Site icon Vistara News

Soraba News: ರೈತರ ಒಕ್ಕಲೆಬ್ಬಿಸುವುದರ ಹಿಂದೆ ಕುಮಾರ್ ಕೈವಾಡ; ಮಧು ಬಂಗಾರಪ್ಪ

Massive protest march congress Madhu Bangarappa

#image_title

ಸೊರಬ: “ತಾಲೂಕಿನ ಬಗರ್ ಹುಕುಂ (Bagar Hukum) ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದರ ಹಿಂದೆ ಶಾಸಕ ಕುಮಾರ್ ಬಂಗಾರಪ್ಪ ಪ್ರಮುಖ ಪಾತ್ರ ವಹಿಸಿದ್ದು, ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸುವ ಮೂಲಕ ರೈತರು ತಮ್ಮ ಸೇಡು ತೀರಿಸಿಕೊಳ್ಳಬೇಕು” ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.

ಪಟ್ಟಣದಲ್ಲಿ ತಾಲೂಕಿನ ತಾಳಗುಪ್ಪ ಗ್ರಾಮದ ಬಗರ್ ಹುಕುಂ ರೈತರ ಜಮೀನು ತೆರವುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನಿಂದ ಸೋಮವಾರ (ಮಾ.27) ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ತಾಲೂಕು ಕಚೇರಿ ಮುಂಭಾಗ ಅವರು ಮಾತನಾಡಿದರು.

ಇದನ್ನೂ ಓದಿ: Indian Masters T10: ಭಾರತದಲ್ಲಿ ಚೊಚ್ಚಲ ಟಿ10 ಕ್ರಿಕೆಟ್ ಟೂರ್ನಿ​; ಶೀಘ್ರದಲ್ಲೇ ಆರಂಭ

11 ವರ್ಷಗಳ ಹಿಂದೆ ತಾಲೂಕಿನ ತಾಳಗುಪ್ಪದಲ್ಲಿ ರೈತರ ಬಗರ್ ಹುಕುಂ ಜಮೀನು ತೆರವಿಗೆ ಸರ್ಕಾರ ಮುಂದಾಗಿತ್ತು. ಅಂದು ರೈತರಿಗೆ ಬೆಂಬಲವಾಗಿ ನಿಂತು ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ತೆರವು ಸ್ಥಳಕ್ಕೆ ಭೇಟಿ ನೀಡಿ ಭೂಮಿ ತೆರವುಗೊಳಿಸದಂತೆ ಅಧಿಕಾರಿಗಳ ಎದುರು ರೈತರಿಗೆ ನಾಟಕೀಯ ಭರವಸೆ ನೀಡಿ, ನಂತರ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೇರಿ 6 ಜನ ರೈತರ ಒಟ್ಟು 27 ಎಕರೆಯಲ್ಲಿ ಬೆಳೆಯಲಾಗಿದ್ದ ಅಡಕೆ ತೋಟವನ್ನು ನಾಶಪಡಿಸಿರುವುದರ ಹಿಂದೆ ಶಾಸಕರ ಕುಮ್ಮಕ್ಕು ಇದೆ. ಬಡ ರೈತರು ಬೀದಿಗೆ ಬರಲು ಕುಮಾರ್ ಬಂಗಾರಪ್ಪ ಅವರೇ ನೇರ ಹೊಣೆಯಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Viral News: 960 ಬಾರಿ ಟೆಸ್ಟ್​​ಗೆ ಒಳಗಾಗಿ ಡ್ರೈವಿಂಗ್​ ಲೈಸೆನ್ಸ್ ಪಡೆದ ಮಹಿಳೆ; ಕಾರು ಗಿಫ್ಟ್ ಪಡೆದ​ ಈಕೆಯ ಸ್ಟೋರಿ 18ವರ್ಷ ಹಿಂದಿನದ್ದು

ಸಂತ್ರಸ್ತೆಗೆ ಸಹಾಯ

ಸಂತ್ರಸ್ತ ರೈತ ಮಹಿಳೆ ಗಂಗಮ್ಮ ತನ್ನ ಪತಿಯನ್ನು ಕಳೆದುಕೊಂಡಿದ್ದು ಈ ಪ್ರಕರಣದ ನಂತರ ಭೂಮಿಯನ್ನೂ ಕಳೆದುಕೊಂಡಿದ್ದಳು. ಪ್ರತಿಭಟನೆಯಲ್ಲಿ ಸಂದರ್ಭದಲ್ಲಿ ಮಧು ಬಂಗಾರಪ್ಪ ಅವರು ಆರ್ಥಿಕ ಸಹಾಯಕ್ಕೆ ಮಾಡಿದ ಮನವಿಗೆ ಸ್ಥಳದಲ್ಲಿಯೇ 1.60 ಲಕ್ಷ ರೂ. ಸಂಗ್ರಹವಾಯಿತು. ಅವರ ವ್ಯೆಯಕ್ತಿಕ ನೆರವೂ ಸೇರಿದಂತೆ ಮಹಿಳೆಗೆ 2.60 ಲಕ್ಷ ರೂಪಾಯಿಗಳನ್ನು ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ರಮೇಶ್, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ವಿ.ಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಸಿ. ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಪ್ಪ ಹಾಲ್ಘಟ್ಟ, ಸದಾನಂದಗೌಡ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ಸುಜಾತಾ ಜೋತಾಡಿ, ವಿಶಾಲಾಕ್ಷಿ, ಮುಖಂಡರಾ ರಮೇಶ್ ಇಕ್ಕೇರಿ, ತಬಲಿ ಬಂಗಾರಪ್ಪ, ಹುಲ್ತಿಕೊಪ್ಪ ಗಣಪತಿ, ಸೊರಬ ಟೌನ್ ಅಧ್ಯಕ್ಷ ರಶೀದ್ ಸಾಬ್, ಶೇಖರ್ ವಕೀಲರು, ರವಿ ಬಾರಗಿ, ಇದ್ದರು.

ಇದನ್ನೂ ಓದಿ: Karnataka Elections : ಮಂಡ್ಯ ಜೆಡಿಎಸ್‌ನಲ್ಲಿ ಬಂಡಾಯ; ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜೀನಾಮೆ

Exit mobile version