Site icon Vistara News

Soraba News: ನಮೋ ವೇದಿಕೆಯಿಂದ ಆನವಟ್ಟಿಯಲ್ಲಿ ಮಾರ್ಚ್ 5ರಂದು ಬೃಹತ್ ಸಮಾವೇಶ

NaMo platform soraba massive rally

#image_title

ಸೊರಬ: ನಮೋ ವೇದಿಕೆಯಿಂದ ಮಾರ್ಚ್ ೫ರಂದು ಆನವಟ್ಟಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಸುಮಾರು ೨೦ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದ್ದು, ಸಾಧ್ಯವಾದರೆ ಅಂದೇ ಅಭ್ಯರ್ಥಿಯನ್ನು ಘೋಷಿಸಲಾಗುತ್ತದೆ ಎಂದು ನಮೋ ವೇದಿಕೆಯ (Soraba News) ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ತಿಳಿಸಿದರು.

ಪಟ್ಟಣದ ನಮೋ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ (ಫೆ.೯) ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ನಮೋ ವೇದಿಕೆಯ ಕಾರ್ಯಕರ್ತರು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಾವು ಯಾರ ಗುಲಾಮರಲ್ಲ, ಮಾರಾಟದ ವಸ್ತುಗಳೂ ಅಲ್ಲ ಎಂದರು.

ಇದನ್ನೂ ಓದಿ: Apoorva Rai Allegation: ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ ಬಗ್ಗೆ ಮೈಸೂರಿನ ಸ್ಪರ್ಧಿ ಅಪೂರ್ವ ರೈ ನೇರವಾಗಿ ಆರೋಪಿಸಿದ್ದೇನು?

ನಮೋ ವೇದಿಕೆಯವರು ವ್ಯಕ್ತಿ ನಿಷ್ಠರಲ್ಲ. ಪಕ್ಷ ನಿಷ್ಠರು. ಸರ್ಕಾರದ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆದಂತೆ ತಾಲೂಕಿನಲ್ಲಿಯೂ ನಡೆಯುತ್ತಿದೆ. ಅಭಿವೃದ್ಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಪಾತ್ರ ಪ್ರಮುಖವೇನಲ್ಲ ಅವರ ಸರ್ವಾಧಿಕಾರಿ ಧೋರಣೆಯಿಂದ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಇದನ್ನೂ ಓದಿ: PM Modi Speech in Rajya Sabha: ನೆಹರು ಶ್ರೇಷ್ಠ ವ್ಯಕ್ತಿಯಾಗಿದ್ದರೆ, ಅವರ ಹೆಸರೇಕೆ ಬಳಸುತ್ತಿಲ್ಲ! ಗಾಂಧಿ ಕುಟುಂಬಕ್ಕೆ ಮೋದಿ ಟಾಂಗ್

ಅಭಿವೃದ್ಧಿ ಕಾಮಗಾರಿಗಳಲ್ಲಿ ಕಮಿಷನ್ ವ್ಯವಹಾರ ನಡೆಸುತ್ತಿರುವುದು ನಿಜವಿರಬಹುದು ಭ್ರಷ್ಟಾಚಾರವನ್ನು ಪ್ರಶ್ನಿಸುವವರ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳನ್ನು ಸೃಷ್ಟಿಸಿ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Election : ಯಾದಗಿರಿಗೆ ಬನ್ನಿ, 1 ಕೋಟಿ ರೂ. ಕೊಡ್ತೀನಿ ; ಸಿದ್ದರಾಮಯ್ಯಗೆ ಬಿಜೆಪಿ ಮುಖಂಡನ ಆಹ್ವಾನ

ಶಾಸಕ ಕುಮಾರ್ ಬಂಗಾರಪ್ಪ ಅವರು ಅಭಿವೃದ್ಧಿಗೆ ಬಳಸಬೇಕಾದ ಅನುದಾನವನ್ನು ಸೂಕ್ತವಾಗಿ ಬಳಸಿಲ್ಲ. ಸ್ವಜನ ಪಕ್ಷಪಾತ, ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾ‌ಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರು ಪೇಜ್ ಪ್ರಮುಖರಲ್ಲ. ನಿಜವಾದ ೬ ಸಾವಿರ ಪೇಜ್ ಪ್ರಮುಖರು ನಮೋ ವೇದಿಕೆಯಲ್ಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಎಚ್.ಎಸ್.ಮಂಜಪ್ಪ ಮಾತನಾಡಿ, ಶಾಸಕರ ವಿರುದ್ಧವಾದ ನಮೋ ವೇದಿಕೆ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಸೂಕ್ತವಾದ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಲಾಗುವುದು ಎಂದರು.

ಇದನ್ನೂ ಓದಿ: Assembly Session: ಶುಕ್ರವಾರದಿಂದ ಜಂಟಿ ಸದನ, ಫೆ.17ರಿಂದ ಬಜೆಟ್‌ ಅಧಿವೇಶನ; 7 ಮಸೂದೆ, 1,300 ಪ್ರಶ್ನೆ: ಸ್ಪೀಕರ್‌ ಕಾಗೇರಿ ಸುದ್ದಿಗೋಷ್ಠಿ

ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಕುಮಾರ್ ಬಂಗಾರಪ್ಪ ‌ಅವರು ತಮ್ಮ ಮನೆಗೆ ಸೌಹಾರ್ದಯುತವಾಗಿ ಭೇಟಿ ನೀಡಿದ್ದು, ಉಭಯ ಕುಶುಲೋಪರಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ನಮೋ ವೇದಿಕೆಯ ವಿರುದ್ಧ ಎದ್ದಿರುವ ಊಹಾಪೋಹಗಳ ಬಗ್ಗೆ ತೆರೆ ಎಳೆದರು.
ಸಭೆಯಲ್ಲಿ ಪ್ರಮುಖರಾದ ಕುಸುಮಾ ಪಾಟೀಲ್, ಯೋಗೇಶ್, ನಿರಂಜನ್ ಕುಪ್ಪಗಡ್ಡೆ, ಸುತ್ತುಕೋಟೆ ನಿಂಗಪ್ಪ, ಶಿವಯೋಗಿ, ಮಲ್ಲಿಕಾರ್ಜುನ ಗುತ್ತೇರ್, ಹೇಮರಾಜ, ಎ.ಎಲ್.ಅರವಿಂದ್, ಅಶೋಕ ನಾಯಕ್, ಗುರುಪ್ರಸನ್ನ ಗೌಡ, ರಾಘವೇಂದ್ರ ಗಾಲರ್ಫಾರ್ಡ್, ಬೆನವಪ್ಪ ಇದ್ದರು

ಇದನ್ನೂ ಓದಿ: IND VS AUS: ಟೆಸ್ಟ್​ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರವಿಚಂದ್ರನ್​ ಅಶ್ವಿನ್​

Exit mobile version