ಚಿಕ್ಕಮಗಳೂರು: ಕರ್ನಾಟದ ಅತ್ಯಂತ ಎತ್ತರದ ಪ್ರದೇಶದಲ್ಲಿ ಯೋಧರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಪರ್ವತಾರೋಹಣ-ಸಾಹಸ ಕ್ರೀಡೆಗಳ ಸಂಸ್ಥೆಯಿಂದ ಧ್ವಜಾರೋಹಣ ನೆರವೇರಿಸಲಾಗಿದ್ದು, ಜಿಲ್ಲೆಯ ಮುಳ್ಳಯ್ಯನಗಿರಿಯ ತುತ್ತ ತುದಿಗೆ ತೆರಳಿ ಸೈನಿಕರು ರಾಷ್ಟ್ರಧ್ವಜ (Flag Hoisting) ಹಾರಿಸಿದ್ದಾರೆ.
ಕರ್ನಲ್ ರಣವೀರ್ ಸಿಂಗ್ ನೇತೃತ್ವದ 14 ಯೋಧರ ತಂಡ, ದೇಶದ ಬಹುತೇಕ ರಾಜ್ಯಗಳ ಎತ್ತರದ ಶಿಖರಗಳ ಮೇಲೆ ಧ್ವಜಾರೋಹಣ ಮಾಡಿದೆ. 28 ರಾಜ್ಯಗಳ ಪೈಕಿ 17 ರಾಜ್ಯಗಳ ಎತ್ತರದ ಶಿಖರಗಳ ಮೇಲೆ ಸೈನಿಕರ ತಂಡ ರಾಷ್ಟ್ರಧ್ವಜ ಹಾರಿಸಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ | Leopard Spotted: ದಿಢೀರ್ ತೋಟಕ್ಕೆ ನುಗ್ಗಿದ ಚಿರತೆ; ದಿಕ್ಕಾಪಾಲಾಗಿ ಓಡಿದ ರೈತರು