ಬೆಂಗಳೂರು: ಇಡೀ ದೇಶದಲ್ಲೇ ನೈರುತ್ಯ ರೈಲ್ವೇ ಝೋನ್ (South Western Railway) ದೇಶದಲ್ಲೇ ನಂಬರ್ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಹೇಳಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಸುರಕ್ಷಿತೆ, ಸೇವೆ, ಸಮಯ ಪಾಲನೆ ಹಾಗೂ ಸ್ವಚ್ಛತೆ ಮಾನದಂಡದಲ್ಲಿ ನಮ್ಮ ಝೋನ್ ನಂಬರ್ 1 ಆಗಿದೆ. 2022ರಲ್ಲಿ ನಾವು ಸಾರ್ವಕಾಲಿಕ ಆದಾಯ ದಾಖಲೆ ಮಾಡಿದ್ದೇವೆ. ಈ ಅವಧಿಯಲ್ಲಿ ನಾವು 5,680 ಕೋಟಿ ರೂ. ಆದಾಯ ಮಾಡಿಕೊಂಡಿದ್ದೇವೆ. 2021ರ ಅವಧಿಯಲ್ಲಿ 4,410 ಕೋಟಿ ರೂಪಾಯಿ ಆದಾಯ ಬಂದಿತ್ತು. ಕಳೆದ ಸಾಲಿಗೆ ಹೋಲಿಸಿಕೊಂಡರೆ 29% ಆದಾಯ ಗಳಿಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Vande Bharat Metro: ವಂದೇ ಭಾರತ್ ರೀತಿಯಲ್ಲೇ ರಾಜ್ಯಕ್ಕೆ ವಂದೇ ಮೆಟ್ರೋ ಟ್ರೈನ್!
ಬೆಂಗಳೂರಲ್ಲೇ ಲೋಕಾರ್ಪಣೆ
ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಮೆಟ್ರೋ ಬೆಂಗಳೂರಲ್ಲೇ ಲೋಕಾರ್ಪಣೆ ಆಗುವ ಸಾಧ್ಯತೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಹೇಳಿದ್ದಾರೆ. ಕೇಂದ್ರದ ಸೂಚನೆ ಮೇರೆಗೆ ವಂದೇ ಭಾರತ್ ಮೆಟ್ರೋ ನಿರ್ವಹಣೆ ಹಾಗೂ ಬ್ಯಾಕ್ ಅಪ್‌ಗೆ ಬೇಕಿರುವ ಸಿದ್ಧತೆ ಆರಂಭಿಸಿರೋದಾಗಿ ಅವರು ತಿಳಿಸಿದ್ದಾರೆ. ನಮ್ಮಲ್ಲಿ ಈಗ ವಂದೇ ಭಾರತ್ ಮೈನ್ಟೇನ್ ಮಾಡಲು ಬೇಕಾಗಿರುವ ರಿಸೋರ್ಸ್ ಕ್ರಿಯೇಟ್ ಮಾಡುತ್ತಿದ್ದೇವೆ. ಕೇಂದ್ರದ ಸೂಚನೆ ಮೇರೆಗೆ ಈ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.