Site icon Vistara News

Soraba News | ಕುಪ್ಪಗಡ್ಡೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

bull-taming festival Kuppagadde village soraba

ಸೊರಬ: ಸಾವಿರಾರು ಹೋರಿ ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ (Soraba News) ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ಜರುಗಿತು.

ಹೋರಿ ಹಬ್ಬಕ್ಕೆ ಕುಪ್ಪಗಡ್ಡೆ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಎಲ್ ಜಿ ರಾಜಶೇಖರ್ ಅವರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು,

ಇದನ್ನೂ ಓದಿ | Manvi MLA | ಕಳಪೆ ಕಾಮಗಾರಿಗೆ ಕಿಡಿ; ಗುತ್ತಿಗೆದಾರನ ಕನ್ನಡಕ ಕಿತ್ತೆಸೆದ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ

ಗ್ರಾಮೀಣ ಪ್ರದೇಶದ ಜನರಿಗೆ ಹೋರಿ ಹಬ್ಬ ಎಂದರೆ ಎಲ್ಲಿಲ್ಲದ ಖುಷಿ. ಅದರಲ್ಲೂ ರೈತಾಪಿ ವರ್ಗದ ಜನರು ಮತ್ತು ರೈತಾಪಿ ಕುಟುಂಬದ ಯುವಕರಿಗಂತೂ ಈ ಹಬ್ಬ ಎಂದರೆ ಹುರುಪು ಹಾಗೂ ಸಂಭ್ರಮ. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮವೇ ಆಗಮಿಸಿತ್ತು.

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಹೋರಿಯ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ʼ11 ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ, ಇಬ್ಬರನ್ನು ಸನ್ಮಾನಿಸಲಾಗುತ್ತಿದೆ; ಮುಸ್ಲಿಂ ಪ್ರಾತಿನಿಧ್ಯ ಇಲ್ಲವೆನ್ನುವುದು ಬೇಜವಾಬ್ದಾರಿ ಮಾತುʼ: ಮಹೇಶ್‌ ಜೋಶಿ ಸಂದರ್ಶನ

ಅಖಾಡದಲ್ಲಿ ಕೆಲವರಕೊಪ್ಪದ ಜೋಗಿ, ಮಾರಂಬೆಳ್ಳದ ಸೂರ್ಯಪುತ್ರ, ಕುದುರೆಗಣೆ ಹೊಯ್ಸಳ, ಸೊರಬದ ರಾವಣ, ಹೊತನಕಟ್ಟೆ ಕಾ ರಾಜಾ, ಹಾನಗಲ್ ಬಾಹುಬಲಿ, ಆನವಟ್ಟಿ ಪವರ್ ಸ್ಟಾರ್, ಶೆಟ್ಟಿಹಳ್ಳಿ ಪವರ್, ತಲ್ಲೂರು ಅಭಿಮನ್ಯು, ಸೊರಬದ ಪ್ರಳಯ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿ ಬಂದಿತು,

ಹೋರಿ ಹಬ್ಬ ಆಯೋಜಿಸಿದ್ದ ಕುಪ್ಪಗಡ್ಡೆ ಗ್ರಾಮಸ್ಥರು ಸುರಕ್ಷಿತವಾದ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಉತ್ತಮವಾಗಿ ಓಡಿದ ಹೋರಿಗಳನ್ನು ಹಾಗೂ ಬಲ ಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.

ಇದನ್ನೂ ಓದಿ | Anganwadi Workers | ಅಂಗನವಾಡಿ ಕಾರ್ಯಕರ್ತೆಯರಾಗಲು PUC ಆಗಲೇಬೇಕು, ಸಹಾಯಕಿಯರಿಗೆ SSLC ಕಡ್ಡಾಯ: ಇದು NEP Rules

Exit mobile version