Site icon Vistara News

Snake Bite | ನಾಗರಹಾವು ಕಚ್ಚಿ ರೈತ ಸಾವು

Snake Bite

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಗ್ರೆ ಗ್ರಾಮದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರ ಹಾವು ಕಚ್ಚಿ (Snake Bite) ರೈತರೊಬ್ಬರು ಮೃತಪಟ್ಟಿದ್ದಾರೆ.

ಮೃತ ಮಾದೇವ ನಾರಾಯಣ ಗೌಡ

ಹೆಗ್ರೆಯ ಗ್ರಾಮದ ಮಾದೇವ ನಾರಾಯಣ ಗೌಡ (47) ಮೃತ ದುರ್ದೈವಿ. ಮಾದೇವ ಗೌಡ ಅವರು ಭಾನುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು. ನಿತ್ರಾಣಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಾತ್ರಿ 10.30ರ ಸುಮಾರಿಗೆ ದಾರಿ ಮಧ್ಯೆ ಹಿತ್ತಲಮಕ್ಕಿ ಬಳಿ ಮೃತಪಟ್ಟಿರುವುದಾಗಿ ಮೃತನ‌ ಅಣ್ಣ ವಿನಾಯಕ ನಾರಾಯಣ ಗೌಡ ದೂರಿನಲ್ಲಿ ತಿಳಿಸಿದ್ದಾರೆ.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾದೇವ ಅವರ ಸಾವಿನ ಸುದ್ದಿ ಕೇಳಿ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ | Snake News | ಗದ್ದೆ ಪಕ್ಕದ ಹಾಸುಮಂಚದಲ್ಲಿ ಮಲಗಿದ್ದ ಮಹಿಳೆ ಮೇಲೆ ಹೆಡೆಬಿಚ್ಚಿದ ಹಾವು; ವಿಡಿಯೊ ವೈರಲ್

Exit mobile version