Site icon Vistara News

SSLC Result 2023: ವಿಜಯನಗರ ಜಿಲ್ಲೆಗೆ 10ನೇ ಸ್ಥಾನ; 625ಕ್ಕೆ 621 ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿಗಳು

SSLC Result 2023 Vijayanagar District

ಹೊಸಪೇಟೆ: ನೂತನ ವಿಜಯನಗರ ಜಿಲ್ಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 91.41 ರಷ್ಟು ಫಲಿತಾಂಶ (SSLC Result 2023) ಪಡೆದು ರಾಜ್ಯದಲ್ಲಿ ಹತ್ತನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಶೇ.86 ರಷ್ಟು ಫಲಿತಾಂಶ ಪಡೆದು, 14ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ. ಇದಕ್ಕೆ ಈ ಬಾರಿ ವಿಶೇಷ ತರಗತಿ, ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ವಿಶೇಷ ತರಬೇತಿ, ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಪಾಠ, ಬೋಧನೆ ಮಾಡಲಾಗಿದೆ. ಹಾಗಾಗಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ ಎಂದರು.

ಇದನ್ನೂ ಓದಿ: Lithium reserves : ರಾಜಸ್ಥಾನದಲ್ಲಿ ಅತಿ ದೊಡ್ಡ ಲಿಥಿಯಂ ನಿಕ್ಷೇಪ, ಆಟೊಮೊಬೈಲ್‌ ಇಂಡಸ್ಟ್ರಿಗೆ ಬಂಪರ್ ಲಾಭ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೂವಿನಹಡಗಲಿಯ ಎಂ.ಎಂ. ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಘನಾ ಪಿ. ತೋಟಗೇರಿ ಹಾಗೂ ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಧು ಎಂ. 625ಕ್ಕೆ 621 ಅಂಕಗಳನ್ನು ಗಳಿಸಿ ವಿಜಯನಗರ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ.

ಹೊಸಪೇಟೆಯ ತಿಮ್ಮಲಾಪುರದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಮನೋಜ್ ಎಲ್., ಹೂವಿನಹಡಗಲಿಯ ಎಂ.ಎಂ. ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚಿನ್ಮಯಿ ಜಿ, ಕೊಟ್ಟೂರಿನ ಶ್ರೀ ಮಹಾದೇವ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅರುಣ್‍ ಕುಮಾರ ಗುತ್ತೂರು 625ಕ್ಕೆ 620 ಅಂಕಗಳನ್ನು ಗಳಿಸಿ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್​ ವೈಮಾನಿಕ ದಾಳಿ; ಉಗ್ರ ಸಂಘಟನೆಯ ಮೂವರು ಕಮಾಂಡರ್​ಗಳು ಸೇರಿ 12 ಮಂದಿ ಸಾವು

ಕೊಟ್ಟೂರಿನ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸೃಷ್ಟಿ ಕೆ. ಮತ್ತು ಸೃಷ್ಟಿ ಕೆ.ಎಸ್. 625ಕ್ಕೆ 619 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೂರನೇ ಸ್ಥಾನ ಗಳಿಸಿದ್ದಾರೆ.

ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಂದ ದೊರೆತ ಮಾರ್ಗದರ್ಶನ, ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ದೊರೆತ ವಿಶೇಷ ತರಬೇತಿ, ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿದ್ದರ ಫಲವಾಗಿ ವಿಜಯನಗರ ಜಿಲ್ಲೆ ಅಗ್ರ ಹತ್ತನೇ ಸ್ಥಾನ ಪಡೆದಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Exit mobile version