ಶಿವಮೊಗ್ಗ: ಬುದ್ಧಿಮಾಂದ್ಯ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಿ ಸಾಲದ ಸುಳಿಗೆ ಸಿಲುಕಿದ ಬಡ ಕುಟುಂಬಕ್ಕೆ (Poor Family) ಶಿವಮೊಗ್ಗದ ರಿಪ್ಪನ್‌ಪೇಟೆ (Ripponpet) ಪಟ್ಟಣದ ಪೊಲೀಸರು (Police) ಆರ್ಥಿಕ ನೆರವು ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ (Good Message) ನೀಡಿದ್ದಾರೆ.
ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಗವಟೂರು ನಿವಾಸಿ, ಆಟೋ ಚಾಲಕ ದೇವಪ್ಪಗೌಡ ಅವರು, ಕಳೆದ 36 ವರ್ಷಗಳಿಂದ ನರದೌರ್ಬಲ್ಯದಿಂದ ಬುದ್ಧಿಮಾಂದ್ಯಕ್ಕೆ ಒಳಗಾದ ಮಗಳು ಅನಿತಾಳ ಆರೈಕೆ ಮಾಡುತ್ತಿದ್ದಾರೆ. ಚಿಕಿತ್ಸೆ ಕೊಡಿಸಿದರೆ, ಗುಣಮುಖಳಾಗುವ ಆಶಾವಾದದಿಂದ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ ಬಡಕುಟುಂಬ ಸಾಲದ ಸುಳಿಗೆ ಸಿಲುಕಿತ್ತು. ಸೂಕ್ತ ಚಿಕಿತ್ಸೆ ನೀಡದೇ ಮಗಳ ಅನಾರೋಗ್ಯವು ಮತ್ತಷ್ಟು ಉಲ್ಬಣಗೊಂಡಿತ್ತು.
ಇದನ್ನೂ ಓದಿ: Weather Report : ಮಲೆನಾಡು ಆಗಲಿದೆ ಮಳೆನಾಡು; ಕರಾವಳಿಯಲ್ಲೂ ಮಳೆಯಾಟ ಬಲು ಜೋರು
ಈ ಬಗ್ಗೆ ಮಾಹಿತಿಯನ್ನರಿತ ಪಟ್ಟಣದ ಪೊಲೀಸ್ ಸಿಬ್ಬಂದಿ ಹೆಡ್ ಕಾನಸ್ಟೇಬಲ್ ಮಂಜಪ್ಪ ಹೊನ್ನಾಳ್, ನವೀನ್, ತ್ರಿವೇಣಿ ತಕ್ಷಣ ರಿಪ್ಪನ್‌ಪೇಟೆಯ ಪಿಎಸ್‌ಐ ಪ್ರವೀಣ್ ಅವರ ಗಮನಕ್ಕೆ ತಂದಿದ್ದಾರೆ.
ಬಳಿಕ ಈ ಬಡ ಕುಟುಂಬದ ಬಗ್ಗೆ ಡಿವೈಎಸ್ಪಿ ಗಜಾನನ ವಾಮನ ಸುತಾರ ಮತ್ತು ಸಿಪಿಐ ಗಿರೀಶ್ ಅವರ ಗಮನಕ್ಕೆ ತಂದ ಪಿಎಸ್‌ಐ ಪ್ರವೀಣ್, ಠಾಣೆಯ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಹಕಾರದಿಂದ ಗವಟೂರಿನ ಆಟೋ ಚಾಲಕ ದೇವಪ್ಪಗೌಡ ಅವರ ಮನೆಗೆ ತೆರಳಿ ಧನಸಹಾಯ ಮಾಡುವುದರೊಂದಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Lalbagh Tour : ಸಸ್ಯಕಾಶಿ ಲಾಲ್‌ಬಾಗ್‌ನೊಳಗೆ ಏನೇನಿದೆ? ಮರೆಯದೆ ನೋಡಿ…
ಈ ಮೂಲಕ ಶಿವಮೊಗ್ಗದ ರಿಪ್ಪನಪೇಟೆ ಪಟ್ಟಣದ ಪೊಲೀಸರು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದಾರೆ.