ಧಾರವಾಡ: ಇಲ್ಲಿನ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಾಗರ ಹಾವೊಂದು (Snake Rescue) ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಹೆಚ್ಚಿಸಿತ್ತು.
ಶಾಲೆಯ ಆವರಣದಲ್ಲಿ ಸರಸರನೇ ಹರಿದು ಬಂದ ನಾಗರ ಹಾವನ್ನು ಕಂಡು ವಿದ್ಯಾರ್ಥಿಗಳು ಬೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಲಾ ಆಡಳಿತ ಮಂಡಳಿ ಉರಗ ತಜ್ಞ ತಿಪ್ಪಣ್ಣರಿಗೆ ಮಾಹಿತಿ ನೀಡಿದ್ದಾರೆ. ಶಾಲೆಗೆ ಬಂದ ತಿಪ್ಪಣ್ಣ ಅವರು ಸಣ್ಣ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ. ಇದೇ ವೇಳೆ ಮಕ್ಕಳಿಗೆ ಹಾವಿನ ಕುರಿತಾದ ಜಾಗೃತಿಯನ್ನು ಮೂಡಿಸಿದರು. ಇತ್ತ ಹಾವು ಹಿಡಿಯುತ್ತಿದ್ದಂತೆ ಶಾಲಾ ಸಿಬ್ಬಂದಿ ಹಾವಿನ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ಚಿತ್ರಣ ಕಂಡು ಬಂತು.
ಇದನ್ನೂ ಓದಿ | Andres Balanta | ಹೃದಯಾಘಾತದಿಂದ ಕೊನೆಯುಸಿರೆಳೆದ ಯುವ ಫುಟ್ಬಾಲ್ ತಾರೆ ಆಂಡ್ರೆಸ್ ಬಲಾಂಟ; ಕಂಬನಿ ಮಿಡಿದ ಫುಟ್ಬಾಲ್ ಜಗತ್ತು