Site icon Vistara News

SSLC Result 2023: ಫೇಲಾಗಿದ್ದರೆ ಡೋಂಟ್‌ ವರಿ, ನಿಮಗಿದೆ ಸಪ್ಲಿಮೆಂಟರಿ; ಪೂರಕ ಪರೀಕ್ಷೆ ನೋಂದಣಿಗೆ ಲಾಸ್ಟ್‌ ಡೇಟ್‌ ಯಾವಾಗ?

SSLC EXAM

#image_title

ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 31 ರಿಂದ ಏಪ್ರಿಲ್‌ 15ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam 2023) ನಡೆದಿದ್ದು, ಮೇ 8ರಂದು ಫಲಿತಾಂಶ (SSLC Result) ಪ್ರಕಟಗೊಂಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗಾಗಿ (SSLC Supplementary Exam) ಇಂದಿನಿಂದಲೇ (ಮೇ 8) ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮೇ 8ರಿಂದ 15 ರೊಳಗೆ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಉತ್ತರ ಪತ್ರಿಕೆಗಳ ಛಾಯಾಪ್ರತಿ (ಫೋಟೊ ಕಾಪಿ), ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿ. ಪೂರಕ ಪರೀಕ್ಷೆಯನ್ನು ನೋಂದಾಯಿಸಲುಕೊಳ್ಳಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಉತ್ತರ ಪತ್ರಿಕೆಯ ಛಾಯಾಪತ್ರಿಗಾಗಿ ಮೇ 8ರಿಂದ 14ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜತೆಗೆ ಮರು ಎಣಿಕೆ/ ಮರು ಮೌಲ್ಯಮಾಪನಕ್ಕೆ ಮೇ 15 ರಿಂದ 21ರ ವರೆಗೆ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: SSLC Result 2023 : 625 ಕ್ಕೆ 625 ಅಂಕ ಪಡೆದ ನಾಲ್ವರು ಸಾಧಕರು ಇವರು

ಪೂರಕ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಮಂಡಳಿ ತಿಳಿಸಿದೆ. ಅಧಿಕೃತ ಅಧಿಸೂಚನೆಯನ್ನು ಮೇ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡಲಾಗುತ್ತದೆ. ಜೂನ್‌ ತಿಂಗಳಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಜುಲೈನಲ್ಲಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

Exit mobile version