Site icon Vistara News

Snake Rescue | ಸುವರ್ಣ ಸೌಧದ ಪೊಲೀಸ್ ಟೆಂಟ್ ಬಳಿ ಪ್ರತ್ಯಕ್ಷವಾದ ನಾಗರಹಾವು; ಬೆದರಿದ ಖಾಕಿ ಪಡೆ

ಬೆಳಗಾವಿ: ಇಲ್ಲಿನ ಸುವರ್ಣ ಸೌಧ ಪ್ರವೇಶ ದ್ವಾರದ ಬಳಿ ಕೆಲವು ಸಮಯ ಭಯದ ವಾತಾವರಣ ನಿರ್ಮಾಣವಾಗಿತ್ತು. ಬಂದೋಬಸ್ತ್‌ಗೆ ಕುಳಿತಿದ್ದ ಪೊಲೀಸರು ಗಲಿಬಿಲಿಗೊಂಡು ಪ್ರವೇಶ ದ್ವಾರದಿಂದ ದೂರ ಸರಿಯುವಂತೆ ಆಗಿತ್ತು. ಇಷ್ಟಕ್ಕೂ ಇದಕ್ಕೆಲ್ಲ ಕಾರಣವಾಗಿದ್ದು ಬುಸ್‌ಬುಸ್‌ ನಾಗಪ್ಪ (Snake Rescue) ಪ್ರತ್ಯಕ್ಷವಾಗಿದ್ದರಿಂದ.

ಸುವರ್ಣಸೌಧದ ಪೊಲೀಸ್ ಟೆಂಟ್ ಬಳಿ ನಾಗರಹಾವು ಪ್ರತ್ಯಕ್ಷವಾಗಿ ಅಲ್ಲಿಂದವರು ಕ್ಷಣ ಕಾಲ ಗಲಿಬಿಲಿಗೊಂಡರು. ಕೂಡಲೇ ಉರಗ ತಜ್ಞ ರಾಮ್ ಪಾಟೀಲ್ ಎಂಬುವವರು ಸರಸರನೆ ಹೋಗುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಿದರು.

ಸುವರ್ಣ ಸೌಧದ ಪ್ರಮುಖ ಪ್ರವೇಶ ದ್ವಾರದ ಬಳಿಯೇ ಕಾಣಿಸಿದ್ದರಿಂದ ಬಂದೋ ಬಸ್ತ್‌ನಲ್ಲಿದ್ದ ಪೊಲೀಸರಿಗೂ ಭಯ ಕಾಡಿತ್ತು. ಉರಗ ತಜ್ಞ ರಾಮ್‌ ಹಾವು ಹಿಡಿದು ಬಳಿಕ ಬೇರೆ ಕಡೆಗೆ ಕೊಂಡೊಯ್ದರು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗಡಿ ತಂಟೆ: ಕೇಂದ್ರದ ತಾರಮ್ಮಯ್ಯ ನೀತಿಯ ಫಲ

Exit mobile version