ಬಳ್ಳಾರಿ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2023) ಸುಧಾರಣೆಯ ಜಿಲ್ಲಾಡಳಿತದ ಪ್ರಯತ್ನ ಯಶಸ್ಸು ಕಂಡಿಲ್ಲ, 28 ನೇ ಸ್ಥಾನದಿಂದ 31ನೇ ಸ್ಥಾನಕ್ಕೆ ಜಿಲ್ಲೆಯ ಫಲಿತಾಂಶ ಕುಸಿತ ಕಂಡಿದೆ.
ಜಿಲ್ಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ 337 ಪ್ರೌಢ ಶಾಲೆಗಳಿದ್ದು, ಒಟ್ಟು 20142 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇದರಲ್ಲಿ 16282 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 81.54ರಷ್ಟು ಫಲಿತಾಂಶ ಪಡೆದಿದೆ.
ಈ ಬಾರಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆಯಿಂದ ಫೋನ್ ಇನ್ ಕಾರ್ಯಕ್ರಮ, ವಿಶೇಷ ಪರೀಕ್ಷೆಯ ಪ್ರಯತ್ನ ಫಲಿಸಿಲ್ಲ.
ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿ ಚಿತ್ರತಂಡದ ಸದಸ್ಯನಿಗೆ ಜೀವ ಬೆದರಿಕೆ; ಭದ್ರತೆ ಒದಗಿಸಿದ ಪೊಲೀಸ್
ಜಿಲ್ಲೆಯಲ್ಲಿ ಪ್ರತಿ ವರ್ಷದಿಂದ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಿರೀಕ್ಷಿತ ಸುಧಾರಣೆ ಕಾಣುತ್ತಿಲ್ಲ. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ರಾಜ್ಯಕ್ಕೆ 24ನೇ ಸ್ಥಾನ ಪಡೆದಿತ್ತು. 2015-16ರಲ್ಲಿ 34ನೇ ಸ್ಥಾನ, 2016-17ರಲ್ಲಿ 17ನೇ ಸ್ಥಾನ, 2017-18ರಲ್ಲಿ 12ನೇ ಸ್ಥಾನ, 2018-19ರಲ್ಲಿ 23ನೇ ಸ್ಥಾನ, 2019-20ರಲ್ಲಿ 13ನೇ ಸ್ಥಾನ, 2020-21ರಲ್ಲಿ ಕೊರೊನಾ ಸೋಂಕಿನ ಸಂದರ್ಭದಲ್ಲಿ ಶೇ.100 ಫಲಿತಾಂಶ ಪಡೆದಿದೆ.
ವಿಜಯನಗರ ಸುಧಾರಣೆ, ಬಳ್ಳಾರಿ ಕುಂಠಿತ
2021-22 ರಲ್ಲಿ ಶೇ.83.79ರಷ್ಟು ಫಲಿತಾಂಶ ಸಾಧಿಸಿ 28ನೇ ಸ್ಥಾನ ಪಡೆದಿತ್ತು. ಆದರೆ, ಪ್ರಸಕ್ತ ಸಾಲಿನಿಂದ ಪ್ರತ್ಯೇಕ ಜಿಲ್ಲೆಯಿಂದ ಫಲಿತಾಂಶ ಪ್ರಕಟಗೊಂಡಿದ್ದು 2022-23ರಲ್ಲಿ ವಿಜಯನಗರ ಜಿಲ್ಲೆ ರಾಜ್ಯಕ್ಕೆ 10ನೇ ಸ್ಥಾನ ಪಡೆದು ಗಮನ ಸೆಳೆದರೆ, ಇತ್ತ ಬಳ್ಳಾರಿ ಜಿಲ್ಲೆ ರಾಜ್ಯಕ್ಕೆ 31ನೇ ಸ್ಥಾನ ಪಡೆಯುವ ಫಲಿತಾಂಶದಲ್ಲಿ ಕುಸಿತಗೊಂಡಿದೆ.
ಇದನ್ನೂ ಓದಿ: HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್ ಗೃಹ ಸಾಲ ಬಡ್ಡಿ ದರ ಏರಿಕೆ, ಹೊಸ ರೇಟ್ ಎಷ್ಟಿದೆ?
ನಗರ ವಿದ್ಯಾರ್ಥಿಗಳ ಮೇಲುಗೈ
ಈ ಬಾರಿ ನಗರ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಟ್ಟು 10817 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8759 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ನಗರ ಪ್ರದೇಶದ ಪ್ರೌಢಶಾಲೆಯ ಒಟ್ಟು 9325 ವಿದ್ಯಾರ್ಥಿಗಳಲ್ಲಿ 7523 ಜನ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿಯರೇ ಸ್ಟ್ರಾಂಗ್ ಗುರು
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಪೈಕಿ ಒಟ್ಟು 10195 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 8414 ಪಾಸ್ ಆಗುವ ಮೂಲಕ ಶೇ.83 ರಷ್ಟು ಫಲಿತಾಂಶ ಪಡೆದಿದ್ದಾರೆ. ಹುಡುಗರ ವಿಭಾಗದಲ್ಲಿ ಒಟ್ಟು 7868 ರಲ್ಲಿ 5476 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.79 ರಷ್ಟು ಫಲಿತಾಂಶ ಪಡೆದಿದ್ದಾರೆ.
ಇದನ್ನೂ ಓದಿ: Cyclone Mocha: ಮೇ 12ರಂದು ತೀವ್ರಗೊಳ್ಳಲಿದೆ ಮೋಚಾ ಚಂಡಮಾರುತ, ಈ ಹೆಸರಿಗೆ ಕಾರಣವೇನು?
600 ಗಡಿ ದಾಟಿದ ಶತಕವೀರರು
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 119 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ಬಳ್ಳಾರಿಯ ಸೇಂಟ್ ಫಿಲೋಮಿನಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜಿ. ಶ್ವೇತಾ 620, ಸೈಯಾದ ಅಮೀರ್ ಉಜ್ಮಾ 620, ಸಂಗನಕಲ್ಲಿನ ವಿಸ್ಡಮ್ ಲ್ಯಾಂಡ್ ಶಾಲೆಯ ಎಂ.ಎಸ್. ಹರಿಣಿ 617, ಎಚ್. ಸಾತ್ವಿಕ್ 617, ಸಂಡೂರಿನ ಶ್ರೀ ವಿದ್ಯಾಮಂದಿರ ಪ್ರೌಢ ಶಾಲೆಯ ಕೆ.ಪೂಜಾ 617, ವಿಸ್ಡಮ್ ಲ್ಯಾಂಡ್ ಪ್ರೌಢಶಾಲೆಯ ಮೀನಾ 616 ಅಂಕ ಪಡೆದು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.