ಸೊರಬ: (Soraba News ) ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಹೋರಿ ಮಾಲೀಕರು ತಮ್ಮ ನೆಚ್ಚಿನ ಹೋರಿಗಳಿಗೆ ಬಗೆಬಗೆಯ ಜೂಲ, ಬಲೂನು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಬಿರುಗಾಳಿಯಂತೆ ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು. ಅಖಾಡದಲ್ಲಿ ಹೋರಿಗಳು ಓಡುತ್ತಿದ್ದಂತೆ ನೆರೆದ ಪ್ರೇಕ್ಷಕರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಾಂವಿಧಾನಿಕ ಚೌಕಟ್ಟಿನಲ್ಲೇ ಕನ್ನಡ ನಾಡು, ನೆಲದ ರಕ್ಷಣೆ: ಬಿ.ಎಸ್. ಯಡಿಯೂರಪ್ಪ
ಅಖಾಡದಲ್ಲಿ ಪುನೀತ್ ರಾಜ್‌ಕುಮಾರ್, ತವನಂದಿ, ಪವರ್ ಸ್ಟಾರ್, ಹಿರೇಕಸವಿ ಹಂತಕ, ಕುಂಬತ್ತಿ ಕಾ ಡಾನ್, ಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ, ಹುಲಿಬಾಯ್, ಕೆಡಿಎಂ ಕಿಂಗ್, ಮದಗಜ, ಚಿನ್ನಾಟದ ನಂದಿ, ಗೂಳಿ, ಕದಂಬ, ತಾರಕಾಸುರ, ಚಿಕ್ಕಮಾಕೊಪ್ಪದ ಸೀತಾರಾಮೇಶ್ವರ, ಕಬಡ್ಡಿ ಕಿಂಗ್, ಜನನಾಯಕ, ಕಸ್ತೂರಿ, ಶ್ರೀರಾಮ, ಜನಮೆಚ್ಚಿದ ಮಗ, ಬಸವ, ಜಮೀನ್ದಾರ, ಗರುಡ, ಅಭಿಮನ್ಯು ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.
ಹೋರಿ ಹಬ್ಬವನ್ನು ಆಯೋಜಿಸಿದ್ದ ಹಾಲಗಳಲೆ ಗ್ರಾಮಾಭಿವೃದ್ಧಿ ಸಮಿತಿಯವರು ಸುರಕ್ಷಿತವಾದ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದರು. ಉತ್ತಮವಾಗಿ ಓಡಿದ ಹೋರಿಗಳು ಮತ್ತು ಬಲಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.
ಇದನ್ನೂ ಓದಿ | Hyderabad City | ಮಹಿಳಾಸ್ನೇಹಿ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡ ಹೈದ್ರಾಬಾದ್!