Site icon Vistara News

Sirsi News: ಉತ್ತರಕನ್ನಡ ಜಿಲ್ಲೆಗೆ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಧರಣಿ

Protest demanding construction of medical college and super specialty hospital in Uttara Kannada district

ಶಿರಸಿ: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು (Medical College) ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Specialty Hospital) ನಿರ್ಮಾಣ ಮಾಡುವಂತೆ ಆಗ್ರಹಿಸಿ, ಸ್ಥಳೀಯ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 2ನೇ ಹಂತದ ಹೋರಾಟದ ಭಾಗವಾದ ಧರಣಿ ಸತ್ಯಾಗ್ರಹಕ್ಕೆ ಶಿರಸಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ನಗರದ ಮಾರಿಕಾಂಬಾ ದೇವಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಅಂಚೆವೃತ್ತ, ಸಿಪಿ ಬಜಾರ್, ದೇವಿಕೇರೆ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ಧರಣಿ ನಡೆಸಿದರು.

ಈ ವೇಳೆ ಮುಖಂಡ ಅನಂತಮೂರ್ತಿ ಹೆಗಡೆ ಮಾತನಾಡಿ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿವೆ, ಜಿಲ್ಲೆಯು ಸಮಸ್ಯೆಗಳ ತಾಣವಾಗಿದ್ದು, ಉತ್ತರವೇ ಕಾಣದ ಉತ್ತರ ಕನ್ನಡ ಜಿಲ್ಲೆ ಎಂಬುವಂತಾಗಿದೆ, ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಸಡ್ಡೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Pneumonia Outbreak: ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಅಲರ್ಟ್‌

ಕುಮಟಾ ಭಾಗದಲ್ಲಿ ಮತ್ತು ಶಿರಸಿ ಭಾಗದಲ್ಲಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಶಿರಸಿಯಿಂದ ಪಾದಯಾತ್ರೆ ಮೂಲಕ ಕಾರವಾರ ತಲುಪಿ ಮನವಿ ನೀಡಿದ್ದೆವು. ಸರ್ಕಾರ ಮಾತ್ರ ಪ್ರತಿಕ್ರಿಯೆ ನೀಡಿಲ್ಲ. ಈ ಕಾರಣಕ್ಕೆ ಎರಡನೇ ಹಂತದ ಹೋರಾಟಕ್ಕೆ ಇಳಿದಿದ್ದೇವೆ. ಇಂದಿನಿಂದ ಪ್ರತಿನಿತ್ಯ ನಗರದ ಮಿನಿವಿಧಾನಸೌಧ ಎದುರು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ನಿರಂತರ ಹೋರಾಟ ಮಾಡಲಾಗುವುದು. ನಂತರ ಡಿ.4 ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸಿ, ಮುಖ್ಯಮಂತ್ರಿಗೆ ಮನವಿ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಕೇಂದ್ರದ ಪಿಎಂ ಗರೀಬ್ ಕಲ್ಯಾಣ್ ಅನ್ನ ಸ್ಕೀಂ 5 ವರ್ಷದವರೆಗೆ ವಿಸ್ತರಣೆ!

ಈ ಸಂದರ್ಭದಲ್ಲಿ ಪ್ರಮುಖರಾದ ಉಮೇಶ ಹರಿಕಂತ್ರ, ಪರಮಾನಂದ ಹೆಗಡೆ, ಚಿದಾನಂದ ಹರಿಜನ, ಕೆಮು ಮರಾಠಿಕೊಪ್ಪ, ಸಂತೋಷ ನಾಯ್ಕ ಬ್ಯಾಗದ್ದೆ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

Exit mobile version