ಶಿರಸಿ: ಅರಣ್ಯ ವಾಸಿಗಳ ಸಮಸ್ಯೆಗಳಿಗೆ ಸರ್ಕಾರ ನಿರ್ಣಾಯಕ ಪರಿಹಾರ ಒದಗಿಸುವಂತೆ ಆಗ್ರಹಿಸಿ ಶನಿವಾರ (೭) ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಶಿರಸಿ (Sirsi News) ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ನಾಗರಿಕರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅರಣ್ಯ ಅತಿಕ್ರಮಣದಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರೆ ನೀಡಿದ್ದ ಅರ್ಧ ದಿನ
ಶಿರಸಿ ಬಂದ್‌ಗೆ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿದರು.
ಸುಪ್ರೀಂ ಕೋರ್ಟ್‌ನಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ತಿರಸ್ಕಾರವಾಗಿರುವ ಅತಿಕ್ರಮಣದಾರರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸಲು ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ. ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತಿದ್ದುಪಡಿ ನಿರ್ಣಯಿಸಿ ಪ್ರಮಾಣ ಪತ್ರ ಸಲ್ಲಿಸದಿರುವ ವಿಷಯ ಮತ್ತು ಕಾನೂನು ಬಾಹಿರವಾಗಿ ಜಿಪಿಎಸ್ ಆಧಾರದ ಮೇಲೆ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವ ಆದೇಶ ನೀಡಬೇಕು. ಜಿಲ್ಲೆಯ ೮೫ ಸಾವಿರ ಅರಣ್ಯ ವಾಸಿಗಳ ಕುಟುಂಬಗಳು ಅತಂತ್ರರಾಗುವ ಆತಂಕವಿರುವುದರಿಂದ ಅರಣ್ಯ ವಾಸಿಗಳ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಶಿರಸಿ ನಗರದ ಬಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಅಲ್ಲದೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಇದನ್ನೂ ಓದಿ | Ahimsa Chetan : ಬಿಜೆಪಿಯವರದ್ದು ಹಿಂದು ಅಜೆಂಡಾ; ಧರ್ಮದ ಪರ ಇದ್ದೇನೆನ್ನುವುದೇ ಭಯೋತ್ಪಾದನೆ: ಅಹಿಂಸಾ ಚೇತನ್