Site icon Vistara News

Soraba News : ತಹಸೀಲ್ದಾರ್ ಬದಲಾವಣೆ ಮುಂದುವರಿದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ: ರೈತ ಸಂಘ ಎಚ್ಚರಿಕೆ

Change of Tahsildar protest soraba

ಸೊರಬ: ತಹಸೀಲ್ದಾರ್‌ಗಳನ್ನು ಪದೇಪದೆ ಬದಲಾವಣೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ (Soraba News) ತಾಲೂಕು ಕಚೇರಿ ಎದುರು ಬುಧವಾರ (ಜ.೨೫) ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಎನ್.ಪಾಟೀಲ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷದ ಅವಧಿಯಲ್ಲಿ ೧೪ ತಹಸೀಲ್ದಾರ್‌ಗಳ ಬದಲಾವಣೆಯಾಗಿದೆ. ಇದರಿಂದ ಜನಸಾಮಾನ್ಯರು ಮತ್ತು ರೈತರ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ರಾಜ್ಯದಲ್ಲಿಯೇ ತಹಸೀಲ್ದಾರ್‌ಗಳ ಬದಲಾವಣೆಯಲ್ಲಿ ತಾಲೂಕು ಮೊದಲನೇ ಸ್ಥಾನದಲ್ಲಿದೆ. ಏಕಾಏಕಿ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಬದಲಾವಣೆಯಾದರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ವಿಳಂಬವಾಗುತ್ತದೆ ಎಂದು ಆರೋಪಿಸಿದರು.

ಇದನ್ನೂ ಓದಿ | MD Sharief : ಶಿವಮೊಗ್ಗದ ಸಾವರ್ಕರ್‌, ಟಿಪ್ಪು ಸುಲ್ತಾನ್ ಫೋಟೊ ವಿವಾದದ ರೂವಾರಿ ಎಂ.ಡಿ. ಷರೀಫ್‌ ಬಂಧನ

ತಾಲೂಕಿನಲ್ಲಿ ಕನಿಷ್ಠ ಎರಡು ಮೂರು ವರ್ಷಗಳಾದರೂ ಕಾರ್ಯನಿರ್ವಹಿಸಿದರೆ ಕ್ಷೇತ್ರದ ಪರಿಚಯವಾಗುತ್ತದೆ. ಇಲ್ಲಿನ ಜನತೆಯ ಸಮಸ್ಯೆಗಳ ಅರಿವು ಅಧಿಕಾರಿಗಳಿಗೆ ಬರುತ್ತದೆ. ಗ್ರೇಡ್-೧ ತಹಸೀಲ್ದಾರ್ ಹಾಗೂ ಅನುಭವವುಳ್ಳ ಡಾ.ಮೋಹನ್ ಭಸ್ಮೆ ಅವರು ಸ್ವಯಂ ವರ್ಗಾವಣೆ ತೆಗೆದುಕೊಳ್ಳುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಕೂಡಲೇ ಸರಕಾರ ಮತ್ತು ಮೇಲಧಿಕಾರಿಗಳು ಇಲ್ಲಿನ ಸತ್ಯಾಂಶವನ್ನು ಅರಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಬೀಗ ಹಾಕಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದನ್ನೂ ಓದಿ | Republic day Men’s Fashion : ಗಣರಾಜ್ಯೋತ್ಸವದ ಸಂಭ್ರಮಕ್ಕೆ ಲಗ್ಗೆ ಇಟ್ಟ ಮೆನ್ಸ್ ಕಾಲರ್‌ ಕುರ್ತಾ ಫ್ಯಾಷನ್‌

ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಜಿಲ್ಲಾಧ್ಯಕ್ಷ ಸೈಯದ್ ಶಫೀವುಲ್ಲಾ, ತಾಲೂಕು ಪ್ರಧಾನ ಕಾರ್ಯದರ್ಶಿ ಮೇಘರಾಜ್ ಬೆಟ್ಟದಕೂರ್ಲಿ, ಉಪಾಧ್ಯಕ್ಷ ನಾಗರಾಜ ಬೆಣ್ಣಿಗೇರಿ, ರೈತ ಮುಖಂಡರಾದ ಶಿವಪ್ಪ ಹುಣಸವಳ್ಳಿ, ಲೋಕಪ್ಪ ಮರೂರು, ಚಿತ್ರಶೇಖರ ಗೌಡ ಗೇರುಕೊಪ್ಪ ಇತರರಿದ್ದರು.

ಇದನ್ನೂ ಓದಿ | Viral Video : ಸ್ಕೂಟಿಯಾಯ್ತು ಈಗ ಕಾರಿನ ಸನ್‌ರೂಫ್‌ನಲ್ಲೇ ಲವ್ವಿ ಡವ್ವಿ ಆಡಿದ ಲವ್‌ ಬರ್ಡ್ಸ್‌!

Exit mobile version