Site icon Vistara News

Smriti Sangeetha | ಮಲ್ಲೇಶ್ವರದಲ್ಲಿ ಜ. 8ರಂದು ʼಸ್ಮೃತಿ ಸಂಗೀತʼ ಕಾರ್ಯಕ್ರಮ

Smriti Sangeetha

ಬೆಂಗಳೂರು: ಬೆಂಗಳೂರಿನ ಸಪ್ತಕ ಸಂಸ್ಥೆಯಿಂದ ಪ್ರಖ್ಯಾತ ತಬಲಾ ಹಾಗೂ ಹಾರ್ಮೋನಿಯಂ ವಿದ್ವಾಂಸರಾದ ಶ್ರೀ ಗುರುನಂದನ ಕಲ್ಯಾಣಪುರ ಅವರ ನೆನಪಿಗಾಗಿ ಜನವರಿ 8 ರಂದು ಸಂಜೆ ೪.30ಕ್ಕೆ ನಗರದ ಮಲ್ಲೇಶ್ವರದ ರೈಲ್ವೆ ಸ್ಟೇಷನ್ ಹತ್ತಿರ, 11ನೇ ಅಡ್ಡ ರಸ್ತೆಯ ಶ್ರೀ ಅಖಿಲ ಹವ್ಯಕ ಮಹಾಸಭಾದ ಹವ್ಯಕ ಸಭಾ ಭವನದಲ್ಲಿ ʼಸ್ಮೃತಿ ಸಂಗೀತʼ (Smriti Sangeetha) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗಾಯಕಿಯರಾದ ಅಮೃತಾ ರಾವ್, ಆರ್ಯ ಧಾರೇಶ್ವರ

ಕಾರ್ಯಕ್ರಮದ ಭಾಗವಾಗಿ ಭಾನುವಾರ ಸಂಜೆ 4.30ರಿಂದ 5.30ರವರೆಗೆ ಮುಂಬೈನ ಯಶಸ್ವೀ ಸರ್ಪೋತದಾರ್ ಅವರ ಶಿಷ್ಯೆ ಗಾಯಕಿ ಆರ್ಯ ಧಾರೇಶ್ವರ, ತಬಲಾ ವಾದಕ ಗೇರುಸೊಪ್ಪದ ಪರಮೇಶ್ವರ ಹೆಗಡೆ ಹಾಗೂ ಬೆಂಗಳೂರಿನ ಹಾರ್ಮೋನಿಯಂ ವಾದಕರಾದ ನೀತಾ ಬೆಳೆಯೂರು ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ನಂತರ 5.30ರಿಂದ 6.30ರವರೆಗೆ ಪಂ. ಪರಮೇಶ್ವರ ಹೆಗಡೆ ಅವರ ಶಿಷ್ಯೆ, ಅಮೆರಿಕದ ಗಾಯಕಿ ಅಮೃತಾ ರಾವ್, ಮೈಸೂರಿನ ತಬಲಾ ವಾದಕ ಭೀಮಾಶಂಕರ ಬಿದನೂರು, ಹಾರ್ಮೋನಿಯಂ ವಾದಕರಾದ ನೀತಾ ಬೆಳೆಯೂರು ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 7.30ರಿಂದ ಹಾಸಣಗಿ ಗಾಯಕ ಪಂ. ಗಣಪತಿ ಭಟ್ಟ, ಬೆಂಗಳೂರಿನ ತಬಲಾ ವಾದಕ ಪಂ. ರವೀಂದ್ರ ಯಾವಗಲ್, ಹಾರ್ಮೋನಿಯಂ ವಾದಕ ಮಧುಸೂದನ ಭಟ್ಟ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ | Music Festival | ಜನವರಿ 8ರಿಂದ ತ್ಯಾಗಬ್ರಹ್ಮ ವೈದಿಕ ಆರಾಧನಾ ಕೈಕರ್ಯಂ, ಸಂಗೀತೋತ್ಸವ

Exit mobile version