಲ; ʼಟೀಚರ್‌ʼ ಎಂದು ಕರೆಯುವುದಕ್ಕೆ ಮಾತ್ರ ಅವಕಾಶ!

Exit mobile version