Site icon Vistara News

Bengaluru Traffic Police: ಕುಡಿದು ವಾಹನ ಚಾಲನೆ ಮಾಡುವುದರ ವಿರುದ್ಧ ವಾಹನ ಚಾಲಕರಿಗೆ ಜಾಗೃತಿ; ಬೆಂಗಳೂರು ಸಂಚಾರ ಪೊಲೀಸ್‌ ಸ್ಪೆಷಲ್ ಡ್ರೈವ್‌

Special drive by Bengaluru Traffic Police for Awareness of motorists against drunk and drive

#image_title

ಬೆಂಗಳೂರು: ನಗರದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಕುಡಿದು ವಾಹನ ಚಾಲನೆ ಮಾಡುವುದರ ವಿರುದ್ಧ ವಾಹನ ಚಾಲಕರಿಗೆ ಬೆಂಗಳೂರು ಸಂಚಾರ ಪೊಲೀಸ್‌ (Bengaluru Traffic Police) ವಿಭಾಗದಿಂದ ಶನಿವಾರ ತಡರಾತ್ರಿ ಜಾಗೃತಿ ಮೂಡಿಸಲಾಯಿತು.

ಯುವಪೀಳಿಗೆಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಡಿಡಿ ಸ್ಪೆಷಲ್ ಡ್ರೈವ್‌ಗೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಚಾಲನೆ ನೀಡಿದರು. 2021ರಲ್ಲಿ 621 ಮಂದಿ ಮೃತಪಟ್ಟಿದ್ದರೆ, 2820 ಮಂದಿ ಗಾಯಗೊಂಡಿದ್ದರು. 2022ರಲ್ಲಿ 772 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದು, 3189 ಮಂದಿ ಗಾಯಗೊಂಡಿದ್ದರು. ಹಾಗೆಯೇ 2023ರ ಜನವರಿಯಲ್ಲೇ ಅಪಘಾತಗಳಲ್ಲಿ 78 ಮಂದಿ ಮೃತಪಟ್ಟಿದ್ದರೆ, 391 ಮಂದಿ ಗಾಯಗೊಂಡಿದ್ದಾರೆ. ಇದರ ಸಂಖ್ಯೆ ಪ್ರತಿ ವರ್ಷ ಏರಿಕೆಯಾಗತ್ತಲೇ ಇದೆ. ಹೀಗಾಗಿ ಸಂಚಾರಿ ಪೊಲೀಸರಿಂದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ | Drugs case: 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ, ಇಬ್ಬರು ಪೆಡ್ಲರ್‌ ಸೆರೆ; ಡಿಜೆ ಹಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ

ಡ್ರಂಕ್‌ ಆ್ಯಂಡ್‌ ಡ್ರೈವ್‌ ವಿರುದ್ಧ ಸ್ಪೆಷಲ್ ಡ್ರೈವ್‌ ಭಾಗವಾಗಿ ಕುಡಿದು ವಾಹನ ಚಲಾಯಿಸುವವರಿಗೂ ಅರಿವು ಮೂಡಿಸುವಂತೆ ನಗರದ ಎಲ್ಲಾ ಸಂಚಾರಿ ಇನ್ಸ್‌ಪೆಕ್ಟರ್‌ಗಳಿಗೆ ಸಂಚಾರ ವಿಭಾಗದ ವಿಶೇಷ ಆಯುಕ್ತ ಸಲೀಂ ಸೂಚನೆ ನೀಡಿದರು. ಶನಿವಾರ ತಡರಾತ್ರಿ 12 ಗಂಟೆಯಿಂದ 12.30ವರೆಗೆ ಸ್ಪೆಷಲ್ ಡ್ರೈವ್‌ ನಡೆಯಿತು.

Exit mobile version