ಶಿರಸಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು (King Cobra) ಪ್ರತ್ಯಕ್ಷವಾದ ಘಟನೆ ತಾಲೂಕಿನ ಮರ್ಲಮನೆ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಗಣಪತಿ ಆರ್. ಹೆಗಡೆ ಎಂಬುವರ ತೋಟದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಕಾಳಿಂಗ ಸರ್ಪವು ಅಂತೂ ಸೆರೆ ಸಿಕ್ಕಿದೆ. 10 ಅಡಿ ಉದ್ದ 15 ಕೆ.ಜಿ ತೂಕದ ಭಾರೀ ಗಾತ್ರದ ಕಾಳಿಂಗ ಸರ್ಪ ತೋಟದ ಮನೆಯಂಗಳದಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ಪ್ರಶಾಂತ್ ಹುಲೇಕಲ್ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: Sirsi News: ಉತ್ತರ ಕನ್ನಡದಲ್ಲಿ ಬೆಂಕಿ ರೋಗಕ್ಕೆ ತುತ್ತಾದ ಭತ್ತ; ಕಂಗಾಲಾದ ರೈತ
ಗುರುವಾರ ಮಧ್ಯಾಹ್ನ ಕಾಳಿಂಗ ಸರ್ಪ ಮನೆಯಂಗಳದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಪ್ರಶಾಂತ್, ಸತತ ಒಂದು ಗಂಟೆ ಪ್ರಯತ್ನಪಟ್ಟು ಹಾವನ್ನು ಸೆರೆಹಿಡಿದು, ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.