Site icon Vistara News

Snake Cancer : ಕ್ಯಾನ್ಸರ್‌ ಪೀಡಿತ ನಾಗರ ಹಾವು ಸಾವು; ಯುವಕನಿಂದ ಅಂತ್ಯಸಂಸ್ಕಾರ

Cancer surgery for cobra in Dharawad

ಧಾರವಾಡ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಗರ ಹಾವು (Snake Cancer) ಕೊನೆಗೂ ಮೃತಪಟ್ಟಿದೆ. ಅದಕ್ಕೆ ಅಗತ್ಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತಾದರೂ ಆರೈಕೆ ಮಾಡುತ್ತಿರುವ ವೇಳೆಯೇ ಅದು ಮೃತಪಟ್ಟಿದೆ. ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಈ ಹಾವು ಸಿಕ್ಕಿತ್ತು.

ಮನಸೂರು‌ ಗ್ರಾಮದಲ್ಲಿ (Manasuru Village) ಈ ನಾಗರ ಹಾವು ಕಾಣಿಸಿಕೊಂಡಿದೆ. ಈ ವಿಷಯವು ಅದೇ ಗ್ರಾಮದ ಮನೋಜ್‌ ಎಂಬುವವರಿಗೆ ಗೊತ್ತಾಗಿದೆ. ಅವರು ಈ ಹಾವನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ವೇಳೆ ಕುತ್ತಿಗೆ ಭಾಗದಲ್ಲಿ ಗಡ್ಡೆಯೊಂದು (Cancerous tumor) ಕಂಡುಬಂದಿದೆ. ಹೀಗಾಗಿ ಅವರಿಗೆ ಇದರ ಬಗ್ಗೆ ಅನುಮಾನ ಮೂಡಿದೆ. ಕೂಡಲೇ ಅವರು ಧಾರವಾಡದ ಪಶು ಆಸ್ಪತ್ರೆಗೆ (Dharwad Veterinary Hospital) ನಾಗರಹಾವನ್ನು ತಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: BJP Karnataka: ಕರ್ನಾಟಕದಲ್ಲಿ ಜಂಗಲ್‌ ರಾಜ್ಯ ಶುರುವಾಗಿದೆ ಎಂದ ಬೊಮ್ಮಾಯಿ: ರಾಜ್ಯಪಾಲರಿಗೆ ಬಿಜೆಪಿ ದೂರು

ಅಲ್ಲಿ ಪಶುವೈದ್ಯರು ಪರೀಕ್ಷೆ ನಡೆಸಿದಾಗ ಹಾವಿಗೆ ಕ್ಯಾನ್ಸರ್‌ ಇದೆ ಎಂಬುದು ಗೊತ್ತಾಗಿದೆ. ಹೀಗಾಗಿ ಅದಕ್ಕೆ ಅಲ್ಲಿಯೇ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಗುಣಮುಖವಾಗಿದೆ ಎಂದು ಕಂಡು ಬಂದಿತ್ತು. ಜತೆಗೆ ಆರೈಕೆಯನ್ನೂ ಮಾಡಲಾಗುತ್ತಿತ್ತು. ಆದರೆ, ಒಂದು ದಿನದ ಬಳಿಕ ಚಿಕಿತ್ಸೆ ಫಲಿಸದೆ ನಾಗರ ಹಾವು ಮೃತಪಟ್ಟಿದೆ.

ಕ್ಯಾನ್ಸರ್‌ ಪೀಡಿತ ನಾಗರ ಹಾವಿಗೆ ಶಸ್ತ್ರಚಿಕಿತ್ಸೆ; ಇಲ್ಲಿದೆ ವಿಡಿಯೊ

ಯುವಕನಿಂದಲೇ ಅಂತ್ಯ ಸಂಸ್ಕಾರ

ಬಳಿಕ ಆ ಹಾವನ್ನು ಎತ್ತಿಕೊಂಡು ತಮ್ಮ ಗ್ರಾಮಕ್ಕೆ ಯುವಕ ಮನೋಜ್‌ ಬಂದಿದ್ದಾರೆ. ತಮ್ಮ ಗ್ರಾಮದಲ್ಲಿಯೇ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಇದು ಈಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಕಳೆದ ಡಿಸೆಂಬರ್‌ನಲ್ಲೂ ಹಾವಿಗೆ ಕೊಡಲಾಗಿತ್ತು ಕ್ಯಾನ್ಸರ್‌ ಚಿಕಿತ್ಸೆ

ಕಳೆದ ವರ್ಷ (2022) ಡಿಸೆಂಬರ್‌ನಲ್ಲಿಯೂ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದ ಹಾವೊಂದು ಧಾರವಾಡದಲ್ಲಿ ಪತ್ತೆಯಾಗಿತ್ತು. ಕೊನೆಗೆ ಪಶು ವೈದ್ಯ ಡಾ. ಅನಿಲ್‌ ಕುಮಾರ್‌ ಪಾಟೀಲ ಅವರು ಶಸ್ತ್ರಚಿಕಿತ್ಸೆ ಮೂಲಕ ಆ ಹಾವಿಗೆ ಮರುಜೀವ ನೀಡಿದ್ದರು.

ಆ ಹಾವಿಗೆ ಕಣ್ಣು ಮತ್ತು ತಲೆಯ ನಡುವೆ ಕ್ಯಾನ್ಸರ್ ಗಡ್ಡೆ ಇರುವುದು ಗೊತ್ತಾಗಿತ್ತು. ಹೀಗಾಗಿ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಲು ಡಾ. ಅನಿಲ್‌ ಕುಮಾರ್‌ (Veterinary Doctor Dr Anil Kumar) ತೀರ್ಮಾನಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರ ತಗೆದಿದ್ದರು. ಬಳಿಕ ಈ ಹಾವು ಚೇತರಿಕೆಯನ್ನು ಕಂಡಿತ್ತು.

ಇದನ್ನೂ ಓದಿ: Tomato price : ದಾವಣಗೆರೆಯಲ್ಲಿ ಟೊಮ್ಯಾಟೊಗೆ Z + ಸೆಕ್ಯುರಿಟಿ; ಶ್ವಾನದಳ ನೇಮಕ!

ಧಾರವಾಡದ ಪ್ರಾಣಿ ಪ್ರಿಯ ಹಾಗೂ ಪ್ರಾಣಿ ರಕ್ಷಕರಾಗಿರುವ ಸೋಮಶೇಖರ್ ಚೆನ್ನಶೆಟ್ಟಿ ಅವರು ಮನೆಯೊಂದರಲ್ಲಿ ರಕ್ಷಣೆ ಮಾಡಿ ತಂದಿದ್ದ ಹಾವು ಇದಾಗಿತ್ತು. ಇದನ್ನು ರಕ್ಷಿಸಿದ ಸೋಮಶೇಖರ್‌ ಅವರಿಗೆ ತಲೆ ಮೇಲೆ ಉಬ್ಬಿದ ಜಾಗ ಕಂಡುಬಂದಿತ್ತು. ಹೀಗಾಗಿ ಅವರು ಪಶು ವೈದ್ಯರಿಗೆ ತೋರಿಸಿದ್ದರು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ಆ ಹಾವನ್ನು ಬದುಕಿಸಲಾಗಿತ್ತು.

Exit mobile version