ಬೆಂಗಳೂರು: ಮೈಂಡ್ ಫುಲ್ ಮೀಡಿಯಾ ಪ್ರೈ ಲಿ, ವಿಶ್ವ ವಿಪ್ರತ್ರಯೀ ಪರಿಷತ್ ಹಾಗೂ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಸಹಯೋಗದಲ್ಲಿ ಡಿಸೆಂಬರ್ 31 ರಂದು ಬೆಳಗ್ಗೆ 10.30ಕ್ಕೆ, ಜೆ.ಪಿ.ನಗರದ ಆರ್.ವಿ. ದಂತ ಕಾಲೇಜು ಸಭಾಂಗಣದಲ್ಲಿ ʼಸ್ಪಿರಿಟ್ ಆಫ್ ಇಂಡಿಯಾ-ಹೆಮ್ಮೆಗೆ ಎಷ್ಟೊಂದು ಕಾರಣಗಳು: ಒಂದು ಸಂವಾದ ಸರಣಿʼ ಕಾರ್ಯಕ್ರಮವನ್ನು (Spirit of India) ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ಘಾಟಿಸಲಿದ್ದು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹೋರಾಟಗಾರ ಎನ್.ಆರ್.ರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ನ್ಯಾಷನಲ್ ಎಜುಕೇಷನಲ್ ಟೆಕ್ನಾಲಜಿ ಫೋರಮ್ ಅಧ್ಯಕ್ಷ ಡಾ. ಅನಿಲ್ ಸಹಸ್ರಬುದ್ಧೆ, ವಿಶೇಷ ಅತಿಥಿಗಳಾಗಿ ಸಾಂಸ್ಕೃತಿಕ ಚಿಂತಕ ಸುಚೇಂದ್ರ ಪ್ರಸಾದ್, ಜಿಎಂ ಗ್ರೂಪ್ ಅಧ್ಯಕ್ಷ ಜಿ.ಎಂ.ಲಿಂಗರಾಜು ಹಾಗೂ ವಿಶ್ವ ವಿಪ್ರತ್ರಯೀ ಪರಿಷತ್ ಅಧ್ಯಕ್ಷ ಎಸ್.ರಘುನಾಥ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ʼಮಸುಕಾದ ಇತಿಹಾಸದ ಪುಟಗಳು, ಮರೆಯಾದ ವಿಜಯಗಾಥೆಗಳುʼ ಎಂಬ ವಿಷಯದ ಬಗ್ಗೆ ಸಂವಾದ ನಡೆಯಲಿದೆ. ಈ ವೇಳೆ ಸಾಹಿತಿ, ಇತಿಹಾಸಕಾರ ಡಾ. ವಿಕ್ರಮ್ ಸಂಪತ್ ಹಾಗೂ ಚಲನಚಿತ್ರ ಕಲಾವಿದ, ಚಿಂತಕ ಪ್ರಕಾಶ್ ಬೆಳವಾಡಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಧ್ಯಾಹ್ನ 1.45ಕ್ಕೆ ಭೋಜನ ವ್ಯವಸ್ಥೆ ಇರಲಿದೆ.
ಇದನ್ನೂ ಓದಿ | Story Competition | ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ; ಒಂದು ಸಂಸ್ಕಾರದ ಕಥೆಗೆ ಪ್ರಥಮ ಬಹುಮಾನ