Site icon Vistara News

Soldier Death: ರಿಪ್ಪನ್ ಪೇಟೆ ಮೃತ ಯೋಧನ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ; ಕುಟುಂಬಕ್ಕೆ ಸಾಂತ್ವನ

Minister Araga Jnanendra ripponpet Soldier Death

#image_title

ರಿಪ್ಪನ್ ಪೇಟೆ: ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ಪಟ್ಟಣದ ಶಬರೀಶ ನಗರದ ನಿವಾಸಿ ಸಂದೀಪ್ (27) ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಯೋಧನ (Soldier Death) ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೋಮವಾರ (ಮಾ.20) ರಾತ್ರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾದ್ಯಮದೊಂದಿಗೆ ಮಾತನಾಡಿದ ಅವರು, “ಒಬ್ಬ ಯುವ ಯೋಧ ಅಕಾಲಿಕವಾಗಿ ಮೃತಪಟ್ಟಿರುವುದು ರಾಷ್ಟ್ರಕ್ಕಾದ ನಷ್ಟವಾಗಿದೆ. ದೇಶ ಸೇವೆಯನ್ನು ಮಾಡುವ ಸದುದ್ದೇಶದಿಂದ ಗ್ರಾಮೀಣ ಪ್ರದೇಶದ ಯುವಕನೊಬ್ಬ ಸೈನ್ಯಕ್ಕೆ ಸೇರಿ ಹಗಲಿರುಳು ದೇಶದ ಜನರ ರಕ್ಷಣೆಗಾಗಿ ಕಾಯಕವನ್ನು ಮಾಡಿದ್ದಾರೆ. ಅವರ ಅಕಾಲಿಕ ಮರಣ ನನಗೆ ಅತೀವ ನೋವುಂಟು ಮಾಡಿದೆ. ಪಾರ್ಥಿವ ಶರೀರವನ್ನು ಊರಿಗೆ ತರಲು ಸರ್ಕಾರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಜುಳಾ. ಕೆ.ರಾವ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ. ಬಿ. ಮಂಜುನಾಥ್. ಮುಖಂಡರಾದ ಆರ್ ಟಿ ಗೋಪಾಲ್. ಸುದೀಂದ್ರ ಪೂಜಾರಿ. ಎನ್. ಸತೀಶ್. ಪಿ ಸುದೀರ್. ಇನ್ನಿತರರಿದ್ದರು.

ಇದನ್ನೂ ಓದಿ: Karnataka Elections : ಗದಗ ಜಿಲ್ಲೆಯಲ್ಲಿ ಬಂಗಾರ, ಹಣದ ಬೇಟೆ; ಚುನಾವಣೆಗೆ ಮುನ್ನವೇ ನಡೀತಿದೆ ಭಾರಿ ವ್ಯವಹಾರ

Exit mobile version