Site icon Vistara News

Snake Surgery | ಆಭರಣ ಹಾವಿಗೆ ಸರ್ಜರಿ; ಮರುಜನ್ಮ ನೀಡಿದ ಧಾರವಾಡದ ಕೃಷಿ ವಿವಿ ವೈದ್ಯರು

snake surgury1

ಧಾರವಾಡ: ಇಲ್ಲಿನ ಅಣ್ಣಿಗೇರಿ ಕಾಲೇಜು ಬಳಿ ಆಭರಣದ ಹಾವೊಂದು (Snake Surgery) ಕಾಣಿಸಿಕೊಂಡಿತ್ತು. ಉರಗ ತಜ್ಞ ಸೋಮಶೇಖರ್‌ ಚೆನ್ನಶೆಟ್ಟಿ ಎಂಬುವವರು ಹಾವನ್ನು ರಕ್ಷಣೆ ಮಾಡಿದ್ದರು. ಆದರೆ, ಹಾವಿನ ತಲೆಯ ಮೇಲೆ ಗಂಟಿನಾಕಾರದ ಗಾಯವಾಗಿತ್ತು.

ಇದನ್ನು ಗಮನಿಸಿದ ಸೋಮಶೇಖರ್‌ ಅವರು ಆ ಹಾವನ್ನು ಕೃಷಿ ವಿಶ್ವವಿದ್ಯಾಲಯದ ವೈದ್ಯರ ಬಳಿ ತೆಗೆದುಕೊಂಡು ಹೋದರು. ವೈದ್ಯರು ಎಲ್ಲ ಪರೀಕ್ಷಿಸಿದ ಬಳಿಕ ಆ ಹಾವಿನ ತಲೆಯ ಮೇಲಿದ್ದ ಗಂಟನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಹಾವು ಪ್ರಾಣಾಪಾಯದಿಂದ ಪಾರಾಗಿದೆ. ಈ ಮೂಲಕ ವೈದ್ಯರು ಆ ಹಾವಿಗೆ ಮರುಜನ್ಮ ನೀಡಿದ್ದಾರೆ.

ಇದನ್ನೂ ಓದಿ | Elephant Attack | ಹುಣಸೂರು ಬಳಿ ಕಾಡಾನೆ ದಾಳಿಗೆ ಮಹಿಳೆ ಬಲಿ

Exit mobile version