Site icon Vistara News

Sirsi News: ಕಾಗೇರಿ ಜನ ರಾಜಕಾರಣ ಮಾಡಿದವರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

CM Basavaraj Bommai sirsi

#image_title

ಶಿರಸಿ: “ರಾಜಕಾರಣದಲ್ಲಿ ಪವರ್ ಪಾಲಿಟಿಕ್ಸ್, ಇನ್ನೊಂದು ಪೀಪಲ್ ಪಾಲಿಟಿಕ್ಸ್ (people’s politics) ಎನ್ನುವುದಿದೆ. ಅಧಿಕಾರದ ರಾಜಕಾರಣ ಮಾಡಿದವರನ್ನು ಜನ ಕಾಣುವುದಿಲ್ಲ, ಆದರೆ ಕಾಗೇರಿಯವರು ಜನ ರಾಜಕಾರಣ ಮಾಡಿದವರು. ಜನ ರಾಜಕಾರಣ ಮಾಡಿದವರಿಗೆ ಅಧಿಕಾರವೂ ಬರುತ್ತದೆ. ಜನರ ಪ್ರೀತಿಯೂ ಇರುತ್ತದೆ. ಆರು ಬಾರಿ ಆರಿಸಿ ಬಂದಿದ್ದೀರಂದರೆ ಅದಕ್ಕೆ ಅಭಿವೃದ್ಧಿಯೇ ಕಾರಣ. ಮುಂದೆಯೂ ಸಕಾರಾತ್ಮಕವಾಗಿ ಮತ ಪಡೆದು ರಾಜ್ಯ, ಈ ಕ್ಷೇತ್ರದ ಸೇವೆ ಮಾಡಲು ಸನ್ನದ್ಧರಾಗಿರಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹೇಳಿದರು.

ಸಿದ್ದಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ಕಾಗೇರಿ ಒಬ್ಬ ಆದರ್ಶ ಜನಪ್ರತಿನಿಧಿ, ಆದರ್ಶ ನಾಯಕ. ನಾನು ಅವರನ್ನು 25 ವರ್ಷದಿಂದ ಬಲ್ಲೆ. ರಾಜಕೀಯ ಆಸೆ- ಆಮಿಷಗಳಿಗೆ ಅವರು ಎಂದೂ ಸೋತಿಲ್ಲ. ದೃಢವಾಗಿ ನಿಂತಿದ್ದಾರೆ. ನಮಗಿಂತ ಎತ್ತರದ ಸ್ಪೀಕರ್ ಸ್ಥಾನದಲ್ಲಿ ಅವರು ಕುಳಿತಿದ್ದಾರೆ. ಅಧಿವೇಶನದ ನಡುವೆಯೇ ಅವರು ನನಗೆ ಪತ್ರ ಕಳುಹಿಸಿ ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ಅನುದಾನ ಮಂಜೂರಿಸಲು ಕೇಳುತ್ತಾರೆ. ಸ್ಪೀಕರ್ ಆಗಿದ್ದರೂ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಇದೆ ಎಂದರು.

ಇದನ್ನೂ ಓದಿ: Tanveer Sait:‌ ರಾಜಕೀಯ ನಿವೃತ್ತಿ ಪ್ರಸ್ತಾಪ ಮಾಡಿದ್ದ ತನ್ವೀರ್‌ ಸೇಟ್‌ ಯೂಟರ್ನ್‌; ಈಗ ಹೇಳಿದ್ದೇನು?

ಶಿರಸಿ- ಸಿದ್ದಾಪುರ ತಾಲೂಕು ಸಮಗ್ರವಾಗಿ ಅಭಿವೃದ್ಧಿ ಆಗಿದೆ. ಇಷ್ಟು ವರ್ಷ ಆಗದ ಕೆಲಸಗಳು ಆಗಿವೆ. ಇಲ್ಲಿ ಅರಣ್ಯ ಭೂಮಿ ಇರುವುದರಿಂದ ಕೆಲವು ನೈಜ ಸಮಸ್ಯೆಗಳು ಇದ್ದರೆ, ಇನ್ನು ಕೆಲವರು ಅದನ್ನೇ ದುರುಪಯೋಗಪಡಿಸಿಕೊಂಡು ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತಾರೆ‌. ಯಾವಾಗಲೂ ಒಂದು ವರ್ಗ ಅಭಿವೃದ್ಧಿ ವಿರುದ್ಧವಾಗಿ ಇದ್ದೇ ಇರುತ್ತದೆ. ಅವರು ಜನರ ಬೇಡಿಕೆಗಳನ್ನು ಈಡೇರಿಸಿದರು. ನಾವು ಮಾಡಬೇಕಾದದ್ದನ್ನು ಅವರು ಮಾಡಿದರು ಎನ್ನುವುದು ಅವರ ವಿರೋಧಕ್ಕೆ ಕಾರಣವಷ್ಟೇ. ನನಗೂ ಸಾಕಷ್ಟು ಟೀಕೆ- ಟಿಪ್ಪಣಿಗಳು ಬರುತ್ತವೆ. ಯಾವುದಾದರೂ ಯೋಜನೆ ಘೋಷಣೆ ಮಾಡಿದಾಗ ಅದನ್ನು ನಾವೇ ಮೊದಲು ಯೋಚನೆ ಮಾಡಿದ್ದೆವು, ಕಮಿಟಿ ಮಾಡಿದ್ದೆವು ಎನ್ನುತ್ತಾರೆ. ಯೋಚನೆ ಮಾಡಿದ್ದರೆ ಯಾಕೆ ಮಾಡಿಲ್ಲ? ಈ ದೇಶದಲ್ಲಿ ಕಮಿಟಿ ಮಾಡುವಷ್ಟು ಸುಲಭದ್ದು ಮತ್ಯಾವುದೂ ಇಲ್ಲ. ಕೆಲವರು ಕಮಿಟಿಯೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: Nokia Logo: 60 ವರ್ಷಗಳ ನಂತರ ಲೋಗೋ ಬದಲಿಸಿದ ನೋಕಿಯಾ; ನೀಲಿ ಬಣ್ಣ ಹೋಯ್ತು, ಅಕ್ಷರಗಳ ವಿನ್ಯಾಸ ಬದಲಾಯ್ತು

ಏನೇ ಮಾಡಿದರೂ ಕೆಲವರು ಸಮಸ್ಯೆ ತರುತ್ತಾರೆಂಬ ಚಿಂತೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಕಾಡುತ್ತಿದೆ. ಆದರೆ ಹೆದರಬೇಡಿ, ಯಾವುದಾದರೂ ಪ್ರಮುಖ ಯೋಜನೆಗೆ ಸಮಸ್ಯೆ ಬಂದಿಲ್ಲವೆಂದರೆ ಅದು ಪ್ರಮುಖ ಯೋಜನೆಯೇ ಅಲ್ಲ. ಇಚ್ಛಾಶಕ್ತಿಯಿಂದ ಜನ ಕಲ್ಯಾಣ ಮಾಡಬೇಕು. ಅದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತವೆ. ಚಿಂತೆ ಮಾಡಬೇಡಿ ಎಂದು ಕಾಗೇರಿಗೆ ಸಿಎಂ ಧೈರ್ಯ ಹೇಳಿದರು.

ಮನುಷ್ಯರಿಗೆ ಎರಡು ಥರದ ಗುಣವಿರುತ್ತದೆ. ಒಂದು ಅರ್ಜುನನಂತೆ, ಅಂಥವರಿಗೆ ಬಹಳ ಹೊಗಳಿ, ಅಟ್ಟಕ್ಕೇರಿಸಬೇಕು‌. ಇನ್ನೊಂದು ಕರ್ಣನಂತೆ, ಅವರಿಗೆ ಹೊಗಳಿಕೆಗಿಂತ ತೆಗಳಿದರೆ ಕೆಲಸ ಮಾಡುತ್ತಾರೆ. ನೀವೆಲ್ಲ ಕರ್ಣನ ಜಾತಿಗೆ ಸೇರಿದವರು. ಸವಾಲುಗಳನ್ನು ಸ್ವೀಕರಿಸಿ, ಮುನ್ನುಗ್ಗಿ. ಈವರೆಗೂ ಯಶಸ್ವಿಯಾಗಿದ್ವೀರಿ, ಮುಂದೆಯೂ ಯಶಸ್ವಿಯಾಗುತ್ತೀರಿ ಎಂದು ಹಾರೈಸಿದ ಸಿಎಂ, ಜನ ಕಲ್ಯಾಣ ಮಾಡಲು ಸ್ಥಾನ ಅಡ್ಡಿ ಬರುವುದಿಲ್ಲ. ಯಾರು ಬೇಕಾದರೂ ನಿಲ್ಲಲ್ಲಿ, ಕಳೆದ ಬಾರಿಗಿಂತ ಅಧಿಕ ಮತದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಈ ಬಾರಿ ಗೆದ್ದು ಬರುತ್ತಾರೆ. ಯಾಕೆಂದರೆ ಅಷ್ಟು ಕೆಲಸ ಮಾಡಿದ್ದಾರೆ ಎಂದರು.

ಇದನ್ನೂ ಓದಿ: 7th Pay Commission : ನೌಕರರ ಮುಷ್ಕರ ಸಮಸ್ಯೆ ಸಂಜೆಯೊಳಗೆ ಇತ್ಯರ್ಥ: ಬೊಮ್ಮಾಯಿ ವಿಶ್ವಾಸ, ಕೈಲಾಗದ ಸಿಎಂ ಎಂದ ಕಾಂಗ್ರೆಸ್‌

Exit mobile version