Site icon Vistara News

Soraba News: ಬೆಳಕು ಯೋಜನೆ ಅಡಿ ಗ್ರಾ.ಪಂನಿಂದ ಪಡೆಯಬೇಕಾಗಿದ್ದ ಅನುಮತಿ ರದ್ದುಪಡಿಸಿ ಬಡವರಿಗೆ ನೇರವಾಗಿ ವಿದ್ಯುತ್ ಪೂರೈಕೆ

V. Sunil Kumar Kumar Bangarappa Power Substation soraba

#image_title

ಸೊರಬ: (Soraba News) ಮಂತ್ರಿಯಾದ ಕಳೆದ 2 ವರ್ಷದ ಅವಧಿಯಲ್ಲಿ ವಿದ್ಯುತ್ ರಹಿತ ಮನೆಗಳಿಗೆ ಬೆಳಕು ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಪಡೆಯಬೇಕಾಗಿದ್ದ ಅನುಮತಿ ರದ್ದುಪಡಿಸಿ ಬಡವರಿಗೆ ನೇರವಾಗಿ ವಿದ್ಯುತ್ ಪೂರೈಕೆ ಮಾಡಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿ 2 ಕೋಟಿ ರೂ. ವೆಚ್ಚದ ಯುಜಿ ಕೇಬಲ್ ಅಳವಡಿಕೆ ಶಂಕುಸ್ಥಾಪನೆ ಮತ್ತು ಕುಪ್ಪಗಡ್ಡೆ ಗ್ರಾಮದಲ್ಲಿ 110/11 ಕೆವಿ ವಿದ್ಯುತ್ ಉಪ ಕೇಂದ್ರದ ಶಂಕುಸ್ಥಾಪನೆಯ ಸಮಾರಂಭವನ್ನು ಗುರುವಾರ (ಫೆ.೨) ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕಾಲದಲ್ಲಿ ಜಾರಿಗೊಳಿಸಲಾಗಿದ್ದ ರೈತರ ಕೃಷಿ ಪಂಪ್ ಸೆಟ್‍ಗೆ ಉಚಿತ ವಿದ್ಯುತ್ ಯೋಜನೆ ಮುಂದುವರಿಸಲಾಗಿದ್ದು, ಅಂದು ರೈತರು 3 ಸಾವಿರ ಕೋಟಿ ರೂ. ಪ್ರೋತ್ಸಾಹ ಧನ ಪಡೆಯುತ್ತಿದ್ದರು, ಇಂದು ಸುಮಾರು 16 ಸಾವಿರ ಕೋಟಿ ರೂ. ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Congress Politics : ಕಾಂಗ್ರೆಸ್‌ನ 120 ಅಭ್ಯರ್ಥಿಗಳು ಫೈನಲ್‌: ಚುನಾವಣೆ ಸಮಿತಿ ಸಭೆಯಲ್ಲಿ ಅಸಮಾಧಾನದ ಹೊಗೆ

ಸುಟ್ಟ ಪರಿವರ್ತಕಗಳನ್ನು 24 ಗಂಟೆಗಳಲ್ಲಿ ಸಿದ್ಧಪಡಿಸುವ ಉದ್ದೇಶದಿಂದ ವಿದ್ಯುತ್ ಬ್ಯಾಂಕ್‍ನ್ನು ಸೊರಬದಲ್ಲಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಇದೆ. ಆದರೆ ಸರಬರಾಜಿಗೆ ಬೇಕಾದ ಪರಿಕರಗಳು ಇರಲಿಲ್ಲ. ಅವುಗಳನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿ ಗುಣಮಟ್ಟ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡುವ ದೃಷ್ಟಿಯಲ್ಲಿ ಬೇಕಾದ ತಾಂತ್ರಿಕತೆ ಅಳವಡಿಸಿಕೊಂಡು ಸುಮಾರು 250ಕ್ಕೂ ಅಧಿಕ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಇದನ್ನೂ ಓದಿ: Shahrukh Khan: ಪಠಾಣ್‌ನಿಂದ ಜವಾನ್‌, ಡಂಕಿ ಸಿನಿಮಾಗಳಿಗೆ ಲಾಭವಾಗುತ್ತಾ? ಶಾರುಖ್‌ ಬಗ್ಗೆ ಭವಿಷ್ಯ ನುಡಿದ ತಜ್ಞರು!

ಶಾಸಕ ಕುಮಾರ್ ಬಂಗಾರಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಉಪಾಧ್ಯಕ್ಷ ಮಧುರಾಯ್ ಶೇಟ್, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ನಟರಾಜ್, ಶ್ರೀರಂಜನಿ, ಪ್ರಭುಮೆಸ್ತ್ರಿ, ಮುಖಂಡರಾದ ಪ್ರಕಾಶ್ ತಲಕಾಲಕೊಪ್ಪ, ಶಿವಕುಮಾರ್ ಕಡಸೂರು, ಕುಪ್ಪಗಡ್ಡೆ ಗ್ರಾ.ಪಂ ಅಧ್ಯಕ್ಷೆ ವಿದ್ಯಾಗುರುರಾಜ, ಗ್ರಾ.ಪಂ ಉಪಾಧ್ಯಕ್ಷ ಮಮತ ರೇವಣಪ್ಪ, ಕುಪ್ಪಗಡ್ಡೆ ಗ್ರಾಪಂ ಸದಸ್ಯರು ಸೇರಿದಂತೆ ತಹಶೀಲ್ದಾರ್ ಮಲ್ಲೇಶ ಪುಜಾರ್, ಶಿವಮೊಗ್ಗ ಮೆಸ್ಕಾಂ ಮುಖ್ಯ ಎಂಜಿನಿಯರ್ ಸಾಗರ ವಿಭಾಗದ ಮುಖ್ಯ ಎಂಜನಿಯರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ, ಲೋಕೋಪಯೋಗಿ ಎಂಜಿನಿಯರ್ ಮತ್ತಿತರು ಇದ್ದರು.

ಇದನ್ನೂ ಓದಿ:Kiara – Sidharth Wedding : ಕಿಯಾರಾ – ಸಿದ್ದಾರ್ಥ್‌ ಮದುವೆಗೂ ಶಾರುಖ್‌ ಖಾನ್‌ಗೂ ಇದೆ ಸಂಬಂಧ! ಏನದು?

Exit mobile version