Site icon Vistara News

Soraba News : ಸೊರಬ ಅಧಿಕಾರಿಗಳ ವರ್ಗಾವಣೆಯಲ್ಲಿ ಶಾಸಕರ ಪಾತ್ರವಿಲ್ಲ: ಪ್ರಕಾಶ್ ತಲಕಾಲಕೊಪ್ಪ

Prakash Talakalakoppa BJP taluk president soraba

ಸೊರಬ: ತಾಲೂಕಿಗೆ ಬಂದ ತಹಸೀಲ್ದಾರರಲ್ಲಿ ಮೂವರು ಗ್ರೇಡ್-೧ ತಹಸೀಲ್ದಾರು, ಉಳಿದಂತೆ ಗ್ರೇಡ್-೨, ಪ್ರಭಾರಿ ಮತ್ತು ಪ್ರೊಬೆಷನರಿ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡಿದ್ದರು. ಮುಂಬಡ್ತಿ ಸೇರಿದಂತೆ ಮತ್ತಿತರ ಕಾರಣಗಳಿಂದ ವರ್ಗಾವಣೆಯಾಗಿ ತೆರಳಿದ್ದಾರೆಯೇ ವಿನಃ, ಶಾಸಕರು ಯಾವುದೇ ಪತ್ರ ಬರೆದು ತಹಸೀಲ್ದಾರರ ಬದಲಾವಣೆಗೆ ಕೇಳಿಕೊಂಡಿಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಸ್ಪಷ್ಟಪಡಿಸಿದ್ದಾರೆ.

ಅವರು ಮಂಗಳವಾರ (ಜ.೨೪) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹಿಂದಿನ ಶಾಸಕರು ಮಾಡಿದ ಬಗರ್‌ಹುಕುಂ ವಿಷಯದಲ್ಲಿನ ಕರ್ಮಕಾಂಡ ಇದೀಗ ಫಲ ನೀಡುತ್ತಿದೆ. ಬಗರ್‌ಹುಕುಂ ಹಕ್ಕು ಪತ್ರವನ್ನು ಉಳ್ಳವರಿಗೆ ಕಾನೂನು ಬಾಹಿರವಾಗಿ ನೀಡಲಾಗಿತ್ತು. ಇದರ ಕುರಿತು ತನಿಖೆಯಾಗಿ ಅಂದಿನ ತಹಸೀಲ್ದಾರ್ ಎರಡು ಬಾರಿ ಅಮಾನತು ಆಗಿದ್ದರು. ಅಂದಿನ ಕಾನೂನು ಬಾಹಿರ ಮಂಜೂರಾತಿಗಳಿಂದಾಗಿ ಇಂದಿನ ಅಧಿಕಾರಿಗಳು ಭಯಪಡುವಂತಾಗಿದೆ. ಕಂದಾಯ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರಗಳಿಂದ ಭಯಭೀತರಾದ ತಹಸೀಲ್ದಾರರು ತಾವಾಗಿಯೇ ವರ್ಗಾವಣೆ ಪಡೆಯುತ್ತಿದ್ದಾರೆ. ಇದಕ್ಕೆ ಮಧು ಬಂಗಾರಪ್ಪ ಅವರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವೇ ನೇರ ಕಾರಣ ಎಂದು ಪ್ರಕಾಶ್ ತಲಕಾಲಕೊಪ್ಪ ಕುಟುಕಿದ್ದಾರೆ.

ಇದನ್ನೂ ಓದಿ | Karnataka Election : ಸರ್ಕಾರದ ಆಯಸ್ಸು ಇನ್ನು 40 ದಿನ; ವಿಧಾನಸೌಧವನ್ನು ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಉಪಾಧ್ಯಕ್ಷ ದೇವೇಂದ್ರಪ್ಪ ಚನ್ನಾಪುರ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ್ ಕಡಸೂರು, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಟೌನ್ ಅಧ್ಯಕ್ಷ ಅಶೋಕ್ ಶೇಟ್, ಪುರಸಭೆ ಸದಸ್ಯ ಎಂ.ಡಿ. ಉಮೇಶ್, ಪ್ರಮುಖರಾದ ಕೃಷ್ಣಮೂರ್ತಿ ಕೊಡಕಣಿ, ಗುರುಮೂರ್ತಿ, ಕಿರಣ್ ಕುಮಾರ್, ಶಿವಕುಮಾರ್ ಸೇರಿದಂತೆ ಇತರರಿದ್ದರು.

Exit mobile version