Site icon Vistara News

Sirsi News | ಅಸಮರ್ಪಕ ನೀರು ಪೂರೈಕೆ: ನಗರಸಭೆಗೆ ಮುತ್ತಿಗೆ ಹಾಕಿ‌ ಪ್ರತಿಭಟಿಸಿದ ಮಹಿಳೆಯರು

Inadequate water supply sirsi

ಶಿರಸಿ: ನಗರಸಭೆಯಿಂದ ಸಮರ್ಪಕ ನೀರು ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಶುಕ್ರವಾರ (ಡಿ.೩೦) ಶಿರಸಿಯ (Sirsi News) ಗಣೇಶ ನಗರದ ಗೋಸಾವಿ ಗಲ್ಲಿಯ ಮಹಿಳೆಯರು ನಗರಸಭೆಗೆ ಮುತ್ತಿಗೆ ಹಾಕಿ‌ ಪ್ರತಿಭಟನೆ ನಡೆಸಿದರು.

ನಗರದ ನೀರು ಪೂರೈಕೆಯಲ್ಲಿ ನಗರಸಭೆ ನಮ್ಮ ಗಲ್ಲಿಯನ್ನು ಪರಿಗಣಿಸದೆ ಮೀನಮೇಷ ಎಣಿಸುತ್ತಿದೆ. ನಮ್ಮ ಮನೆಗಳಿಗೆ ಸರಿಯಾಗಿ ನಗರಸಭೆಯಿಂದ ನೀರು ಪೂರೈಕೆಯಾಗುತ್ತಿಲ್ಲ. ಗೋಸಾವಿ ಗಲ್ಲಿಯ ಅಕ್ಕ ಪಕ್ಕದ ಬೀದಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆ. ಆದರೆ, ಗೋಸಾವಿ ಗಲ್ಲಿಗೆ ಮಾತ್ರ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪಿಸಿದರು.

ಶಿರಸಿ ನಗರಸಭೆ ವ್ಯಾಪ್ತಿಯಲ್ಲಿನ ಗೋಸಾವಿ ಗಲ್ಲಿಯಲ್ಲಿ ಗೋಸಾವಿ ಪಂಗಡದವರು ವಾಸವಾಗಿದ್ದು, ತಮಗೆ ಕುಡಿಯಲು ಸಮರ್ಪಕವಾಗಿ ನೀರು ಬರುತ್ತಿಲ್ಲ. ಸ್ನಾನ ಮಾಡಲೂ ನೀರು ಸಿಗುತ್ತಿಲ್ಲ. ನಗರಸಭೆಯವರಿಗೆ ವರ್ಷಗಟ್ಟಲೆಯಿಂದ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡರೂ ತಲೆಕೆಡಿಸಿಕೊಂಡಿಲ್ಲ. ಅನಿವಾರ್ಯವಾಗಿ ನಾವು ನಗರಸಭೆ ಕಚೇರಿಗೆ ಬಂದು ಪ್ರತಿಭಟನೆ ಮಾಡಿದ್ದೇವೆ. ನೀರು ಸರಿಯಾಗಿ ಬಾರದೇ ಅನಾರೋಗ್ಯಕ್ಕೆ ನಾವು, ನಮ್ಮ ಮಕ್ಕಳು ತುತ್ತಾಗುತ್ತಿದ್ದು, ಸೂಕ್ತ ಪರಿಹಾರವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಮಾತ್ರ ನಗರಸಭೆಯವರಿಗೆ ಗೊಸಾವಿ ಗಲ್ಲಿಯ ಜನ ನೆನಪಾಗುತ್ತಾರೆ. ನಂತರ ನಮ್ಮ ಕಡೆ ಮುಖ ಮಾಡುವುದಿಲ್ಲ ಎಂದು ನಗರಸಭೆ ವಿರುದ್ಧ ಗೋಸಾವಿ ಗಲ್ಲಿಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Pathaan Film | ಜರ್ಮನಿಯಲ್ಲಿ ಪಠಾಣ್‌ ಸಿನಿಮಾಗೆ ಸಖತ್‌ ರೆಸ್ಪಾನ್ಸ್‌: ಬಹುತೇಕ ನಗರಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್!

Exit mobile version