Site icon Vistara News

Sirsi News : ಬಸ್‌ ನಿಲ್ಲಿಸದ ಚಾಲಕ; ಚೇಸ್‌ ಮಾಡಿ ಅಡ್ಡಗಟ್ಟಿದ ಮಳಲಗಾಂ ಗ್ರಾಮಸ್ಥರು!

driver did not stop bus

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಹಾವೇರಿ ಮಾರ್ಗದ (Sirsi News) ಮಳಲಗಾಂ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್‌ ನಿಲ್ಲಿಸದೆ ಹೋಗುತ್ತಿದ್ದ ವಾಯವ್ಯ ಸಾರಿಗೆ (Nwkrtc bus) ಚಾಲಕನಿಗೆ ಗ್ರಾಮಸ್ಥರು ನೀರಿಳಿಸಿದ್ದಾರೆ. ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ನಿಂತಿದ್ದರೂ, ಚಾಲಕ ಬಸ್‌ ನಿಲ್ಲಸದೆ ಹೋಗಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಬಸ್ ಚೇಸ್‌ ಮಾಡಿ ಡ್ರೈವರ್‌ ಹಾಗೂ ಕಂಡಕ್ಟರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಬರೆಯಲು ಹೊರಟಿರುವ ಮಕ್ಕಳಿಗೆ ಬಸ್‌ ನಿಲ್ಲಿಸದೆ ಹೋಗಿದ್ದಕ್ಕೆ ಕಿಡಿಕಾರಿದ್ದಾರೆ. ಮಕ್ಕಳ ಭವಿಷ್ಯದ ಜತೆಗೆ ಆಟವಾಡುತ್ತಿದ್ದೀರಾ ಎಂದು ಗರಂ ಆಗಿದ್ದಾರೆ.

ಬೈಕ್‌ನಲ್ಲಿ ಚೇಸ್‌ ಮಾಡಿದ ಗ್ರಾಮಸ್ಥರು ಅಡ್ಡಗಟ್ಟಿ ಬಳಿಕ ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿದ್ದಾರೆ. ಹಾವೇರಿ-ಶಿರಸಿ ಮಾರ್ಗವಾಗಿ ಸಂಚರಿಸುವ ವಾಯವ್ಯ ಕರ್ನಾಟಕ ಸಾರಿಗೆ ಇದಾಗಿದೆ. ವಿದ್ಯಾರ್ಥಿಗಳು ಬಸ್‌ ನಿಲ್ಲಿಸುವಂತೆ ಕೈ ತೋರಿದರೂ ನಿಲ್ಲಸದೆ ತೆರಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಲ್ಲೆ ಇದ್ದ ಗ್ರಾಮಸ್ಥರು ಬಸ್‌ ಅಡ್ಡಗಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version