Site icon Vistara News

SSLC Exam 2023: ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಸಾಮೂಹಿಕ ನಕಲು ಕಂಡು ದಂಗಾದ ಎಸ್‌ಪಿ ಇಷಾಪಂತ್‌

SSLC exam SP Ishapant shocked to see mass copying

SSLC exam SP Ishapant shocked to see mass copying

ಕಲಬುರಗಿ: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam 2023) ನಡೆಯುತ್ತಿದೆ. ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಪರೀಕ್ಷಾ ಕೇಂದ್ರಕ್ಕೆ ಕಲಬುರಗಿ ಎಸ್‌ಪಿ ಇಷಾಪಂತ್‌ (kalaburagi sp IshaPant) ದಿಢೀರ್‌ ಭೇಟಿ ನೀಡಿದ್ದು, ಕ್ಷಣಕಾಲ ದಂಗಾಗಿ ಹೋಗಿದ್ದರು.

ಸೋಮವಾರ (ಏ.3) ಗಣಿತ ಹಾಗೂ ಸಮಾಜಶಾಸ್ತ್ರ (ಅಂಧವಿದ್ಯಾರ್ಥಿಗಳಿಗೆ ಮಾತ್ರ) ವಿಷಯಕ್ಕೆ ಪರೀಕ್ಷೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಅತನೂರು ಗ್ರಾಮದ ಆದರ್ಶ ವಿದ್ಯಾಲಯಕ್ಕೆ (Adarsh Vidyalaya) ದಿಢೀರ್‌ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಗಳು ಸಾಮೂಹಿಕ ನಕಲಿನಲ್ಲಿ (Mass Copy) ನಿರತರಾಗಿರುವುದು ಕಂಡು ಬಂತು.

ಆದರ್ಶ ವಿದ್ಯಾಲಯದಲ್ಲಿ ಸಾಮೂಹಿಕ ನಕಲು

ಈ ವೇಳೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರನ್ನು ಕರೆಸಿದ ಎಸ್‌ಪಿ ಇಷಾಪಂತ್‌ ತರಾಟೆಗೆ ತೆಗದುಕೊಂಡಿದ್ದಾರೆ. ಶಿಕ್ಷಕರಾಗಿ ಮಕ್ಕಳಿಗೆ ನಕಲು ಮಾಡದಂತೆ ಬುದ್ಧಿವಾದ ಹೇಳಬೇಕು. ಅದು ಬಿಟ್ಟು ನೀವೇ ಸಾಮೂಹಿಕ ನಕಲು ನಡೆಸಲು ಅವಕಾಶ ಮಾಡಿಕೊಟ್ಟರೆ ಹೇಗೆ ಎಂದು ಕಿಡಿಕಾರಿದರು.

ನಕಲು ಮಾಡುವುದು ಮುಂದುವರಿದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದರು. ನಕಲು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೂ ಫೋನ್ ಕರೆ ಮೂಲಕ ತಾಕೀತು ಮಾಡಿದ್ದಾರೆ.

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಮಾರ್ಚ್‌ 31 ರಿಂದ ಆರಂಭವಾಗಿದೆ. ಈ ಬಾರಿ ಪರೀಕ್ಷೆಗೆ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್‌ 15ರವರೆಗೆ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಪ್ರಥಮ ಭಾಷೆ, ಗಣಿತ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಮುಕ್ತಾಯಗೊಂಡಿದೆ.

ಇದನ್ನೂ ಓದಿ: Karnataka Elections : ಬೊಮ್ಮಾಯಿ ಬಿಡಿ, ಮೋದಿನೇ ನನ್ನೆದುರು ನಿಂತರೂ ಗೆಲ್ಲೋದು ನಾನೇ: ಎಸ್ಸೆಸ್‌ ಮಲ್ಲಿಕಾರ್ಜುನ!

ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ

31-03-2023 -ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ
03-04-2023 -ಗಣಿತ ಶಾಸ್ತ್ರ, ಸಮಾಜ ಶಾಸ್ತ್ರ
06-04-2023- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
08-04-2023- ಅರ್ಥಶಾಸ್ತ್ರ ಹಾಗೂ ಎಲಿಮೆಂಟ್ಸ್‌ ಆಫ್‌ ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌
10-04-2023- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
12-04-2023- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ
15-04-2023- ಸಮಾಜ ವಿಜ್ಞಾನ

Exit mobile version