Site icon Vistara News

Sirsi News: ಶ್ರೀಮಾತೆ ಬಸವೇಶ್ವರಿ ಅವರನ್ನು ಏಕ ವಚನದಲ್ಲಿ ನಿಂದಿಸಿದ ಸಚಿವ ಶಿವರಾಮ್ ಹೆಬ್ಬಾರ್: ಭಕ್ತಾದಿಗಳಿಂದ ಆಕ್ರೋಶ

Basava dhama Sri Mata Basaveshwari

#image_title

ಶಿರಸಿ(ಮುಂಡಗೋಡ): (Sirsi News) ತಾಲೂಕಿನ ಅತ್ತಿವೇರಿ ಬಸವ ಧಾಮದ ಶ್ರೀಮಾತೆ ಬಸವೇಶ್ವರಿ ಅವರನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಏಕ ವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ಶ್ರೀಮಾತೆಯ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಡಗೋಡಿನ ಜಮಖಂಡಿ ಪ್ರವಾಸಿ ಮಂದಿರದಲ್ಲಿ‌ ಸುದ್ದಿಗೋಷ್ಠಿ ನಡೆಸಿದ ಭಕ್ತಾದಿಗಳು, ಸಚಿವರ ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ. ಅತ್ತಿವೇರಿ ಬಸವ ಧಾಮದ ಪೂಜ್ಯ ಬಸವೇಶ್ವರಿ ಮಾತೆ ಅವರನ್ನು ನಿಂದಿಸಿದ್ದನ್ನು ಖಂಡಿಸಿದ್ದಾರೆ. ಹೀಗಾಗಿ, ಸಚಿವರು ಮಾತೆ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | Pathaan Movie: ವಿಶ್ವಾದ್ಯಂತ 542 ಕೋಟಿ ರೂ. ಬಾಚಿದ ಪಠಾಣ್‌

ಮುಂಡಗೋಡ ತಾಲೂಕಿನ ಉಗ್ನಿಕೇರಿಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಗ್ರಾಮ ದೇವಿಯ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕಾಗಿ ಗ್ರಾಮದ ಕೆಲವರು ಕಾರ್ಮಿಕ ಸಚಿವರ ಬಳಿ ಕಳೆದ ಮಂಗಳವಾರವೇ ಜಾತ್ರೆಗೆ ಆಮಂತ್ರಿಸಲು ಹೋಗಿದ್ದರು. ಜಾತ್ರೆಯ ಆಹ್ವಾನ ಪತ್ರಿಕೆಯಲ್ಲಿ ಮಾತೆ ಬಸವೇಶ್ವರಿ ಅವರ ಭಾವಚಿತ್ರ ಹಾಕಿದ್ದನ್ನು ನೋಡಿದ ಸಚಿವರು, ಏಕಾಏಕಿ ವಾಗ್ದಾಳಿ ನಡೆಸಿದ್ದಾರೆ. ಈಕೆಯ ಪೋಟೊ ಯಾಕೆ ಹಾಕಿದ್ದೀರಿ..? ಈಕೆ ವಿ.ಎಸ್.ಪಾಟೀಲ್ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾಳೆ. ಈಕೆಯ ಫೋಟೊ ತೆಗೆದು ಹಾಕಿ. ಅವರ ಹೆಸರು ತೆಗೆದರೆ ಮಾತ್ರ ನಾನು ನಿಮ್ಮ ಜಾತ್ರೆಗೆ ಒಂದು ಲಕ್ಷ ರೂ. ದೇಣಿಗೆ ಕೊಡುತ್ತೇನೆ. ಇಲ್ಲಾಂದ್ರೆ ಇಲ್ಲ ಎಂದು ಹೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ | ಕೋಲಾರ , ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೊಡ್ಡ ಪರಿವರ್ತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈಗಾಗಲೇ ಆಹ್ವಾನ ಪತ್ರಿಕೆ ಮುದ್ರಣಗೊಂಡಿದೆ. ಅಲ್ಲದೇ, ಬಸವೇಶ್ವರಿ ಮಾತೆ ಅವರು ನಮ್ಮ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನಡೆಸಲು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಪೂಜ್ಯರ ಭಾವಚಿತ್ರ ತೆಗೆದು ಹಾಕೋಕೆ ಹೇಗೆ ಸಾಧ್ಯ ಅಂತ ಗ್ರಾಮಸ್ಥರು ಕೇಳಿದರು ಕೂಡ ಸಚಿವರು ಕ್ಯಾರೆ ಎನ್ನಲಿಲ್ಲ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಭಕ್ತಾದಿಗಳು‌ ಶ್ರೀಮಾತೆ ಬಸವೇಶ್ವರಿ ಅವರಲ್ಲಿ ಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವೇಳೆ ಉಗ್ನಿಕೇರಿಯ ಮುಖಂಡ ಈರಯ್ಯ ನಡುವಿನಮನಿ, ಇಂದೂರಿನ ಮುಖಂಡ ಬಿ.ಕೆ. ಪಾಟೀಲ್, ಮುಂಡಗೋಡಿನ ಮುಸ್ಲಿಂ ಮುಖಂಡ ರಾಮು ಬೆಳ್ಳೆನವರ್, ರವಿಚಂದ್ರ ದುಗ್ಗಳ್ಳಿ, ಬಿ.ಡಿ. ಹೋತಗಣ್ಣವರ್, ವಿ.ಎಂ. ಪಾಟೀಲ್, ಸುರೇಶ್ ಕನ್ನೊಳ್ಳಿ, ಎ.ಬಿ.ಹೂಗಾರ್, ಬಿಸ್ಟನಗೌಡ ಪಾಟೀಲ್, ಮಹದೇಶ್ವರ ಲಿಂಗದಾಳ್, ಸಂಗಮೇಶ್ ಕೊಳೂರು ಸೇರಿದಂತೆ ಹಲವರಿದ್ದರು.

ಇದನ್ನೂ ಓದಿ | ಸಿದ್ದರಾಮಯ್ಯ ಅವರ ಹೆಣ ಬಿಜೆಪಿಗೆ ಬೇಕಿಲ್ಲ: ಮಾಜಿ ಸಿಎಂ ಮಾತಿಗೆ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ

Exit mobile version