ರಿಪ್ಪನ್‌ಪೇಟೆ: ಅಸ್ಸಾಂ ರಾಜ್ಯದ ಮಣಿಪುರದಲ್ಲಿ ಸಾವಿಗೀಡಾದ ರಿಪ್ಪನ್‌ಪೇಟೆಯ ಯೋಧ ಸಂದೀಪ್ ಪಾರ್ಥಿವ ಶರೀರದ (Soldier Death) ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.
ಮುಂಜಾನೆ 4 ಗಂಟೆಗೆ ಪಾರ್ಥಿವ ಶರೀರ ಶಬರೀಶ ನಗರದ ಸ್ವಗೃಹಕ್ಕೆ ಆಗಮಿಸಿದ್ದು, ಯೋಧ ಸಂದೀಪ್ ಅವರ ಪಾರ್ಥಿವ ಶರೀರ ಮನೆ ತಲುಪುತ್ತಿದ್ದಂತೆ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತು. ಅಲ್ಲಿ ಸೇರಿದ್ದ ಜನರ ಕಣ್ಣುಗಳು ಕೂಡ ತೇವಗೊಂಡವು.
ಇದನ್ನೂ ಓದಿ: NPS News : ಹಳೆ ಪಿಂಚಣಿ ಯೋಜನೆ ಜಾರಿಗಾಗಿ ʻವೋಟ್ ಫಾರ್ ಓಪಿಎಸ್ʼ ಆಂದೋಲನ; ಸರ್ಕಾರಿ ನೌಕರರ ನಿರ್ಧಾರ
ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಶಾಸಕ ಹರತಾಳು ಹಾಲಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು ಅಲಂಕೃತ ವಾಹನದ ಮೂಲಕ ಶಬರೀಶ ನಗರದ ಸ್ವಗೃಹದಿಂದ ವಿನಾಯಕ ವೃತ್ತದವರೆಗೂ ಮೆರವಣಿಗೆ ಮೂಲಕ ಕರೆತರಲಾಯಿತು. ಮೃತ ಯೋಧನ ಸ್ನೇಹಿತರು ಕಣ್ಣೀರು ಸುರಿಸುತ್ತಾ ಯೋಧನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾಗಿದರು. ಯುವಕರು ಸೇರಿದಂತೆ ಗ್ರಾಮಸ್ಥರು ಅಮರ್ ಹೈ, ಅಮರ ಹೈ, ಸಂದೀಪ್ ಅಮರ ಹೈ ಎಂಬ ಘೋಷಣೆಯನ್ನು ಮೊಳಗಿಸಿದರು. ಮೆರವಣಿಗೆ ನಂತರ ವಿನಾಯಕ ವೃತ್ತದಲ್ಲಿ ಸಂದೀಪ್ ಅವರರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ರಿಪ್ಪನ್‌ಪೇಟೆಯ ಜನರು ತಂಡೋಪತಂಡವಾಗಿ ಆಗಮಿಸಿ ಯೋಧನ ಅಂತಿಮ ದರ್ಶನ ಪಡೆದರು.
ಮೃತ ಸೈನಿಕನ ಗೌರವಾರ್ಥವಾಗಿ ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಘೋಷಿತ ಬಂದ್ ಮಾಡಲಾಗಿತ್ತು.
ಇದನ್ನೂ ಓದಿ: Indigo Negligence : ಇಂಡಿಗೋ ವಿಮಾನ ಎಡವಟ್ಟು, ಮಂಗಳೂರಿಗೆ ಬರಬೇಕಿದ್ದ 12 ಪ್ರಯಾಣಿಕರು ಮುಂಬೈನಲ್ಲೇ ಬಾಕಿ!