ತೀರ್ಥಹಳ್ಳಿ: ಸೊಪ್ಪುಗುಡ್ಡೆಯ ವಿಶೇಷ ಚೇತನ ಮಕ್ಕಳ ಶಾಲೆಯ ಶಿಕ್ಷಕ ಕುಮಾರ್ ಅವರನ್ನು ವರ್ಗಾವಣೆ (Transfer) ಮಾಡದಂತೆ ಒತ್ತಾಯಿಸಿ, ವಿಶೇಷ ಚೇತನ ಮಕ್ಕಳು ಮತ್ತು ಅವರ ಪೋಷಕರು ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ (Protest) ನಡೆಸಿದರು.
ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಬೆಂಗಳೂರು, ಚಿಕ್ಕಮಗಳೂರು, ಸಾಗರ, ಶಿವಮೊಗ್ಗ, ಶೃಂಗೇರಿ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ವಿಶೇಷಚೇತನ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಅತ್ಯಂತ ಕಾಳಜಿಯಿಂದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕ ಕುಮಾರ್ ಅವರು ವರ್ಗಾವಣೆ ಆಗಿರುವುದು ಮಕ್ಕಳ ಜತೆಗೆ ಪೋಷಕರಿಗೂ ನೋವು ತಂದಿದೆ. ಹೀಗಾಗಿ ಅವರನ್ನು ವರ್ಗಾವಣೆ ಮಾಡಬಾರದು ಎಂದು ತಿಳಿಸಿದರು.
ಇದನ್ನೂ ಓದಿ: Anil Ambani: ಅಂಬಾನಿ ದಂಪತಿಗೆ ಇ ಡಿ ಸಂಕಷ್ಟ; ಇಂದು ಟೀನಾ ಅಂಬಾನಿ ವಿಚಾರಣೆ
ಪಿಸಿಯೋಥೆರಪಿ ಅವಶ್ಯಕತೆ ಇರುವ ಮಕ್ಕಳಿಗೆ ಸಂಜೆ 4 ಗಂಟೆ ನಂತರ ಪಿಸಿಯೋಥೆರಪಿಯನ್ನೂ ಮಾಡಿಸುವ ಮೂಲಕ ಕುಮಾರ್ ಅವರು ಶಾಲೆಯ ಮಕ್ಕಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ವರ್ಗಾವಣೆ ರದ್ದುಪಡಿಸಿ ಮತ್ತೆ ಇದೇ ಶಾಲೆಗೆ ಕಳುಹಿಸಬೇಕು ಎಂದು ಮಕ್ಕಳು ಮತ್ತು ಅವರ ಪೋಷಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು, ಪೋಷಕರು ಹಾಗೂ ಇತರರು ಪಾಲ್ಗೊಂಡಿದ್ದರು.