ಸಿದ್ದಾಪುರ (ಶಿರಸಿ): ತಾಲೂಕಿನ ಕರಮನೆ ಸಮೀಪದ ಶ್ರೀನಿವಾಸ ಜಡ್ಡಿ ಗ್ರಾಮದವರು ತೂಗು ಸೇತುವೆ ಆಗುವವರೆಗೂ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ (Boycott of elections) ಬ್ಯಾನರ್ ಹಾಕಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.
ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು, ನಾಮಫಲಕದಲ್ಲಿ “ರಾಜಕಾರಣಿಗಳೇ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದೇವೆ” ಎಂದು ನಾಮಫಲಕ ಅಳವಡಿಸಿದ್ದಾರೆ. ವಿಷಯ ತಿಳಿದ ತಾಲೂಕು ಆಡಳಿತಾಧಿಕಾರಿಗಳು ರಾತ್ರಿ ವೇಳೆಯಲ್ಲಿ ಊರಿಗೆ ಆಗಮಿಸಿ ಜನರೊಂದಿಗೆ ಚರ್ಚೆ ನಡೆಸಿದರು. ಸಿದ್ದಾಪುರದ ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ, ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ದಿಲೀಪ, ತಾ.ಪಂ. ಕಾರ್ಯನಿರ್ವಾಹಕ ಪ್ರಶಾಂತ ರಾವ್ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.
ಇದನ್ನೂ ಓದಿ: Karnataka Election : ತೇಜಸ್ವಿ ಸೂರ್ಯ ಹೇಳಿದ ಬೆಕ್ಕುಗಳ ಸ್ಟೋರಿ! ರಾಜಕೀಯ ಶುರು ಮಾಡಿದ್ವಾ ಮಾರ್ಜಾಲಗಳು!
ಈ ಸಂದರ್ಭದಲ್ಲಿ ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಡುವ ತಾತ್ಕಾಲಿಕ ಭರವಸೆಯನ್ನು ನೀಡಿ, ರಸ್ತೆಯಲ್ಲಿ ಹಾಕಿರುವ ನಾಮಫಲಕವನ್ನು ತೆಗೆಯುವಂತೆ ವಿನಂತಿಸಿದರೆ, ಊರ ನಾಗರಿಕರು, “ಯಾವುದೇ ಕಾರಣಕ್ಕೂ ನಿಮ್ಮ ಭರವಸೆಯನ್ನು ನಾವು ನಂಬುವುದಿಲ್ಲ. ನೀವು ಕಾಮಗಾರಿಯನ್ನು ಪ್ರಾರಂಭಿಸಿ. ಅಲ್ಲಿಯವರೆಗೆ ನಾವು ಹೋರಾಟವನ್ನು ನಡೆಸಿ, ಯಾವುದೇ ಕಾರಣಕ್ಕೂ ನಾಮಫಲಕವನ್ನು ತೆಗೆಯುವುದಿಲ್ಲ” ಎಂಬ ಪಟ್ಟು ಹಿಡಿದರು. ತಹಶೀಲ್ದಾರ ಮಂಜುನಾಥ ಅವರು, “ಈ ಕುರಿತು ಹಿರಿಯ ಅಧಿಕಾರಿಗಳಿಗೆ ನಾವು ಮಾಹಿತಿಯನ್ನು ತಿಳಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆ ಮಾಡುತ್ತೇವೆ” ಎಂಬ ಹೇಳಿಕೆಯನ್ನು ನೀಡಿದರು.
ಇದನ್ನೂ ಓದಿ: Sensex market crash : ಸೆನ್ಸೆಕ್ಸ್ 700 ಅಂಕ ಪತನ, ಹೂಡಿಕೆದಾರರಿಗೆ 4 ದಿನದಲ್ಲಿ 7 ಲಕ್ಷ ಕೋಟಿ ರೂ. ನಷ್ಟ, ಕಾರಣವೇನು?