Site icon Vistara News

Sirsi News: ಸಿದ್ದಾಪುರದ ಹೆಗ್ಗರಣಿಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷ!

King Cobra found in Heggarani village

ಶಿರಸಿ(ಸಿದ್ದಾಪುರ): ಭಾರೀ ಗಾತ್ರದ ಕಾಳಿಂಗ ಸರ್ಪವೊಂದು (King Cobra) ಪ್ರತ್ಯಕ್ಷವಾದ ಘಟನೆ ಸಿದ್ದಾಪುರ ತಾಲೂಕಿನ ಹೆಗ್ಗರಣಿಯಲ್ಲಿ ಜರುಗಿದೆ.

ಹೆಗ್ಗರಣಿ ಗ್ರಾಮದ ಸಂದೀಪ್ ಹೆಗಡೆ ಎಂಬುವವರ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವು ಅಂತೂ ಸೆರೆ ಸಿಕ್ಕಿದೆ. 10 ಅಡಿ ಉದ್ದ 16 ಕೆ.ಜಿ ತೂಕದ ಭಾರೀ ಗಾತ್ರದ ಕಾಳಿಂಗ ಸರ್ಪ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ಪ್ರಶಾಂತ್ ಹುಲೇಕಲ್, ಸತತ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Exit mobile version