ಶಿರಸಿ: ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ಶಿರಸಿ ಜಿಲ್ಲೆಯನ್ನು ರಚಿಸಬೇಕು ಮತ್ತು ಇದೇ ವಿಧಾನಸಭಾ ಅಧಿವೇಶನದಲ್ಲಿ ಜಿಲ್ಲಾ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ (Sirsi News) ಬೃಹತ್ ಪ್ರತಿಭಟನಾ ರ‍್ಯಾಲಿ ಶನಿವಾರ ನಡೆಯಿತು.
ನಗರದ ಹಳೆ ಬಸ್ ನಿಲ್ದಾಣ ಸರ್ಕಲ್ ನಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು, ವಿದ್ಯಾರ್ಥಿಗಳು ಆಗಮಿಸಿ ಶಿರಸಿ ಜಿಲ್ಲೆಗಾಗಿ ಹಕ್ಕೊತ್ತಾಯ ಮಾಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ರ‌್ಯಾಲಿಯು ಶಿರಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ನಗರದ ಝೂ ಸರ್ಕಲ್ ಬಳಿ ಟೈರ್‌ಗೆ ಬೆಂಕಿ ಹಚ್ಚಲಾಯಿತು. ಪಕ್ಷಾತೀತವಾಗಿ ನಡೆದ ರ‌್ಯಾಲಿಯಲ್ಲಿ ಯಾವುದೇ ಕಾರಣಕ್ಕೂ ಶಿರಸಿ ಜಿಲ್ಲೆ ಘೋಷಣೆ ಮಾಡಬೇಕೆಂಬ ಕೂಗು ಪ್ರತಿಭಟನೆಯುದ್ದಕ್ಕೂ ಮಾರ್ದನಿಸಿತು. ಈ ವೇಳೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಎಂ ಎಂ ಭಟ್ಟ, ಸದಾನಂದ ಭಟ್ಟ ರಘು ಕಾನಡೆ, ಪರಮಾನಂದ ಹೆಗಡೆ, ವೀಣಾ ಶೆಟ್ಟಿ, ಭೀಮಣ್ಣ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.
ಇದನ್ನೂ ಓದಿ | Coronavirus | ಆಕ್ಸಿಜನ್, ವೆಂಟಿಲೇಟರ್ ಕಡೆ ಗಮನಹರಿಸಿ, ಕೇಂದ್ರದ ಹೊಸ ಮಾರ್ಗಸೂಚಿಯಲ್ಲಿ ಮತ್ತೇನಿದೆ?