Site icon Vistara News

Sirsi News: ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ: ಗಂಗಾವತಿ ಪ್ರಾಣೇಶ

Gangavathi Pranesh nisarga mane sirsi

#image_title

ಶಿರಸಿ: “ಕನ್ನಡ ಭಾಷೆಯು ವ್ಯಕ್ತಿಯ ಯೋಗ್ಯತೆಯನ್ನು ಕಟ್ಟಿ ಕೊಡುತ್ತದೆ” ಎಂದು ಹಾಸ್ಯ ಚಕ್ರವರ್ತಿ, ಅಭಿನವ ಬೀಚಿ ಎಂದೇ‌ ಪ್ರಸಿದ್ಧರಾದ ಗಂಗಾವತಿ ಪ್ರಾಣೇಶ (Gangavathi Pranesh) ಬಣ್ಣಿಸಿದರು.

ಅವರು ನಗರದ ಹೊರ ವಲಯದ ನಿಸರ್ಗ ಮನೆಯಲ್ಲಿ‌ ನಡೆದ ಹಾಸ್ಯ ಸಂಜೆಯಲ್ಲಿ ಪಾಲ್ಗೊಂಡು ಮಾತನಾಡಿ,
“ಆಂಗ್ಲ ಭಾಷೆ ಎಂಬುದು ಭಾವ ಹಾಗೂ ವ್ಯಕ್ತಿಯ ವ್ಯಕ್ತಿತ್ವ ಕಟ್ಟಿ ಕೊಡುವುದಿಲ್ಲ. ಮಕ್ಕಳಿಗೆ ಶುದ್ಧ ಕನ್ನಡ‌ ಕಲಿಸಬೇಕು. ಮಾತೃ ಭಾಷೆ ಮೂಲಕ ಮನಸ್ಸಿನಲ್ಲಿ ಭಾವ ತುಂಬಿಸಲು ಸಾಧ್ಯವಿದೆ‌” ಎಂದರು.

ಕನ್ನಡದಲ್ಲಿ ಪ್ರಾಂತೀಯ ಭಾಷೆಗಳು ಸಾಕಷ್ಟು ಸಿಗುತ್ತವೆ. ಕನ್ನಡದಲ್ಲಿ ಎಷ್ಟೊಂದು ಶಬ್ದಗಳಿವೆ ಎಂದು ವಿವರಿಸಿ ಮಾತನಾಡಿದ ಪ್ರಾಣೇಶ್, ಶುದ್ಧ ಹವೆ, ಒಳ್ಳೆಯ ಪರಿಸರದ ಜತೆ ಶುದ್ಧ ಆಹಾರ ಕೂಡ ಬಳಸಬೇಕು. ನಿಸರ್ಗ ಮನೆ ನಾವು ಹೇಗೆ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಇಲ್ಲಿ ಇದು ಹಿಂಸೆಯಲ್ಲ.‌ ಹತ್ತು‌ ದಿನದ ಚಿಕಿತ್ಸೆ ಬಳಿಕ ಮನೆಯಲ್ಲೂ‌ ಅದನ್ನು ಅನುಸರಿಸಬೇಕಿದೆ” ಎಂದರು.

“ಮೊಬೈಲ್ ಅನ್ನು ಬಹಳ ಹೊತ್ತ ಹಿಡಿದುಕೊಂಡರೆ ನಾವು‌ ಕುಳಿತುಕೊಳ್ಳುವ ಭಂಗಿ ಕೂಡ ಬದಲಾಗುತ್ತದೆ. ಅತಿ‌ಯಾದ ಮೊಬೈಲ್ ಸಹವಾಸ ಒಳಿತಲ್ಲ” ಎಂದು ಸಲಹೆ ನೀಡಿದರು.

ಪ್ರಸಿದ್ಧ ಹಾಸ್ಯ ಕಲಾವಿದ ಬಸವರಾಜ್‌ ಮಹಾಮನಿ ಮಾತನಾಡಿ, “ಒಂದೊಂದು‌ ಮಾತಿನಲ್ಲಿಯೂ ಹಾಸ್ಯ ನೋಡಬಹುದು. ಮನೆ ಮನೆಯಲ್ಲಿ ಹಾಸ್ಯವಿದೆ. ಹಾಸ್ಯವನ್ನು ಹಾಸ್ಯವಾಗಿ ಸ್ವೀಕಾರ ಮಾಡಬೇಕು‌. ಯಾವುದೇ ಕಲೆಯಾದರೂ ಆ ಕಲೆಯನ್ನು ಉಳಿಸಬೇಕಾಗಿದೆ. ಮುಖ್ಯವಾಗಿ ದೇಶೀಯ ಕಲೆ ಉಳಿಸಿ ಬೆಳೆಸಬೇಕಿದೆ. “ತಂದೆ ತಾಯಿ, ಗುರು ಹಿರಿಯರ ಮಾತು ಕೇಳಿ ಜೀವನವನ್ನು ಸುಖವಾಗಿ ನಡೆಸಬೇಕು” ಎಂದು ಹೇಳಿದರು.

ಇದನ್ನೂ ಓದಿ: Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್‌ ಕುರ್ತಾಗಳು

ನಿಸರ್ಗ ಮನೆಯ ವೈದ್ಯ, ಲೇಖಕ ಡಾ. ವೆಂಕಟರಮಣ ಹೆಗಡೆ ಪ್ರಾಸ್ತಾವಿಕ‌ ಮಾತನಾಡಿದರು. ಬಳಿಕ ತುಳಸಿ ಹೆಗಡೆ ಅವರಿಂದ ವಿಶ್ವಶಾಂತಿ‌ ಸರಣಿಯ ವಂಶೀ ವಿಲಾಸ ಯಕ್ಷನೃತ್ಯ ರೂಪಕ ಪ್ರದರ್ಶನ ನಡೆಯಿತು.

Exit mobile version