ಬಾಗಲಕೋಟೆ: ಬಕ್ರೀದ್ ಹಬ್ಬ (Eid al Adha) ಹಿನ್ನೆಲೆ ಅನಧಿಕೃತವಾದ ಪ್ರಾಣಿವಧೆಯನ್ನು (Cow Slaughter) ನಿರ್ಬಂಧಿಸಲಾಗಿದ್ದರೂ ಸಹ ಬಾಗಲಕೋಟೆಯಲ್ಲಿ ಅಕ್ರಮವಾಗಿ ಗೋವುಗಳ ಕಡಿಯಲಾಗಿದೆ. ಮುಷ್ಟಿಗೇರಿ ಗ್ರಾಮದ ಜಮೀನು ಒಂದರಲ್ಲಿ ಗುಡ್ಡದ ಜಮೀನಿನಲ್ಲಿ ಟೆಂಟ್ ಹಾಕಿಕೊಂಡು ಅಂದಾಜು 9 ಹಸುಗಳನ್ನು ತುಂಡರಿಸಲಾಗಿದೆ.
ಚಿಕ್ಕ ಚಿಕ್ಕ ಪೀಸ್‌ಗಳನ್ನಾಗಿ ಮಾಡಿ 20ಕ್ಕೂ ಹೆಚ್ಚು ಚೀಲಗಳಲ್ಲಿ ಗೋವು ಮಾಂಸವನ್ನು ತುಂಬಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶ್ರೀರಾಮ ಸೇನಾ ಕಾರ್ಯಕರ್ತರು ಕೈಗೆ ಸಿಕ್ಕ ಒಬ್ಬನನ್ನು ಥಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಿದ್ದಾರೆ. ಗೋಹತ್ಯೆ ಮಾಡಿದವರೆಲ್ಲರೂ ಕೆರೂರು ಮೂಲದವರು ಎನ್ನಲಾಗಿದೆ. ಅಂದಾಜು 20 ಜನರಿದ್ದ ತಂಡದಲ್ಲಿ ಅಜರ್ ಹುಲ್ಲಿಕೇರಿ ಎಂಬಾತನ ಸಿಕ್ಕಿಬಿದ್ದಿದ್ದಾನೆ. ಜಮೀನಿನಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ರಕ್ಷಣೆ ಮಾಡಲಾಗಿದೆ.
ಗೋ ಹತ್ಯೆ ಖಂಡಿಸಿ ರಸ್ತೆ ಬಂದ್
ಗೋ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಬಾದಾಮಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಾದಾಮಿಯ ರಾಮದುರ್ಗ ವೃತ್ತದಲ್ಲಿ ರಸ್ತೆ ಬಂದ್ ಮಾಡಿ, ಟೈಯರ್‌ಗೆ ಬೆಂಕಿ ಹಚ್ಚಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಯಲ್ಲಿ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು. ಸದ್ಯ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತವಾಗಿದ್ದು, ಇನ್ನುಳಿದ ಗೋ ಹಂತಕರ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Eid al Adha: ನಮ್ಮ ನಡುವೆಯೇ ಧ್ವೇಷ ಹುಟ್ಟುಹಾಕುವವರಿದ್ದಾರೆ: ಬಕ್ರೀದ್ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತು
ಬಲಿಗಾಗಿ ತಂದಿದ್ದ ರಾಸುಗಳು ರಕ್ಷಣೆ
ಚಿತ್ರದುರ್ಗದ ಹಿರಿಯೂರು ನಗರದ ಹಾಜದ್ ನಗರದಲ್ಲಿ ಬಕ್ರೀದ್ ಹಿನ್ನೆಲೆ ಹತ್ಯೆ ಮಾಡಲು ತಂದಿದ್ದ ರಾಸುಗಳು ರಕ್ಷಣೆ ಮಾಡಲಾಗಿದೆ. ಸುಮಾರು 27ಕ್ಕೂ ಹೆಚ್ಚು ರಾಸುಗಳನ್ನು ಪೊಲೀಸರು ರಕ್ಷಣೆ ಮಾಡಿ ಚಳ್ಳಕೆರೆಯ ಗೋಶಾಲೆಗೆ ಸ್ಥಳಾಂತರಿಸಿದ್ದಾರೆ. ದನಗಳಿಗೆ ಮೇವು, ನೀರು ನೀಡದೆ ಕಟ್ಟಿ ಹಾಕಿದ್ದರು. ಹಿಂದೂಪರ ಸಂಘಟನೆಗಳು ನೀಡಿದ್ದ ದೂರು ಹಿನ್ನೆಲೆ ದಿಢೀರ್ ದಾಳಿ ಮಾಡಿ ದನಗಳನ್ನು ರಕ್ಷಣೆ ಮಾಡಲಾಗಿದೆ. ಘಟನೆ ಸಂಬಂಧ ಹಿರಿಯೂರು ನಗರದ ಟೌನ್ ಸ್ಟೇಶನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ